ಅಮೇರಿಕಾದಲ್ಲಿ ಕ್ಯಾಪ್ಟನ್‌ನೊಂದಿಗೆ ಯಜಮಾನ

By ಶ್ರೀಶೈಲ

Recommended Video

Yajamana Movie: ಅಮೇರಿಕಾದಲ್ಲಿ ಕ್ಯಾಪ್ಟನ್‌ನೊಂದಿಗೆ ಯಜಮಾನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಯಜಮಾನ ಚಿತ್ರ ಇದೇ ಶುಕ್ರವಾರದಂದು ಭಾರತಾದಾದ್ಯಂತ ತೆರೆಕಾಣಲಿದೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳು ಯ್ಯೂಟ್ಯೂಬ್ ವೀಕ್ಷಣೆಯಲ್ಲಿ ಈಗಾಗಲೇ ಹೊಸ ದಾಖಲೆಗಳನ್ನು ಬರೆದಿವೆ.

ಹಲವು ಹೊಸತುಗಳಿಗೆ ಸಾಕ್ಷಿಯಾಗಲಿರುವ ಯಜಮಾನ ಇದೇ ಮೊದಲ ಬಾರಿಗೆ ಆಂಧ್ರದ ಅನಂತಪುರದಲ್ಲಿ ಮೊದಲ ದಿನವೇ ಪ್ರದರ್ಶನಗೊಳ್ಳಲಿದೆ. ಇದಕ್ಕೂ ಮುಂಚೆ ಕನ್ನಡ ಚಿತ್ರಗಳು ಆಂಧ್ರದಲ್ಲಿ ಮುಖ್ಯವಾಗಿ ಹೈದರಾಬಾದಿನಲ್ಲಿ ಮಾತ್ರ ಬಿಡುಗಡೆಗೊಳ್ಳುತ್ತಿದ್ದವು.

ಈಗಾಗಲೇ ಕನ್ನಡ ಚಿತ್ರಗಳು ಭಾರತವನ್ನು ದಾಟಿ ಹೊರ ದೇಶಗಳಲ್ಲಿ ಕೂಡ ಉತ್ತಮ ಪ್ರದರ್ಶನ ಕಾಣುತ್ತಿವೆ. ಯಜಮಾನ ಚಿತ್ರತಂಡ ಕೂಡ ಅಮೇರಿಕಾದ ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ.

Yajamana releasing in USA and Canada on march 8th

ಅಮೇರಿಕಾದಲ್ಲಿ ಒಂದು ವಾರದ ನಂತರ ಯಜಮಾನ ದರ್ಶನ

ಹೌದು, ಮಾರ್ಚ 1 ರಂದು ಭಾರತದಲ್ಲಿ ಯಜಮಾನನ ಆರ್ಭಟ ಶುರುವಾದರೆ, ಅಮೇರಿಕಾದಲ್ಲಿ ಮಾತ್ರ ಒಂದು ವಾರ ತಡವಾಗಿ ಮಾರ್ಚ್ 8 ರಂದು ಚಿತ್ರ ತೆರೆಕಾಣಲಿದೆ. ಈಗಾಗಲೇ ಚಿತ್ರತಂಡ ಥೀಯೇಟರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಮೇರಿಕಾ ಮತ್ತು ಕೆನಡಾದಲ್ಲಿ ವಿಕೇಂಡ್ ಸಿನಿಮಾ ಚಿತ್ರವನ್ನು ಬಿಡುಗಡೆ ಮಾಡಲಿದೆ. ಅಮೇರಿಕಾದ ಶಿಕಾಗೋ, ಡಲ್ಲಾಸ್,ಲಾಸ್ ಎಂಜಲೀಸ್,ಸೀಟಲ್ ಮುಂತಾದ ಪ್ರಮುಖ ನಗರಗಳಲ್ಲಿ ಯಜಮಾನ ತೆರೆಕಾಣಲಿದ್ದಾನೆ.

Yajamana releasing in USA and Canada on march 8th

ಕ್ಯಾಪ್ಟನ್ ಮಾರ್ವೆಲ್ ಚಿತ್ರದೊಡನೆ ಯಜಮಾನ ತೆರೆಗೆ

ನಿಮಗೆಲ್ಲಾ ಗೊತ್ತಿರುವ ಹಾಗೇ ಅಮೇರಿಕಾದ ಮಾರ್ವೆಲ್ ಸಂಸ್ಥೆ ಸೂಪರ್ ಹಿರೋ ಚಿತ್ರಗಳ ನಿರ್ಮಾಣದಲ್ಲಿ ಪ್ರಸಿದ್ಧಿಯಾಗಿದೆ. ಈ ಸಂಸ್ಥೆ ಅಡಿಯಲ್ಲಿ ಅವೇಂಜರ್ ಸರಣಿ ಚಿತ್ರಗಳು, ಕ್ಯಾಪ್ಟನ್ ಅಮೇರಿಕಾ, ಐರನ್ ಮ್ಯಾನ್,ಹಲ್ಕ್ ಮುಂತಾದ ಚಿತ್ರಗಳು ತೆರೆಗೆ ಬಂದಿವೆ.

ಇದೇ ಮಾರ್ಚ 8 ರಂದು ಈ ಸಂಸ್ಥೆಯ ಕ್ಯಾಪ್ಟನ್ ಮಾರ್ವೆಲ್ ಚಿತ್ರ ಕೂಡ ವಿಶ್ವಾದ್ಯಂತ ತೆರೆಗೆ ಬರಲಿದೆ. ಯಜಮಾನ ಚಿತ್ರದ ಅಮೇರಿಕಾದಲ್ಲಿ ಈ ಚಿತ್ರದ ಜೊತೆಗೆ ತೆರೆಗೆ ಬರುತ್ತಿರುವುದು ವಿಶೇಷ. ಯಜಮಾನ ಚಿತ್ರದ ಅಂತರಾಷ್ಟ್ರೀಯ ಗಳಿಕೆಯಲ್ಲಿ ಈ ಚಿತ್ರ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿದರೂ ಬೀರಬಹುದು.

More from Filmibeat

English summary
Challenging Star Darshan Yajamana releasing in USA and Canada on March 8, One week later than India. Marvel's Captain Marvel film is also releasing on same day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X