»   » ಶಿವಣ್ಣನ ಆಸೆ ಈಡೇರುತ್ತಾ.? 'ಕುರುಕ್ಷೇತ್ರ'ದಲ್ಲಿ ಸೆಂಚುರಿ ಸ್ಟಾರ್ 'ಅರ್ಜುನ'.?

ಶಿವಣ್ಣನ ಆಸೆ ಈಡೇರುತ್ತಾ.? 'ಕುರುಕ್ಷೇತ್ರ'ದಲ್ಲಿ ಸೆಂಚುರಿ ಸ್ಟಾರ್ 'ಅರ್ಜುನ'.?

Posted By:
Subscribe to Filmibeat Kannada

''ದರ್ಶನ್ ಜೊತೆ ಸಿನಿಮಾ ಮಾಡಬೇಕು ಅಂದ್ರೆ ಖಂಡಿತ ಮಾಡುತ್ತೇನೆ'' ಎಂದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಮನದಾಳವನ್ನ ಹೊರಹಾಕಿದ್ದರು.

'ಡಿ' ಬಾಸ್ ದರ್ಶನ್ ಜೊತೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ ಶಿವಣ್ಣ.!

ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡುವ ಶಿವರಾಜ್ ಕುಮಾರ್ ರವರ ಆಸೆ ಇದೀಗ ಈಡೇರುವ ಹಾಗೆ ಕಾಣುತ್ತಿದೆ. ಅದಕ್ಕೆ ಸಾಕ್ಷಿ ಗಾಂಧಿನಗರದಲ್ಲಿ ಸದ್ಯ ಕೇಳಿ ಬರುತ್ತಿರುವ ಹೊಸ ನ್ಯೂಸ್. ವಿವರ ಫೋಟೋ ಸ್ಲೈಡ್ ಗಳಲ್ಲಿ....

ಏನದು ಹೊಸ ನ್ಯೂಸ್.?

'ಕುರುಕ್ಷೇತ್ರ' ಚಿತ್ರದ 'ಅರ್ಜುನ' ಪಾತ್ರದಲ್ಲಿ ನಟಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರಿಗೆ ಆಹ್ವಾನ ನೀಡಲಾಗಿದೆ ಎಂಬುದು ಗಾಂಧಿನಗರದ ಲೇಟೆಸ್ಟ್ ಗುಲ್ಲು.

ಹೇಗಿದ್ದರೂ ಶಿವಣ್ಣನಿಗೆ ಆಸೆ ಇದೆ

'ದರ್ಶನ್ ಜೊತೆ ನಟಿಸುವ ಆಸೆ ಇದೆ' ಅಂತ ಶಿವಣ್ಣ ಈಗಾಗಲೇ ಹೇಳಾಗಿದೆ. ಅಂದ್ಮೇಲೆ, 'ಕುರುಕ್ಷೇತ್ರ' ಚಿತ್ರಕ್ಕಾಗಿ ಆಹ್ವಾನ ಬಂದಿದ್ದೇ ಆದಲ್ಲಿ, ಶಿವಣ್ಣ 'ನೋ' ಎನ್ನಲು ಸಾಧ್ಯ ಇಲ್ಲ ಅನ್ನೋದು ಗಾಂಧಿನಗರದ ಪಂಡಿತರ ಅಭಿಪ್ರಾಯ.

ಆದರೆ, ಶಿವಣ್ಣ ಬಿಜಿ ಇದ್ದಾರಲ್ಲ.!

'ಕುರುಕ್ಷೇತ್ರ' ಸಿನಿಮಾ ಶೂಟಿಂಗ್ ಇನ್ನೂ ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಆದ್ರೆ, ಶಿವಣ್ಣ ಫ್ರೀ ಇರಬೇಕಲ್ವಾ.? 'ಟಗರು' ಹಾಗೂ 'ದಿ ವಿಲನ್' ಚಿತ್ರದ ಶೂಟಿಂಗ್ ನಲ್ಲಿ ಶಿವಣ್ಣ ಬಿಜಿಯಾಗಿದ್ದಾರೆ. ಹೀಗಿರುವಾಗ, 'ಕುರುಕ್ಷೇತ್ರ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡ್ತಾರಾ ಅನ್ನೋದು ಕೆಲವರ ಪ್ರಶ್ನೆ.

ಸದ್ಯಕ್ಕೆ ಎಲ್ಲವೂ ಗಾಸಿಪ್ ಅಷ್ಟೇ.!

ಅಷ್ಟಕ್ಕೂ, 'ಕುರುಕ್ಷೇತ್ರ' ಚಿತ್ರದಲ್ಲಿ 'ಅರ್ಜುನ'ನಾಗಿ ಕಾಣಿಸಿಕೊಳ್ಳಲು ಶಿವಣ್ಣನಿಗೆ ಆಫರ್ ನೀಡಿರುವ ಬಗ್ಗೆ ಚಿತ್ರತಂಡ ಎಲ್ಲೂ ಹೇಳಿಕೊಂಡಿಲ್ಲ. ಸದ್ಯಕ್ಕೆ ಇಂತಹ ಸುದ್ದಿ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ. ಒಂದು ವೇಳೆ ಈ ಸುದ್ದಿ ನಿಜ ಆದರೆ ಸೆಂಚುರಿ ಸ್ಟಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಖಂಡಿತ ಖುಷಿ ನೀಡುತ್ತೆ.

ಸದ್ಯದಲ್ಲಿಯೇ ಕ್ಲಾರಿಟಿ ಸಿಗಲಿದೆ.!

'ಕುರುಕ್ಷೇತ್ರ' ಚಿತ್ರದಲ್ಲಿ ಈ ಪಾತ್ರಕ್ಕೆ ಇವರಂತೆ, ಆ ಪಾತ್ರಕ್ಕೆ ಅವರಂತೆ ಎಂಬ ಸುದ್ದಿ ಪ್ರತಿದಿನ ಕೇಳಿಬರುತ್ತಿದೆ. ಎಲ್ಲದಕ್ಕೂ ಕ್ಲಾರಿಟಿ ಸಿಗಬೇಕು ಅಂದ್ರೆ ಆಗಸ್ಟ್ 6 ರವರೆಗೆ ಕಾಯಲೇಬೇಕು. ಯಾಕಂದ್ರೆ, ತಾರಾಗಣದ ಫೈನಲ್ ಲಿಸ್ಟ್ ಅಂದೇ ಬಿಡುಗಡೆ ಆಗುವ ಸಾಧ್ಯತೆ ಇದೆ.

English summary
Will Shiva Rajkumar play Arjuna in Kannada Movie 'Kurukshetra'?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada