»   » ದಶಕದ ಸಂಭ್ರಮದಲ್ಲಿ ಯಶ್ - ರಾಧಿಕಾ ಪಂಡಿತ್ ಜೋಡಿ

ದಶಕದ ಸಂಭ್ರಮದಲ್ಲಿ ಯಶ್ - ರಾಧಿಕಾ ಪಂಡಿತ್ ಜೋಡಿ

By Pavithra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  ಯಾಕಿಷ್ಟು ಖುಷಿಯಾಗಿದ್ದಾರೆ ಯಶ್-ರಾಧಿಕಾ..? | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸಿನಿಮಾರಂಗದಲ್ಲಿ ತಮ್ಮದೇ ಆದ ಫ್ಯಾನ್ಸ್ ಫಾಲೋವರ್ಸ್ ಹೊಂದಿರುವ ಕಲಾವಿದರು. ಅದಷ್ಟೇ ಅಲ್ಲದೆ ಇಬ್ಬರೂ ಕೂಡ ಚಿತ್ರರಂಗದ ಜನರ ಬಳಿ ಉತ್ತಮ ಬಾಂದವ್ಯ ಹೊಂದಿರುವವರು.

  ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು ಒಟ್ಟಿಗೆ ಒಂದೇ ಸಿನಿಮಾ ಮೂಲಕ ಚಂದನವನದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭ ಮಾಡಿದ್ರು. 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡ ಯಶ್ ಮತ್ತು ರಾಧಿಕಾ ಚಿತ್ರೋಧ್ಯಮಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ.

  ನೀವು ನೋಡದೆ ಇರುವ ಯಶ್-ರಾಧಿಕಾ ಪರ್ಸನಲ್ ಫೋಟೋ ಆಲ್ಬಂ

  ಆನ್ ಸ್ಕ್ರೀನ್ ನಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ರಾಕಿಂಗ್ ಜೋಡಿಯಾಗಿರುವ ಯಶ್ ಮತ್ತು ರಾಧಿಕಾ ಕನ್ನಡ ಸಿನಿಮಾರಂಗದಲ್ಲಿ ಹತ್ತು ವರ್ಷಗಳ ಕಾಲ ನಡೆದು ಬಂದ ಹಾದಿಯ ಸಣ್ಣ ರಿಪೋರ್ಟ್ ಇಲ್ಲಿದೆ ಮುಂದೆ ಓದಿ.

  ಮೊಗ್ಗಿನ ಮನಸ್ಸಿನ ಜೋಡಿಗೆ ದಶಕ ಸಂಭ್ರಮ

  ಶಶಾಂಕ್ ನಿರ್ದೇಶನದಲ್ಲಿ ಮೂಡಿ ಬಂದ 'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಯಶ್ ಮತ್ತು ರಾಧಿಕಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಅದೇ ವರ್ಷ 2008ರಲ್ಲಿಯೇ ಯಶ್ 'ರಾಕಿ' ಸಿನಿಮಾದಲ್ಲಿಯೂ ಅಭಿನಯ ಮಾಡಿದ್ರು.

  2009ರಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯ

  'ಮೊಗ್ಗಿನ ಮನಸ್ಸು' ಸಿನಿಮಾ ನಂತರ ರಾಧಿಕಾ 'ಒಲವೇ ಜೀವನ ಲೆಕ್ಕಾಚಾರ' ಚಿತ್ರದಲ್ಲಿ ಅಭಿನಯ ಮಾಡಿದ್ರೆ, ಯಶ್ 'ಕಳ್ಳರ ಸಂತೆ' ಸಿನಿಮಾದಲ್ಲಿ ಕಾಣಿಸಿಕೊಂಡರು. ಎರಡು ಚಿತ್ರದಲ್ಲಿ ಇಬ್ಬರು ವಿಭಿನ್ನ ರೀತಿಯ ಪಾತ್ರಗಳನ್ನ ನಿರ್ವಹಿಸಿದರು. ಇದೇ ವರ್ಷ 'ಗೋಕುಲ' ಸಿನಿಮಾ ಕೂಡ ಬಿಡುಗಡೆ ಆಗಿತ್ತು. ಇತ್ತ ರಾಧಿಕಾ 'ಲವ್ ಗುರು' ಸಿನಿಮಾ ಮೂಲಕ ಪ್ರೇಕ್ಷರ ಮುಂದೆ ಬಂದಿದ್ದರು.

  'ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು

  'ಮೊದಲಸಲ'ದಲ್ಲಿ ಪ್ರೇಮಿಯಾದ ಯಶ್

  2010 ಯಶ್ ಮತ್ತೆ ಪ್ರೇಮಿಯಾಗಿ 'ಮೊದಲಸಲ' ಚಿತ್ರದಲ್ಲಿ ಅಭಿನಯ ಮಾಡಿದ್ದರು. ಚಿತ್ರದಲ್ಲಿನ ಯಶ್ ಅಭಿನಯಕ್ಕೆ ಸಾಕಷ್ಟು ಅಭಿಮಾನಿಗಳು ಹುಟ್ಟುಕೊಂಡರು. ರಾಧಿಕಾ 'ಕೃಷ್ಣನ್ ಲವ್ ಸ್ಟೋರಿ' ಚಿತ್ರದ ಮೂಲಕ ಪ್ರೇಮಿ ಅಂದರೆ ಹೇಗಿರಬೇಕು ಎನ್ನುವುದನ್ನು ಅದ್ಬುತ ನಟನೆ ಮೂಲಕ ಅಭಿಮಾನಿಗಳಿಗೆ ಹೇಳಿದ್ದರು.

  ಯಶಸ್ಸು ಪಡೆದ ಕಿರಾತಕ

  2011 ರಲ್ಲಿ ಯಶ್ 'ರಾಜಧಾನಿ' ಎನ್ನುವ ಚಿತ್ರದಲ್ಲಿ ಅಭಿನಯ ಮಾಡಿ ವಾವ್ಹ್ ಎನ್ನಿಸಿಕೊಂಡಿದ್ದರು ಅದೇ ವರ್ಷ ನಮ್ಮ ಮಂಡ್ಯದ ಹುಡುಗ ಅಂದ್ರೆ ಹಿಂಗಿರಬೇಕು ಎನ್ನುವುದನ್ನು 'ಕಿರಾತಕ' ಚಿತ್ರದ ಮೂಲಕ ನಿರೂಪಿಸಿದರು. ಅದೇ ರೀತಿ ರಾಧಿಕಾ 'ಹುಡುಗರು' ಸಿನಿಮಾ ಮೂಲಕ ನಮ್ ಮನೆ ಹುಡುಗಿ ಎನ್ನಿಸುವಂತ ಪಾತ್ರದಲ್ಲಿ ಮಿಂಚಿದ್ದರು.

  ಒಂದೇ ವರ್ಷದಲ್ಲಿ ಇಬ್ಬರು ಮೂರು ಚಿತ್ರದಲ್ಲಿ

  ಯಶ್ ಮತ್ತು ರಾಧಿಕಾ 'ಮೊಗ್ಗಿನ ಮನಸ್ಸು' ಚಿತ್ರದ ನಂತರ ಒಟ್ಟಿಗೆ ಅಭಿನಯ ಮಾಡಿದ್ದು 'ಡ್ರಾಮಾ' ಸಿನಿಮಾದಲ್ಲಿ, 'ಡ್ರಾಮಾ' 2012 ರಲ್ಲಿ ಬಿಡುಗಡೆ ಆಗಿತ್ತು ವಿಶೇಷ ಅಂದ್ರೆ ಈ ವರ್ಷದಲ್ಲಿ ಇಬ್ಬರು ಯಶ್ ಮೂರು ಸಿನಿಮಾದಲ್ಲಿ ಕಾಣಿಸಿಕೊಂಡರೆ, ರಾಧಿಕಾ ಅಭಿನಯದ ಐದು ಚಿತ್ರಗಳು ಬಿಡುಗಡೆ ಆಗಿತ್ತು.

  ಉಮಾ ಪಾತ್ರದಲ್ಲಿ ರಾಧಿಕಾ ಅದ್ಬುತ ಅಭಿನಯ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಲ್ಲಿ ರಾಧಿಕಾ ಪಂಡಿತ್ 'ಕಡ್ಡಿಪುಡಿ' ಚಿತ್ರದಲ್ಲಿ ಅಭಿನಯ ಮಾಡಿದ್ದರು. ಉಮಾ ಪಾತ್ರ ಕನ್ನಡ ಪ್ರೇಕ್ಷಕರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಇತ್ತ ಯಶ್ 'ರಾಜಹುಲಿ' ಚಿತ್ರದಲ್ಲಿ ಅಭಿನಯಿಸಿ ತಮ್ಮ ಅಭಿಮಾನಿ ಬಳಗವನ್ನು ದುಪ್ಪಟ್ಟು ಮಾಡಿಕೊಂಡರು. ಇವುಗಳ ಜೊತೆಯಲ್ಲಿ 'ಗೂಗ್ಲಿ' ಚಿತ್ರದ ಮೂಲಕ ಯಶ್, 'ದಿಲ್ ವಾಲಾ' ಸಿನಿಮಾ ಮೂಲಕ ರಾಧಿಕಾ ಇಬ್ಬರು ನ್ಯೂ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಎಂಟ್ರಿ ಕೊಟ್ಟಿದ್ದರು.

  'ಗಜಕೇಸರಿ'ಯ ಕೃಷ್ಣ, 'ಬಹೂದ್ದೂರ್'ನ ಅಂಜಲಿ

  2014ರಲ್ಲಿ ಯಶ್ ಅಭಿನಯದ 'ಗಜಕೇಸರಿ' ಚಿತ್ರ ಬಿಡುಗಡೆ ಆಗಿದ್ದು ಈ ಸಿನಿಮಾಗಾಗಿ ಯಶ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅತ್ತ ರಾಧಿಕಾ 'ಬಹದ್ದೂರ್' ಸಿನಿಮಾದಲ್ಲಿ ಅಭಿನಯ ಮಾಡಿದ್ದರು. ಇದೇ ವರ್ಷ ಇಬ್ಬರು ಒಟ್ಟಿಗೆ ಅಭಿನಯ ಮಾಡಿದ 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಚಾರಿ' ಸಿನಿಮಾ ತೆರೆಕಂಡು ಅದ್ಬುತ ಯಶಸ್ಸು ತಂದು ಕೊಟ್ಟಿತ್ತು. ಕನ್ನಡ ಚಿತ್ರರಂಗದಲ್ಲಿ ಯಶ್ ಮತ್ತು ರಾಧಿಕಾ ಜೋಡಿ ಮತ್ತೆ ರಾಕಿಂಗ್ ಆಗಿ ಎಂಟ್ರಿಕೊಟ್ಟಿತ್ತು.

  ತಮ್ಮ ಸಿನಿಮಾಗಳಿಗೆ ಹಾಡಿದ ಜೋಡಿ

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿ ಯಶ್ ಅಣ್ತಮ್ಮ ಎನ್ನುವ ಹಾಡಿಗೆ ಧ್ವನಿಯಾದರೆ, ರಾಧಿಕಾ 'ಜೂಮ್' ಚಿತ್ರದಲ್ಲಿ ತಮ್ಮದೇ ಹಾಡಿಗೆ ಧ್ವನಿ ಆಗಿದ್ದರು. ಈ ಮೂಲಕ ಇಬ್ಬರು ಸಿಂಗರ್ ಆಗಿಯೂ ಚಿತ್ರರಂಗಕ್ಕೆ ಪರಿಚಿತರಾದರು.

  'ಎಂದೆಂದಿಗೂ' ಯಶ್ 'ಮಾಸ್ಟರ್ ಪೀಸ್'

  2015 ರಲ್ಲಿ ರಾಧಿಕಾ ಪಂಡಿತ್ 'ಎಂದೆಂದಿಗೂ' ಚಿತ್ರದಲ್ಲಿ ಅಭಿನಯ ಮಾಡಿದ್ದರು. ಚಿತ್ರದ ಹಾಡುಗಳು ಸೂಪರ್ ಹಿಟ್ ಲಿಸ್ಟ್ ಸೇರಿದ್ದವು. ಇನ್ನು ಯಶ್ ಅಭಿನಯದ 'ಮಾಸ್ಟರ್ ಪೀಸ್' ಸಿನಿಮಾ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ಸೇರಿಕೊಂಡಿತ್ತು.

  ನಿಶ್ಚಿತಾರ್ಥ ಮಾಡಿಕೊಂಡ ಯಶ್ ರಾಧಿಕಾ

  'ಮಿಸ್ಟರ್ ಅಂಡ್ ಮಿಸ್ಸೆಸ್' ರಾಮಾಚಾರಿ ಸಿನಿಮಾ ನಂತರ ಯಶ್ ಮತ್ತು ರಾಧಿಕಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು. ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟಿದ್ದರು. ಇದೇ ವರ್ಷ 'ಸಂತು ಸ್ಟ್ರೈಟ್ ಫಾರ್ವರ್ಡ್', ರಾಧಿಕಾ ಅಭಿನಯದ 'ದೊಡ್ಮನೆ ಹುಡ್ಗ', 'ಜೂಮ್' ಕೂಡ ತೆರೆ ಕಂಡಿತ್ತು

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

  ರಾಧಿಕಾ ಮತ್ತು ಯಶ್ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷವನ್ನು ಪೂರೈಸಿ ಸಂಭ್ರಮದಲ್ಲಿ ಜೀವನ ನಡೆಸುತ್ತಾರೆ. ವೃತ್ತಿ ಜೀವನದಲ್ಲಾಗಲಿ, ವಯಕ್ತಿಕ ಜೀವನದಲ್ಲಾಗಲಿ ಅನೇಕರಿಗೆ ಸ್ಪೂರ್ತಿಯಾಗಿ ನಿಲ್ಲುವಂತೆ ಬದುಕಿತಿದ್ದಾರೆ. ಚಿತ್ರರಂಗ ಬಿಟ್ಟು ಇಬ್ಬರು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದಾರೆ. ಯಶಸ್ವಿಯಾಗಿ ಹತ್ತು ವರ್ಷ ಪೂರೈಸಿರುವ ಜೋಡಿ ಮತ್ತಷ್ಟು ರಾಕಿಂಗ್ ಆಗಿ ಜೀವನ ನಡೆಸಲಿ ಎನ್ನುವುದು ಅಭಿಮಾನಿಗಳ ಬಯಕೆ.

  English summary
  Kannada artist Yash and Radhika completed ten years in kannada cinema. yash and radhika started his career through the movie Moggiana Manassu

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more