»   » ತಮಿಳಿನಲ್ಲಿ ಕಿಚ್ಚ ಸುದೀಪ್ ವಿಲನ್ ಪಾತ್ರ ಒಪ್ಪಿದ್ದೇಕೆ?

ತಮಿಳಿನಲ್ಲಿ ಕಿಚ್ಚ ಸುದೀಪ್ ವಿಲನ್ ಪಾತ್ರ ಒಪ್ಪಿದ್ದೇಕೆ?

By: ಉದಯರವಿ
Subscribe to Filmibeat Kannada

ಈಗ ಹೀರೋಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಖಳನಟನಿಗೂ ಕೊಡಲಾಗುತ್ತಿದೆ. ಈಗಿನ ನಿರ್ದೇಶಕರ ಟ್ರೆಂಡ್ ಬದಲಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ 'ಈಗ' ಚಿತ್ರ.

ಆ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರದು ಖಳನಟನ ಪಾತ್ರವಾದರೂ ಹೀರೋಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿತ್ತು. ಈಗ ಮತ್ತೊಂದು ಅಂತಹದ್ದೇ ವಿಭಿನ್ನ ಪ್ರಯೋಗಕ್ಕೆ ಸುದೀಪ್ ಅಣಿಯಾಗಿದ್ದಾರೆ. ಈ ಬಾರಿ ಅವರು ತಮಿಳು ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. [ತಮಿಳಿನಲ್ಲಿ ಸುದೀಪ್ ಗೆ ರು.6 ಕೋಟಿ ಸಂಭಾವನೆ]

ಒಬ್ಬ ಕಲಾವಿದ ಬಯಸುವಂತಹ ಪಾತ್ರಗಳು ಸಿಗುವುದು ಬಹಳ ಅಪರೂಪ. ಆದರೆ ಆ ರೀತಿಯ ವಿಭಿನ್ನ ಪಾತ್ರಗಳನ್ನು ನೆರೆಯ ಚಿತ್ರೋದ್ಯಮಗಳು ಸುದೀಪ್ ಅವರನ್ನು ಕರೆದು ಕೊಡುತ್ತಿವೆ. ಅವರ ಕಾಲ್ ಶೀಟ್ ಗಾಗಿ ತಿಂಗಳಾನುಗಟ್ಟಲೆ ಕಾದು ಕುಳಿತು ಪಾತ್ರಗಳನ್ನು ನೀಡುತ್ತಿದ್ದಾರೆಂದರೆ ಆ ಪಾತ್ರದ ಮಹತ್ವ ಅರ್ಥವಾಗುತ್ತದೆ.

ಈಗ ವಿಲನ್ ಪಾತ್ರಗಳ ಟ್ರೆಂಡ್ ಬದಲಾಗಿದೆ

ಈಗ ತಮಿಳಿನ ಇಳಯದಳಪತಿ ಎಂದೇ ಕರೆಸಿಕೊಂಡಿರುವ ವಿಜಯ್ ಚಿತ್ರದಲ್ಲಿ ವಿಲನ್ ಆಗಿ ಸುದೀಪ್ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಅವರಿಗೆ ರು.6 ಕೋಟಿ ಸಂಭಾವನೆ ಕೊಟ್ಟಿರುವ ಸುದ್ದಿಯನ್ನು ಓದಿರುತ್ತೀರಿ. ಖಳನಟ ಎಂದರೆ ಈಗ ಯಾರೂ ಹಳೆಯ ಸಿನಿಮಾ ಶೈಲಿಯ ವಿಲನ್ ಗಳನ್ನು ಊಹಿಸಿಕೊಳ್ಳುವುದಿಲ್ಲ. ಟ್ರೆಂಡ್ ಬದಲಾಗಿದೆ. ಅದಕ್ಕೆ ತಕ್ಕಂತೆ ನಾಯಕ ನಟರು ಬದಲಾಗುತ್ತಿದ್ದಾರೆ.

ನನಗಿಷ್ಟವಾದ ಪ್ರಾಜೆಕ್ಟ್ ಗಾಗಿ ಕಾದೆ

ಈ ಬಗ್ಗೆ ಮಾತನಾಡಿರುವ ಸುದೀಪ್, "ತೆಲುಗಿನ 'ಈಗ' ಚಿತ್ರದ ಬಳಿಕ ಬಹಳಷ್ಟು ಆಫರ್ ಗಳು ಬಂದವು. ಆದರೆ ನನಗಿಷ್ಟವಾದ ಪ್ರಾಜೆಕ್ಟ್ ಗಾಗಿ ಕಾದೆ. ನನಗೇನು ಅರ್ಜೆಂಟಾಗಿ ಚಿತ್ರಗಳನ್ನು ಮಾಡಿ ಮುಗಿಸಬೇಕು ಎಂದೇನು ಇಲ್ಲ. ಶಿಂಬುದೇವನ್ ಒಂದೆರಡು ತಿಂಗಳ ಹಿಂದೆ ಒಂದು ಸ್ಕ್ರಿಪ್ಟ್ ನೊಂದಿಗೆ ಭೇಟಿಯಾದರು.."

ನನಗಾಗಿ ಅವರು ಸಾಕಷ್ಟು ಸಮಯ ಕಾದರು

...ಆಗ ನಾನು 'ಮಾಣಿಕ್ಯ' ಚಿತ್ರದಲ್ಲಿ ಬಿಜಿಯಾಗಿದ್ದೆ. ಆದರೆ ಅವರು ಬೇರೆ ಯಾರನ್ನೂ ಆ ಪಾತ್ರಕ್ಕೆ ಆಯ್ಕೆ ಮಾಡದೆ ನನಗಾಗಿ ಕಾದರು. ನನ್ನನ್ನೇ ಊಹಿಸಿಕೊಂಡು ಅವರು ಆ ಪಾತ್ರವನ್ನು ಸೃಷ್ಟಿಸಿದ್ದಾರೆ ಎಂಬುದು ಆಗ ಅರ್ಥವಾಯಿತು..." ಎಂದಿದ್ದಾರೆ ಸುದೀಪ್.

ಇದು ಐತಿಹಾಸಿಕ ಚಿತ್ರವಲ್ಲ, ಕಿಚ್ಚ ಸುದೀಪ್

ಈ ಚಿತ್ರದ ಬಗ್ಗೆ ಹೇಳುತ್ತಾ ಸುದೀಪ್, "ಅದು ಐತಿಹಾಸಿಕ ಚಿತ್ರವಲ್ಲ...ಒಂದು ಫ್ಯಾಂಟಸಿ ಚಿತ್ರ. ಒಂದು ಹೊಸ ಮಾದರಿಯದ್ದು. ನನ್ನನ್ನು ವಿಲನ್ ಮಾಡುತ್ತೇನೆ ಎಂದು ಹೇಳದೆ ಒಂದು ಉತ್ತಮ ಪಾತ್ರದ ಮೂಲಕ ಅಪ್ರೋಚ್ ಆದರು..." ಎನ್ನುತ್ತಾರೆ ತಮ್ಮ ಪಾತ್ರದ ಬಗ್ಗೆ ಕಿಚ್ಚ.

ತಮಿಳಿನಲ್ಲಿ ವಿಲನಿಜಂ ತೋರಿಸಲಿರುವ ಕಿಚ್ಚ

ಸದ್ಯಕ್ಕೆ ವಿಜಯ್ ಅವರು ಎ ಆರ್ ಮುರುಗದಾಸ್ ಆಕ್ಷನ್ ಕಟ್ ಹೇಳುತ್ತಿರುವ 'ಕತ್ತಿ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಚಿತ್ರ ಕಂಪ್ಲೀಟ್ ಆದ ಕೂಡಲೆ ಶಿಂಬುದೇವನ್ ಜೊತೆಗಿನ ಚಿತ್ರ ಸೆಟ್ಟೇರಲಿದೆ. ಈ ಚಿತ್ರದಲ್ಲಿ ಸುದೀಪ್ ತಮ್ಮ ಖಳನಟನ ಪಾತ್ರದ ಮೂಲಕ ಭಯಪಡಿಸಲಿದ್ದಾರೆ.

ವಿಶೇಷ ಪಾತ್ರದಲ್ಲಿ ಅಭಿನೇತ್ರಿ ಶ್ರೀದೇವಿ

ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶ್ರುತಿ ಹಾಸನ್ ಹಾಗೂ ಅಭಿನೇತ್ರಿ ಶ್ರೀದೇವಿ ಅವರು ಒಂದು ಪಾತ್ರವನ್ನು ಪೋಷಿಸಲಿದ್ದಾರೆ. ಈ ಚಿತ್ರದ ಮೂಲಕ ಸುದೀಪ್ ಅವರು ಮತ್ತಷ್ಟು ಪ್ರೇಕ್ಷಕರಿಗೆ ಹತ್ತಿರವಾಗಲಿದ್ದಾರೆ.

English summary
Vijay’s next film with Chimbudevan is going to include some more big names. We hear that Sandalwood star Sudeep and Sridevi have been roped in for the film. Sudeep has confirmed that he is a part of Chibudevan’s next.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada