»   » 'ದಯವಿಟ್ಟು ಗಮನಿಸಿ' ವಿಶಿಷ್ಟ ಚಿತ್ರಕ್ಕೆ ಮುಹೂರ್ತ ಆಯ್ತು

'ದಯವಿಟ್ಟು ಗಮನಿಸಿ' ವಿಶಿಷ್ಟ ಚಿತ್ರಕ್ಕೆ ಮುಹೂರ್ತ ಆಯ್ತು

Posted By:
Subscribe to Filmibeat Kannada

'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಭಯಂಕರ ಗಯ್ಯಾಳಿಯಾಗಿ ನಟಿಸಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ನಟಿ ಸುಕೃತಾ ವಾಗ್ಲೆ ತದನಂತರ ಗಾಂಧಿನಗರದಿಂದ ನಾಪತ್ತೆಯಾಗಿದ್ದರು.

ಇದೀಗ ಮತ್ತೆ ಸುಕೃತಾ ಅವರು ಮತ್ತೊಂದು ಸದಭಿರುಚಿಯ ಚಿತ್ರದ ಮೂಲಕ ದಿಢೀರ್ ಪ್ರತ್ಯಕ್ಷ ಆಗಿದ್ದಾರೆ. ಹೌದು 'ಆಟಗಾರ' ಚಿತ್ರಕ್ಕೆ ಡೈಲಾಗ್ ಬರೆದಿದ್ದ ರೋಹಿತ್ ಫದಕಿ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್-ಕಟ್ ಹೇಳುತ್ತಿರುವ ಹೊಸ ಚಿತ್ರ 'ದಯವಿಟ್ಟು ಗಮನಿಸಿ' ಯಲ್ಲಿ ಸುಕೃತಾ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.[ವಿಮರ್ಶೆ: 'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು]

Writer Rohit Padaki turns director with a Multi Starrer's next

'ದಯವಿಟ್ಟು ಗಮನಿಸಿ' ಮಲ್ಟಿಸ್ಟಾರರ್ ಸಿನಿಮಾ ಆಗಿದ್ದು, ಈಗಾಗಲೇ ಚಿತ್ರದ ಮುಹೂರ್ತ ನೆರವೇರಿದೆ. ನಾಲ್ಕು ವಿಭಿನ್ನ ಟ್ರ್ಯಾಕ್ ಗಳು ಕೊನೆಗೆ ಒಂದೆಡೆ ಸೇರುವ ವಿಶಿಷ್ಟ ಕಥೆಯುಳ್ಳ 'ದಯವಿಟ್ಟು ಗಮನಿಸಿ' ಚಿತ್ರದಲ್ಲಿ ಸುಕೃತಾ ವಾಗ್ಲೆ, ಸಂಯುಕ್ತ ಬೆಳವಾಡಿ, ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ್, ವಶಿಷ್ಟ ಎಸ್ ಸಿಂಹ, ರಘು ಮುಖರ್ಜಿ ಮುಂತಾದವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಸೋಮವಾರದಿಂದ (ಜೂನ್ 27) ಚಿತ್ರದ ಚಿತ್ರೀಕರಣ ಆರಂಭವಾಗುತ್ತಿದ್ದು, ಕೃಷ್ಣ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಪಕ ಕೃಷ್ಣ ಸಾರ್ಥಕ್ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅವರು ಮ್ಯೂಸಿಕ್ ಕಂಪೋಸ್ ಜೊತೆಗೆ ಚಿತ್ರದ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತಿದ್ದಾರೆ.

ಒಟ್ನಲ್ಲಿ 'ಕಿರಗೂರಿನ ಗಯ್ಯಾಳಿಗಳು', 'ತಿಥಿ', ಮತ್ತು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಂತರ ಮತ್ತೊಂದು ಸದಭಿರುಚಿಯ ಸಿನಿಮಾ ಬರ್ತಾ ಇದೆ ಅಂತ ಫುಲ್ ಖುಷ್ ನಲ್ಲಿದ್ದಾರೆ ಚಿತ್ರಪ್ರೇಮಿಗಳು.

-ದಯವಿಟ್ಟು ಗಮನಿಸಿ ಚಿತ್ರದ ಮುಹೂರ್ತ

-ದಯವಿಟ್ಟು ಗಮನಿಸಿ ಚಿತ್ರದ ಮುಹೂರ್ತ

-ದಯವಿಟ್ಟು ಗಮನಿಸಿ ಚಿತ್ರದ ಮುಹೂರ್ತ

-ದಯವಿಟ್ಟು ಗಮನಿಸಿ ಚಿತ್ರದ ಮುಹೂರ್ತ

-ನಟಿ ಸುಕೃತ ವಾಗ್ಲೆ

-ನಟಿ ಸುಕೃತ ವಾಗ್ಲೆ

-ನಟಿ ಸಂಯುಕ್ತ ಬೆಳವಾಡಿ

-ನಟಿ ಸಂಯುಕ್ತ ಬೆಳವಾಡಿ

-ನಟ ಪ್ರಕಾಶ್ ಬೆಳವಾಡಿ

-ನಟ ಪ್ರಕಾಶ್ ಬೆಳವಾಡಿ

-ನಟ ರಘು ಮುಖರ್ಜಿ

-ನಟ ರಘು ಮುಖರ್ಜಿ

-ನಟ ರಾಜೇಶ್ ನಟರಂಗ್

-ನಟ ರಾಜೇಶ್ ನಟರಂಗ್

-ನಟ ವಸಿಷ್ಟ ಎನ್ ಸಿಂಹ

-ನಟ ವಸಿಷ್ಟ ಎನ್ ಸಿಂಹ

English summary
Actor-Writer Rohit Padaki fame of Kannada movie 'Aatagara', is all set to turn director. Titled 'Dayavittu Gamanisi', this is a multi-starrer movie. Kannada Actress Sukrutha Wagle, Kannada Actress Samyuktha Belawadi, Kannada Actor Raghu Mukherjee, Actor Prakash Belavadi in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada