For Quick Alerts
  ALLOW NOTIFICATIONS  
  For Daily Alerts

  ಕೊನೆಗು ಯಶ್-ರಾಧಿಕಾ ಮಗಳ ಹೆಸರು ಫೈನಲ್ ಆಯ್ತು

  |
  ಮಗಳಿಗೆ ಹೆಸರಿಡೋದಿಕ್ಕೆ ದಿನಾಂಕ ಫಿಕ್ಸ್ | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಗಳು ಬೇಬಿ ವೈಆರ್ ಗೆ ಇನ್ನು ನಾಮಕರಣ ಆಗಿಲ್ಲ. ಬೇಬಿ ವೈರ್ ಗೆ ಏನು ಹೆಸರಿಡ ಬೇಕೆಂದು ಮನೆಯವರು ಹುಡುಕಾಟದಲ್ಲಿ ಇದ್ರೆ, ಅಭಿಮಾನಿಗಳಂತೂ ತರಹೇವಾರಿ ಹೆಸರುಗಳನ್ನು ಸೂಚಿಸಿದ್ದಾರೆ. ಅಲ್ಲದೆ ಈಗಾಗಲೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಿದ್ದಾರೆ. ಅನೇಕರು ಯಶಿಕಾ ಎಂದೆ ಕರೆಯುತ್ತಿದ್ದಾರೆ.

  ಆದ್ರೆ ರಾಕಿಂಗ್ ಸ್ಟಾರ್ ದಂಪತಿ ಮಗಳಿಗೆ ಏನು ಹೆಸರಿಡಲಿದ್ದಾರೆ ಎನ್ನುವ ಕತೂಹಲ ಅಭಿಮಾನಿಗಳಲ್ಲಿ ಇತ್ತು. ಆದ್ರೀಗ ಕುತೂಹಲಕ್ಕೆ ತೆರೆ ಬೀಳುವ ಸಮಯ ಬಂದಿದೆ. ಸದ್ಯ ಬೇಬಿ ವೈರ್ ಗೆ ಆರು ತಿಂಗಳು ಆಗಿದೆ. ಈಗಾಗಲೆ ರಾಧಿಕಾ ಮತ್ತು ಯಶ್ ಇಬ್ಬರು ಸಾಕಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಮಗಳ ಫೋಟೋ ಶೇರ್ ಮಾಡಿದಾಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಅಪ್ಪಂದಿರ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ

  ಇದರ ನಡುವೆ ಈಗ ಆರು ತಿಂಗಳ ಮುದ್ದು ಮಗಳ ವೀಡಿಯೋ ಕೂಡ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಅಪ್ಪಂದಿರ ದಿನಾಚರಣೆಯ ದಿನ ಯಶ್ ಅನ್ನು ಮದ್ದು ಮಗಳು ತಬ್ಬಿಕೊಂಡಿರುವ ಫೋಟೋ ಶೇರ್ ಮಾಡಿದ್ದರು. ಆದ್ರೆ ಇನ್ನು ಹೆಸರನ್ನು ಮಾತ್ರ ಇಟ್ಟಿರಲಿಲ್ಲ.

  ಆದ್ರೀಗ ಬೇಬಿ ವೈಆರ್ ಗೆ ಮುದ್ದಾದ ಹೆಸರು ಫೈನಲ್ ಆಗಿದೆಯಂತೆ. ಆದ್ರೀಗ ಹೆಸರನ್ನು ರಿವೀಲ್ ಮಾಡಲಿಲ್ಲ. ಇದೇ ತಿಂಗಳು 23ರಂದು ಮುದ್ದು ಗಳ ಸುಂದರ ಹೆಸರನ್ನು ಬಹಿರಂಗ ಮಾಡುತ್ತಾರಂತೆ ಯಶ್ ಮತ್ತು ರಾಧಿಕಾ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ ಯಶ್ ದಂಪತಿ.

  ವೈ ಆರ್ ಅಕ್ಷರಗಳನ್ನು ಹಿಡಿದುಕೊಂಡಿರುವ ಮುದ್ದು ಮಗಳ ಫೋಟೋವನ್ನು ಶೇರ್ ಮಾಡುವ ಮೂಲಕ ಮಗಳಿಗೆ ಹೆಸರು ಸಿಕ್ಕಿರುವ ಸಂತಸವನ್ನು ಹಂಚಿಕೊಂಡಿದ್ದಾರೆ. "ಕೊನೆಗೂ ನಮಗೆ ಹೆಸರು ಸಿಕ್ಕಿದೆ. ನೀವು ಕೂಡ ತುಂಬಾ ಸುಂದರ ಹೆಸರುಗಳನ್ನು ನೀಡಿದ್ದೀರಿ. ಆದ್ರೆ ತನ್ನ ಪೋಷಕರು ಮಗಳಿಗೆ ಹೆಸರಿಟ್ಟಿದ್ದಾರೆ. ಇದೇ ತಿಂಗಳು 23ಕ್ಕೆ ಹೆಸರನ್ನು ಬಹಿರಂಗ ಪಡಿಸುತ್ತೇವೆ" ಎಂದು ಹೇಳಿದ್ದಾರೆ. ಬೇಬಿ ವೈ ಆರ್ ಮುದ್ದಾದ ಹೆಸರು ಏನಾಗಿರಲಿದೆ ಎನ್ನುವುದು ಜೂನ್ 23ಕ್ಕೆ ತೆರೆ ಬೀಳಲಿದೆ.

  English summary
  Kannada actor Yash and Radhika Pandith daugther name will reveal on June 23. radhika parents give beautiful name for their granddaughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X