For Quick Alerts
  ALLOW NOTIFICATIONS  
  For Daily Alerts

  ಜೂ.ಯಶ್ ದರ್ಶನಕ್ಕೆ ಸಜ್ಜಾಗಿದ್ದಾರೆ ಅಭಿಮಾನಿಗಳು

  |

  ರಾಕಿಂಗ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೆ ಪುತ್ರ ಹೇಗಿದ್ದಾನೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇದುವರೆಗೂ ಯಶ್ ದಂಪತಿ ಪುತ್ರನ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಆದರೀಗ ಅಭಿಮಾನಿಗಳಿಗೆ ಮುದ್ದಿನ ಮಗನನ್ನು ದರ್ಶನ ಮಾಡಿಸಲು ಸಜ್ಜಾಗಿದ್ದಾರೆ.

  ರುದ್ರ್ ಜೊತೆಗೆ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ ಗ್ಲಾಮ್ ಮಾ | Filmibeat Kannada

  ಇಂದು ಏಪ್ರಿಲ್ 30 ರಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವುದಾಗಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಗಳ ಜೊತೆ ಪುತ್ರನ ಅರ್ಧ ಮುಖವನ್ನು ಮಾತ್ರ ರಿವೀಲ್ ಮಾಡಿ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.

  ಲಾಕ್ ಡೌನ್ ನಡುವೆ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಜೂ.ಯಶ್ ನೋಡಲು ಕಾತರರಾಗಿದ್ದಾರೆ. ಅಂದ್ಹಾಗೆ ಯಶ್ ಪುತ್ರನಿಗೆ ಏಪ್ರಿಲ್ 30ಕ್ಕೆ 6 ತಿಂಗಳು ತುಂಬಿದೆ. ಈ ಸಂತಸದಲ್ಲಿ ಮಗನನ್ನು ಅಭಿಮಾನಿಗಳಿಗೆ ಪರಿಚಯಿಸುತ್ತಿದ್ದಾರೆ ರಾಕಿಂಗ್ ದಂಪತಿ.

  "ನೀವೆಲ್ಲರು ಕಾತರದಿಂದ ಕಾಯುತ್ತಿದ್ದ ಸಮಯ ಬಂದಿದೆ. ಪುತ್ರನಿಗೆ 6 ತಿಂಗಳು ತುಂಬಿದೆ. ನಿಮ್ಮೆಲ್ಲರಿಗೂ ಶುಭಾಶಯ ಹೇಳಲು ಸಿದ್ಧನಾಗಿದ್ದಾನೆ. ನೀವು ರೆಡಿನಾ" ಎಂದು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

  ಜೂ.ಯಶ್ ಸ್ವಾಗತಿಸಲು ಕಾತರದಿಂದ ಕಾಯುತ್ತಿರುವುದಾಗಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಯಶ್ ಪುತ್ರ ಹೇಗಿದ್ದಾನೆ ಎನ್ನುವ ಕುತೂಹಲಕ್ಕೆ ಇಂದು ಬ್ರೇಕ್ ಹಾಕಲಿದ್ದಾರೆ ರಾಂಕಿಂಗ್ ದಂಪತಿ. ಇನ್ನೂ ಮೊದಲ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಮಗನ ಹೆಸರು ಏನಾಗಿರಲಿದೆ ಕುತೂಹಲ ಸಹ ಅಭಿಮಾನಿಗಳಲ್ಲಿ ಮನೆ ಮಾಡಿದೆ.

  English summary
  Actor Yash and Radhika pandith son turned 6 months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X