Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇಂದು ದರ್ಶನ್ ಫ್ಯಾನ್ಸ್ ಗೆ ಒಂದು ಕಹಿ ಸುದ್ದಿ, ಮತ್ತೊಂದು ಸಿಹಿ ಸುದ್ದಿ

ನಟ ದರ್ಶನ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಗಿದ್ದು, ಸದ್ಯ ಅವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಈ ಕಹಿ ಸುದ್ದಿಯ ಜೊತೆಗೂ ಒಂದು ಸಿಹಿ ಸುದ್ದಿ ಸಿಕ್ಕಿದೆ.
ದರ್ಶನ್ ಆಸ್ಪತ್ರೆಯಲ್ಲಿದರೂ 'ಯಜಮಾನ' ಸಿನಿಮಾದ ಮೋಷನ್ ಪೋಸ್ಟರ್ ವಿಡಿಯೋ ನಂಬರ್ 1 ಸ್ಥಾನದಲ್ಲಿದೆ. ಹೌದು, ಕಳೆದ ಶನಿವಾರ ದರ್ಶನ್ ನಟನೆಯ ಹೊಸ ಸಿನಿಮಾ 'ಯಜಮಾನ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಮೋಷನ್ ಪೋಸ್ಟರ್ ಈಗ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ವಿಡಿಯೋ ಆಗಿದೆ.
ದರ್ಶನ್ ಅಪಘಾತದ ಬಗ್ಗೆ ಪತ್ನಿ ವಿಜಯಲಕ್ಷ್ಮಿ ನೀಡಿದ ಪ್ರತಿಕ್ರಿಯೆ
ಅಂದಹಾಗೆ, ಸದ್ಯ ಟ್ರೆಂಡ್ ಸೃಷ್ಟಿ ಮಾಡಿರುವ 'ಯಜಮಾನ' ಸಿನಿಮಾದ ಕೆಲ ವಿವರಗಳ ಮುಂದಿವೆ ಓದಿ...

'ಯಜಮಾನ' ನಂಬರ್ 1
ಅಪಘಾತದಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಅದು ದರ್ಶನ್ ಕ್ರೇಜ್ ಗೆ ತಡೆಯಾಗಿಲ್ಲ. ದರ್ಶನ್ ಅವರ 'ಯಜಮಾನ' ಚಿತ್ರದ ಮೋಷನ್ ಪೋಸ್ಟರ್ ಈಗ ಸೂಪರ್ ಹಿಟ್ ಆಗಿದೆ. ಬೇರೆ ಭಾಷೆಯ ಟೀಸರ್, ಟ್ರೇಲರ್, ಹಾಡುಗಳನ್ನು ಹಿಂದೆ ಹಾಕಿ 'ಯಜಮಾನ' ಮೊದಲ ಸ್ಥಾನದಲ್ಲಿ ಕುಳಿತುಕೊಂಡಿದ್ದಾನೆ.

ಮೋಷನ್ ಪೋಸ್ಟರ್ ನಲ್ಲಿ ದರ್ಶನ್ ವರ್ಣನೆ
ಈಗಾಗಲೇ ಈ ಮೋಷನ್ ಪೋಸ್ಟರ್ ಅನ್ನು ಏಳು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಮೂರು ದಿನಗಳಿಂದ ಟ್ವಿಟ್ಟರ್, ಫೇಸ್ ಬುಕ್, ಯೂ ಟ್ಯೂಬ್ ಎಲ್ಲ ಕಡೆ 'ಯಜಮಾನ' ದರ್ಬಾರ್ ಮಾಡುತ್ತಿದ್ದಾನೆ. 'ಭೂಮಿ ತೂಕದ ಆನೆ, ಬೆಳೆದ ತನ್ನಿಂದ ತಾನೆ, ಕೂಗಿ ಹೇಳಿತು ಜಮಾನ, ಅಭಿಮಾನಿಗಳ ಸುಲ್ತಾನ' ಎಂದು 'ಯಜಮಾನ'ನನ್ನು ಇಲ್ಲಿ ವರ್ಣಿಸಲಾಗಿದೆ.
ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ದರ್ಶನ್ ಮಾತನ್ನು ಒಮ್ಮೆ ಕೇಳಿಸಿಕೊಳ್ಳಿ!

ಚಿತ್ರದಲ್ಲಿ ದರ್ಶನ್ ಪುತ್ರ ವಿನೀಶ್ ನಟನೆ
ಅಂದಹಾಗೆ, 'ಯಜಮಾನ' ನಟ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ. ಇಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪೆ ಸಿನಿಮಾದ ನಾಯಕಿಯರಾಗಿದ್ದಾರೆ. ವಿಶೇಷ ಅಂದರೆ, ದರ್ಶನ್ ಪುತ್ರ ವಿನೀಶ್ ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಿ ಸುರೇಶ್ ಬ್ಯಾನರ್ ಚಿತ್ರ
ಈ ಸಿನಿಮಾವನ್ನು ಪಿ ಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು 'ವಿಷ್ಣುವರ್ಧನ' ಸೇರಿದಂತೆ ಕೆಲ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾದ ಚಿತ್ರೀಕರಣ ಬಹುತೇಕ ಕೊನೆಯ ಹಂತದಲ್ಲಿದೆ. ಬಿ ಸುರೇಶ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.
ಕೂಗಿ ಹೇಳಿತು ಜಮಾನ, ಇವನೇ ನಮ್ಮ 'ಯಜಮಾನ'

ಆರೋಗ್ಯದ ಬಗ್ಗೆ ದರ್ಶನ್ ನೀಡಿದ ಸ್ಪಷ್ಟನೆ
ಅಂದಹಾಗೆ, ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿರುವ ದರ್ಶನ್ ''ನಿಮ್ಮ ದಯೆಯಿಂದ ನಾನು ಆರಾಮಾಗಿದ್ದೇನೆ. ನನಗೆ ಏನು ಆಗಿಲ್ಲ. ದಯವಿಟ್ಟು ಆಸ್ಪತ್ರೆಗೆ ಯಾರು ಬರಬೇಡಿ. ಇದು ನನ್ನ ಮನವಿ ಅಂತ ತಿಳಿದುಕೊಳ್ಳಿ. ಆಸ್ಪತ್ರೆಯಲ್ಲಿ ಇರುವ ಬೇರೆಯರಿಗೆ ನಮ್ಮಿಂದ ತೊಂದರೆ ಆಗಬಾರದು. ಇಂದು ಸಂಜೆ ಅಥವಾ ನಾಳೆ ನಿಮ್ಮ ಮುಂದೆ ನಾನೇ ಬರುತ್ತೇನೆ'' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.