For Quick Alerts
  ALLOW NOTIFICATIONS  
  For Daily Alerts

  'ಯಜಮಾನ' ಚಿತ್ರಕ್ಕೆ ಸಾಥ್ ನೀಡಿದ ಕಾರ್ತಿಕ್ ಗೌಡ

  |

  'ಯಜಮಾನ' ಸಿನಿಮಾದ 'ಬಸಣ್ಣಿ ಬಾ..' ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ದರ್ಶನ್ ಅಭಿಮಾನಿಗಳು ಮೂರು ಹಾಡುಗಳ ನಂತರ ನಾಲ್ಕನೇ ಹಾಡಿನ ನಿರೀಕ್ಷೆ ಇದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಜೊತೆಗೆ ಸಿನಿಮಾ ಬಿಡುಗಡೆಯ ಬಗ್ಗೆ ಒಂದು ವಿವರ ಇದೀಗ ತಿಳಿದಿದೆ.

  'ಯಜಮಾನ' ಸಿನಿಮಾದ ವಿತರಣೆಯನ್ನು ಕಾರ್ತಿಕ್ ಗೌಡ ವಹಿಸಿಕೊಂಡಿದ್ದಾರೆ. ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಕೆ.ಆರ್.ಜಿ ಸ್ಟೂಡಿಯೋ ಮೂಲಕ ಸಿನಿಮಾದ ಹಂಚಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಾರ್ತಿಕ್ ಗೌಡ ಮಾಹಿತಿ ನೀಡಿದ್ದಾರೆ.

  'ಯಜಮಾನ' ದರ್ಶನ್, ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ನಟನೆಯ ಸಿನಿಮಾವಾಗಿದೆ. ಈಗಾಗಲೇ ಸಿನಿಮಾದ ಮೂರು ಹಾಡುಗಳು ಹಿಟ್ ಆಗಿವೆ. ಟ್ರೇಲರ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

  ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಶನ್ ನಲ್ಲಿ ಬರುತ್ತಿರುವ 25 ನೇ ಸಿನಿಮಾ ಇದಾಗಿದೆ. ವಿಶೇಷ ಅಂದರೆ, ಮ್ಯೂಸಿಕ್ ಜೊತೆಗೆ ಮೊದಲ ಬಾರಿಗೆ ಹರಿಕೃಷ್ಣ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಬಿ ಸುರೇಶ್ ತಮ್ಮ ಬ್ಯಾನರ್ ನಲ್ಲಿ ಚಿತ್ರದ ನಿರ್ಮಾಣ ಮಾಡಿದ್ದಾರೆ.

  English summary
  Kannada actor Darshan starrer 'Yajamana' movie will be distributing by Karthik Gowda. The movie is produced by Shailaja Nag. P.Kumar and V Harikrishana have directed this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X