»   » ಡಾ.ರಾಜ್ ಮೊಮ್ಮಗಳ ಸೌಂದರ್ಯಕ್ಕೆ ದಂಗಾದ ನೆಟ್ಟಿಗರು.!

ಡಾ.ರಾಜ್ ಮೊಮ್ಮಗಳ ಸೌಂದರ್ಯಕ್ಕೆ ದಂಗಾದ ನೆಟ್ಟಿಗರು.!

Posted By:
Subscribe to Filmibeat Kannada
ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿ | Oneindia Kannada

ಡಾ ರಾಜ್ ಕುಮಾರ್ ಅವರ ಕುಟುಂಬದಿಂದ ಒಬ್ಬೊಬ್ಬರೇ ಸಿನಿಮಾ ಇಂಡಸ್ಟ್ರಿ ಕಡೆ ಮುಖ ಮಾಡ್ತಿದ್ದಾರೆ. ರಾಜ್ ಪುತ್ರರ ನಂತರ ರಾಜ್ ಮೊಮ್ಮಕ್ಕಳ ಜಮಾನ ಅರಂಭವಾಗಿದೆ.

ಈಗಾಗಲೇ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಮತ್ತೊಬ್ಬ ಪುತ್ರ ಗುರು ರಾಜ್ ಕುಮಾರ್ ನಿರ್ಮಾಪಕನಾಗಿ ಕಾರ್ಯ ನರ್ವಹಿಸುತ್ತಿದ್ದಾರೆ. ಈ ಮಧ್ಯೆ ರಾಜ್ ಪುತ್ರಿ ಪೂರ್ಣಿಮಾ ಮತ್ತು ರಾಮ್ ಕುಮಾರ್ ದಂಪತಿಯ ಮಗ ಧೀರೇನ್ ರಾಮ್ ಕುಮಾರ್ ಚೊಚ್ಚಲ ಚಿತ್ರಕ್ಕೆ ಸಿದ್ದವಾಗುತ್ತಿದ್ದಾರೆ.

ಡಾ. ರಾಜ್ ಮೊಮ್ಮಗ ಧೀರನ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

ಇದರ ಬೆನ್ನಲ್ಲೇ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರನ ಮಗ ಸೂರಜ್ ಕೂಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗೆ, ಅಣ್ಣಾವ್ರ ಮೊಮ್ಮಕ್ಕಳೆಲ್ಲ ಬಣ್ಣದ ಪರದೆಯಲ್ಲಿ ಮಿಂಚಲು ಸಿದ್ದವಾಗಿರುವಾಗಲೇ, ಮೊಮ್ಮಗಳು ಕೂಡ ಚಂದನವನಕ್ಕೆ ಹಾರುವ ಸೂಚನೆ ಕೊಟ್ಟಿದ್ದಾಳೆ. ಯಾರದು.? ಮುಂದೆ ಓದಿ....

ರಾಮ್ ಕುಮಾರ್ ಮಗಳು ಧನ್ಯ

ಡಾ ರಾಜ್ ಕುಮಾರ್ ಅವರ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್ ಕುಮಾರ್ ದಂಪತಿಯ ಪುತ್ರಿ ಧನ್ಯ ರಾಮ್ ಕುಮಾರ್. ಧನ್ಯ ರಾಮ್ ಕುಮಾರ್ ಅವರ ಅಣ್ಣ ಧಿರೇನ್ ರಾಮ್ ಕುಮಾರ್ ಸಿನಿಮಾ ಪ್ರವೇಶ ಮಾಡಲು ಸಜ್ಜಾಗಿದ್ದು, ಫೋಟೋಶೂಟ್ ಮಾಡಿಸಿದ್ದರು. ಇದೀಗ, ಅಣ್ಣನಿಗೆ ಕಾಂಪಿಟೇಶನ್ ಕೊಟ್ಟಿರುವ ರೀತಿಯಲ್ಲಿ ಧನ್ಯ ಫೋಟೋಶೂಟ್ ಮಾಡಿಸಿರುವ ಫೋಟೋಗಳು ಹರಿದಾಡುತ್ತಿದೆ.

ಸಿನಿಮಾಗೆ ಎಂಟ್ರಿ ಕೊಡ್ತಾರ ರಾಜ್ ಮೊಮ್ಮಗಳು

ವಿಭಿನ್ನ, ವಿಶೇಷವಾಗಿ ಫೋಟೋಶೂಟ್ ಮಾಡಿಸಿರುವ ಧನ್ಯ ರಾಮ್ ಕುಮಾರ್ ಬಹುಶಃ ಚಿತ್ರರಂಗಕ್ಕೆ ಧುಮುಕುವ ತಯಾರಿ ಮಾಡಿರಬಹುದು ಎಂಬ ಕುತೂಹಲ ಕಾಡುತ್ತಿದೆ. ಯಾಕಂದ್ರೆ, ಧನ್ಯ ಅವರ ಫೋಟೋಗಳು ಅಷ್ಟರ ಮಟ್ಟಿಗೆ ಮೋಡಿ ಮಾಡುತ್ತಿದೆ. ಈ ಫೋಟೋಗಳನ್ನ ನೋಡಿದವರು ವಾವ್ಹ್...ಹೀರೋಯಿನ್ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಹಾಟ್ ಲುಕ್ ನಲ್ಲಿ ಧನ್ಯ ಮಿಂಚು

ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಧನ್ಯ ರಾಮ್ ಕುಮಾರ್ ಅವರ ಫೋಟೋಗಳು ಪಕ್ಕಾ ಗ್ಲಾಮರ್ ಆಗಿವೆ. ಒಂದಕ್ಕಿಂತ ಒಂದು ಬೋಲ್ಡ್ ಆಗಿವೆ. ಪಾರ್ಟಿ ಗರ್ಲ್ ಸ್ಟೈಲ್ ನಲ್ಲಿ ರಾಜ್ ಮೊಮ್ಮಗಳು ಮಿಂಚಿದ್ದಾರೆ.

ಇವರು ಸ್ಯಾಂಡಲ್ ವುಡ್ ನ ರಣವೀರ್ ಸಿಂಗ್

ದರ್ಶನ್ ಸಿನಿಮಾದಲ್ಲಿ ನಟನೆ.!

ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರದಲ್ಲಿ ಧನ್ಯ ರಾಮ್ ಕುಮಾರ್ ನಾಯಕಿಯಾಗಿ ನಟಿಸಿಲಿದ್ದಾರೆ ಎನ್ನಲಾಗಿದೆ. ಆದ್ರೆ, ಇದು ಯಾವುದು ಖಚಿತವಾಗಿಲ್ಲ. ಈ ಫೋಟೋಗಳನ್ನ ನೋಡಿದ ನಂತರ ಈ ರೀತಿಯಾದ ಸುದ್ದಿಗಳು ಹಬ್ಬಿವೆ.

'ದೊಡ್ಮನೆ ಹುಡುಗ'ನ ಬೆನ್ನಿಗೆ ನಿಂತಿರುವ 'ಯಜಮಾನ' ದರ್ಶನ್

ಕೆಟ್ಟ ಕಾಮೆಂಟ್ ಗಳು ಬರ್ತಿವೆ

ಡಾ ರಾಜ್ ಕುಮಾರ್ ಅಂತಹ ಕುಟುಂಬದಿಂದ ಬಂದಿರುವ ಧನ್ಯ ರಾಮ್ ಕುಮಾರ್ ಸಂಪ್ರದಾಯವಾಗಿ ಕಾಣಿಸಿಕೊಳ್ಳಬೇಕು ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಆದ್ರೆ, ಧನ್ಯ ಅವರು ಪಕ್ಕಾ ಪಾರ್ಟಿ ಸ್ಟೈಲ್ ನಲ್ಲಿ, ತುಂಡು ಬಟ್ಟೆಗಳನ್ನ ತೊಟ್ಟು ಮಾಡ್ರನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಸಹಜವಾಗಿ ರಾಜ್ ಭಕ್ತರಿಗೆ ಬೇಸರ ತರಿಸಿದೆ.

ನಾಯಕಿ ಆಗ್ತಾರ.?

ಸದ್ಯ, ರಾಮ್ ಕುಮಾರ್ ಅವರ ಮಗ ಧೀರೇನ್ ರಾಮ್ ಕುಮಾರ್ ನಾಯಕನಾಗಿ ಎಂಟ್ರಿ ಕೊಡಲು ಸಿದ್ದವಾಗಿದ್ದಾರೆ. ಇದಕ್ಕು ಮುಂಚೆಯೇ ಧನ್ಯ ಸ್ಯಾಂಡಲ್ ವುಡ್ ಗೆ ಬಂದು ಬಿಡ್ತಾರ ಎಂಬ ನಿರೀಕ್ಷೆ, ಕುತೂಹಲ ಎದುರಾಗಿದೆ. ಒಂದು ವೇಳೆ ಸಿನಿಮಾ ಮಾಡಿದ್ರು, ಯಾವ ಚಿತ್ರದಲ್ಲಿ ಅಭಿನಯಿಸ್ತಾರೆ.? ಯಾರ ಜೊತೆ ಸಿನಿಮಾ ಮಾಡ್ತಾರೆ ಎಂದು ಕಾದುನೋಡಬೇಕಿದೆ.

English summary
Dr. Raj Kumar's granddaughter dhanya Ram Kumar new photos are flowing in the social networking site. Maybe preparing to enter Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada