»   » 'ಅಣ್ತಮ್ಮ'ನಿಗಾಗಿ ಗಾಯಕನಾದ ಯಶ್ ಅಸಲಿ ಕಥೆ

'ಅಣ್ತಮ್ಮ'ನಿಗಾಗಿ ಗಾಯಕನಾದ ಯಶ್ ಅಸಲಿ ಕಥೆ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ರೆಡಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷ್ಯ. 'ರಾಮಾಚಾರಿ' ಪಾತ್ರಕ್ಕೋಸ್ಕರ ಯಶ್ ತಮ್ಮ ಎದೆಯ ಮೇಲೆ 'ಸಾಹಸಸಿಂಹ'ನ ಟಾಟ್ಯೂ ಹಾಕಿಸಿಕೊಂಡಿರುವುದು ಹಳೇ ಸುದ್ದಿ.

ಇದೀಗ ಇದೇ 'ರಾಮಾಚಾರಿ'ಗಾಗಿ ಯಶ್ 'ಮೈಕ್' ಹಿಡಿದಿರುವುದು ಗಾಂಧಿನಗರದಿಂದ ಬಂದಿರುವ ತಾಜಾ ಸುದ್ದಿ. ಇಲ್ಲಿವರೆಗೂ ತೆರೆಮೇಲೆ ಖಡಕ್ ಡೈಲಾಗ್ಸ್ ಹೊಡೆಯುತ್ತಿದ್ದ ಯಶ್ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮೂಲಕ ಗಾನಸುಧೆಯನ್ನೂ ಹರಿಸಲಿದ್ದಾರೆ. ['ಜೇಮ್ಸ್' ಬಾಂಡ್ ಚಿತ್ರಕ್ಕೆ ಯಶ್, ಪುನೀತ್ ಗೆ ಆಹ್ವಾನ]

ಹೀರೋಗಳು ಗಾಯಕರಾಗಿರುವುದು ಇದೇ ಮೊದಲಲ್ಲ. ಈಗಾಗಲೇ ಯಶ್ ಫೇವರಿಟ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ವಿಜಯ್ ರಾಘವೇಂದ್ರ, ಉಪೇಂದ್ರ ಮತ್ತು ಇತ್ತೀಚಿನ ಕೋಮಲ್ ಕೂಡ ಗಾನಬಜಾಯಿಸಿ ಸೈ ಅನಿಸಿಕೊಂಡಿದ್ದಾರೆ. ಈಗ ಇದೇ ಲಿಸ್ಟ್ ಗೆ ಯಶ್ ಹೊಸ ಸೇರ್ಪಡೆಯಾಗುತ್ತಿರುವುದರ ಹಿಂದೆಯೂ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. [ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಹಚ್ಚೆ ಖಯಾಲಿ]

ಯಶ 'ಗಾಯನ' ಗಿಮಿಕ್ ಅಲ್ಲ

ಸಾಮಾನ್ಯವಾಗಿ ಹೀರೋಗಳು ಗಾಯಕರಾಗುತ್ತಾರೆ ಅಂದ್ರೆ ಅದು ಪಬ್ಲಿಸಿಟಿಯ ಹೊಸ ಮಂತ್ರ. ಆದ್ರೆ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಯಲ್ಲಿ ಅಂತ ಯಾವುದೇ ಗಿಮಿಕ್ ನಡೆದಿಲ್ಲ. ಯಶ್ ಹಾಡುವುದಕ್ಕೆ ಮುಖ್ಯ ಕಾರಣ 'ಅಣ್ತಮ್ಮ'. ಯಶ್ ಜನಪ್ರಿಯ ಡೈಲಾಗ್ 'ಅಣ್ತಮ್ಮ'ನನ್ನೇ ಇಟ್ಕೊಂಡು ಯೋಗರಾಜ್ ಭಟ್ರು ರಾಮಾಚಾರಿಗಾಗಿ ಮಾಸ್ ಸಾಂಗ್ ಒಂದನ್ನ ಬರೆದಿದ್ದಾರೆ. [ರಾಕಿಂಗ್ ಸ್ಟಾರ್ 'ರಾಮಾಚಾರಿ' ಲೇಟ್ ಅಂತೆ ಕಣ್ಲಾ]

'ಅಣ್ತಮ್ಮ' ಯಶ್

ಹೇಳಿಕೇಳಿ, 'ಅಣ್ತಮ್ಮ' ಯಶ್ ಡೈಲಾಗ್ ಆಗಿರುವುದರಿಂದ ಅವರೇ ಹಾಡಿದ್ರೆ ಹೇಗೆ ಅಂತ ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು ಪ್ಲಾನ್ ಮಾಡಿ ಯಶ್ ಕೈಲಿ ಹಾಡಿಸಿದ್ದಾರೆ.

ಮಾಸ್ ಹಾಡಿಗೆ 'ಗಾನಬಜಾನ'

''ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಯಶ್ ಗೆ ಒಂದು ಕಂಪ್ಲೀಟ್ ಮಾಸ್ ಸಾಂಗ್ ಇದೆ. ಈಗಾಗಲೇ ಆ ಹಾಡನ್ನ ನಾವು ಶಿವಾಜಿನಗರ, ಯಶವಂತಪುರದಲ್ಲಿ ಶೂಟ್ ಮಾಡಿದ್ದೀವಿ. ಹಾಡನ್ನ ಕೆಲ ಟ್ರ್ಯಾಕ್ ಸಿಂಗರ್ ಗಳು ಹಾಡಿದ್ರು. ಆದ್ರೆ ಯಾವುದೂ ನಂಗೆ ಸಮಾಧಾನವಾಗ್ಲಿಲ್ಲ. 'ಅಣ್ತಮ್ಮ' ಅಂತಲೇ ಹಾಡು ಶುರುವಾಗುವುದರಿಂದ ಅದು ಯಶ್ ಬಾಯಿಂದ ಬಂದ್ರೆ ಹಾಡಿಗೆ ತೂಕ ಜಾಸ್ತಿ ಅಂತ ಯಶ್ ರಿಂದ ಹಾಡ್ಸಿದ್ವಿ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಸಂತೋಷ್ ಅನಂದ್ ರಾಮ್ ತಿಳಿಸಿದ್ದಾರೆ. ["ಲೋ ರಾಮಾಚಾರಿ ಎಲ್ಲಿದ್ದೀಯೋ" ಟೀಸರ್ ಸೂಪರ್]

'ಗಾಯಕ'ನಾಗೋದಿಲ್ಲ ಅಂದಿದ್ದ ಯಶ್..!

''ಮೊದಲು ಯಶ್ ಒಪ್ಪಿಕೊಳ್ಳಲಿಲ್ಲ. ಆಮೇಲೆ 'ಅಣ್ತಮ್ಮ' ಅವರ ಡೈಲಾಗೇ ಆಗಿರುವುದರಿಂದ ನಾವು ಅವರನ್ನ ಒಪ್ಪಿಸುವ ಪ್ರಯತ್ನ ಮಾಡಿದ್ವಿ. ಒಂದು ಬಾರಿ ಹಾಡಿ, ಅದು ಸಂಗೀತ ನಿರ್ದೇಶಕ ಹರಿಕೃಷ್ಣ ಓಕೆ ಮಾಡಿದ್ಮೇಲೆ, ಯಶ್ ಹಾಡುವುದನ್ನ ಕಲಿಯೋಕೆ ಶುರುಮಾಡಿದ್ರು. 4-5 ದಿನ ಅಭ್ಯಾಸ ಮಾಡಿ, ಯಶ್ ನಿನ್ನೆ ರೆಕಾರ್ಡಿಂಗ್ ಮಾಡಿದ್ದಾರೆ. ತುಂಬಾ ಚೆನ್ನಾಗಿ ಯಶ್ ಹಾಡಿದ್ದಾರೆ'' ಅಂತ ನಿರ್ದೇಶಕ ಸಂತೋಷ್ ಸಂತಸವನ್ನ ಹಂಚಿಕೊಂಡರು.

ಕೇಳ್ಲಾ ಅಣ್ತಮ್ಮ...!

''ಹಾಡನ್ನ ಕೇಳಿ ಯಶ್ ಕೂಡ ಖುಷಿ ಪಟ್ಟಿದ್ದಾರೆ. ಹಾಡಿಗೆ ಆಡಿಯೋ ಕೂಡ ಮ್ಯಾಚ್ ಮಾಡಿದ್ದೀವಿ. ಯಶ್ ಅಭಿಮಾನಿಗಳಿಗೆ ಹಾಡು ಖಂಡಿತ ಇಷ್ಟವಾಗುತ್ತೆ'' ಅನ್ನುವುದು ಸಂತೋಷ್ ಅಭಿಪ್ರಾಯ. ಇಲ್ಲಿವರೆಗೂ ಹೀರೋ ಆಗಿದ್ದ ಯಶ್, ರಾಮಾಚಾರಿ ಮೂಲಕ ಗಾಯಕನಾಗೂ ತೆರೆಮೇಲೆ ಬರ್ತಾರೆ. ಡೈಲಾಗ್ ಆಗಿದ್ದ 'ಅಣ್ತಮ್ಮ' ಈಗ ಹಾಡಾಗಿ ಬದಲಾಗಿರುವುದನ್ನ ಕೇಳಿದ್ಮೇಲೆ ಅಭಿಮಾನಿಗಳು ಸ್ಟೆಪ್ ಹಾಕದೇ ಸುಮ್ನೆ ಕೂರಲ್ಲ ಬಿಡಿ.

Read in English: Yash Is Now A Singer
English summary
Rocking Star Yash has sung a song for the movie Mr and Mrs Ramachari. Since the song contains the lyrics 'Anthamma' which is the famous dialogue of Yash. The director convinced the Actor to sing.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada