'ಪೈಲ್ವಾನ್' ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು ಈ ಇಬ್ಬರು ನಟರು
Recommended Video
'ಪೈಲ್ವಾನ್' ಬಿಡುಗಡೆಯಾಗಿ 50 ದಿನಗಳನ್ನು ಪೂರೈಸಿದೆ. ಈ ಸಿನಿಮಾ ಯಶಸ್ವಿಯಾಗಲು ಸುದೀಪ್ ಜೊತೆಗೆ ಕನ್ನಡದ ಇಬ್ಬರು ನಟರೂ ಸಹ ಕಾರಣರಾಗಿದ್ದಾರೆ. ಈ ನಟರಿಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ಧನ್ಯವಾದ ಹೇಳಿದ್ದಾರೆ.
ನಟ ಯಶ್ ಹಾಗೂ ನಿಖಿಲ್ ಕುಮಾರ್ 'ಪೈಲ್ವಾನ್' ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು. ಬಿಡುಗಡೆ ಸಮಯದಲ್ಲಿ ಹಣಕಾಸಿನ ಸಮಸ್ಯೆ ಬಂದಾಗ ನಿರ್ದೇಶಕ ಕೃಷ್ಣ ಜೊತೆಗೆ ಯಶ್ ಹಾಗೂ ನಿಖಿಲ್ ಕುಮಾರ್ ನಿಂತರು. ಆ ಸಮಯದಲ್ಲಿ ಈ ಇಬ್ಬರು ನಟರು ಹಣಕಾಸಿನ ಸಹಾಯ ಮಾಡಿದ್ದು, ಸಿನಿಮಾ ಬಿಡುಗಡೆ ಸರಿಯಾಗಿ ಆಯ್ತು.

ಒಬ್ಬ ಟೆಕ್ನಿಷಿಯನ್ ಅನ್ನು ನಂಬಿ ಸಿನಿಮಾಗೆ ಹಣ ಸಹಾಯ ಮಾಡಿದ ಯಶ್ ಹಾಗೂ ನಿಖಿಲ್ ಕುಮಾರ್ ರಿಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಥ್ಯಾಂಕ್ಯು ಹೇಳಿದ್ದಾರೆ. ಒಬ್ಬ ನಟನ ಸಿನಿಮಾಗೆ ಇನ್ನೊಬ್ಬ ನಟರು ಈ ರೀತಿ ಸಹಾಯ ಮಾಡುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ.

ಅಂದಹಾಗೆ, ಈ ಹಿಂದೆ ನಟ ಯಶ್ ರಿಗೆ ಕೃಷ್ಣ 'ಗಜ ಕೇಸರಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಕ್ಯಾಮರಾ ಮ್ಯಾನ್ ಆಗಿದ್ದ ಕೃಷ್ಣ ಇದೇ ಸಿನಿಮಾದಿಂದ ಡೈರೆಕ್ಟರ್ ಆದರು.
ಇನ್ನು ಕೃಷ್ಣ ತಮ್ಮ ಮುಂದಿನ ಸಿನಿಮಾವನ್ನು ನಿಖಿಲ್ ಕುಮಾರ್ ಜೊತೆಗೆ ಮಾಡುತ್ತಿದ್ದಾರೆ. ಈ ಸಿನಿಮಾ ನಿಖಿಲ್ ನಟನೆಯ ನಾಲ್ಕನೇ ಸಿನಿಮಾವಾಗಿದೆ.


Click it and Unblock the Notifications











