»   » 'ಕೆ ಜಿ ಎಫ್' ನ ರಾಕಿ ಲುಕ್ ನೋಡಲು ಶುರುವಾಯ್ತು ಅಭಿಮಾನಿಗಳಲ್ಲಿ ಕಾತುರ

'ಕೆ ಜಿ ಎಫ್' ನ ರಾಕಿ ಲುಕ್ ನೋಡಲು ಶುರುವಾಯ್ತು ಅಭಿಮಾನಿಗಳಲ್ಲಿ ಕಾತುರ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ ಜಿ ಎಫ್' ಚಿತ್ರದ ಟೀಸರ್ ಬಿಡುಗಡೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಯಶ್ ಹುಟ್ಟುಹಬ್ಬದ ವಿಶೇಷವಾಗಿ ಕೆ ಜಿ ಎಫ್ ಚಿತ್ರದ ಮೊದಲ ಟೀಸರ್ ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ಕೆ ಜಿ ಎಫ್ ಚಿತ್ರವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರೀಕರಣದ ಜೊನೆಯ ಹಂತದಲ್ಲಿರು ಕೆ ಜಿ ಎಫ್ ಸಿನಿಮಾದ ಮೊದಲ ಟೀಸರ್ ಮಧ್ಯರಾತ್ರಿ 12-15ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದಾರೆ. ಫಸ್ಟ್ ಲುಕ್ ಮತ್ತು ಮೇಕಿಂಗ್ ಸ್ಟಿಲ್ ಗಳನ್ನ ಬಿಡುಗಡೆ ಮಾಡಿದ್ದ ನಿರ್ದೇಶಕರು ಯಶ್ ಹುಟ್ಟುಹಬ್ಬದ ವಿಶೇಷವಾಗಿ ಟೀಸರ್ ಬಿಡುಗಡೆ ಮಾಡಲಿದ್ದಾರೆ.

Yash birthday special KGF movie teaser will be release today midnight ( jan.8)

ಹೊಂಬಾಳೆ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ರಿಲೀಸ್ ಮಾಡುವುದಾಗಿ ನಿರ್ಮಾಪಕ ಕಾರ್ತಿಕ್ ಗೌಡ ತಿಳಿಸಿದ್ದಾರೆ. ಚಿತ್ರದಲ್ಲಿ ರಾಕಿ ಪಾತ್ರದಲ್ಲಿ ಯಶ್ ಹೇಗೆ ಕಾಣಿಸುತ್ತಾರೆ ಎನ್ನುವ ಕುತೂಹಲಗಳು ಹೆಚ್ಚಾಗಿದ್ದು ಸದ್ಯ ಹುಟ್ಟುಹಬ್ಬದ ಜಾಹೀರಾತು ನೀಡಲು ಯಶ್ ಅವರ ಮೂರು ಲುಕ್ ಗಳನ್ನ ರಿಲೀಸ್ ಮಾಡಲಾಗಿದೆ.

Yash birthday special KGF movie teaser will be release today midnight ( jan.8)

ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ಯಶ್ 70ರ ದಶಕದ ನಾಯಕನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಪೋಸ್ಟರ್ ಗಳಲ್ಲೂ ಡಿಫ್ರೆಂಟ್ ಗೆಟಪ್ ನಲ್ಲಿದ್ದಾರೆ ರಾಕಿಂಗ್ ಸ್ಟಾರ್.

English summary
Kannada actor Yash birthday special KGF movie teaser will be release today midnight(jan.8) It has already film team released three posters of KGF film. Prashanth Neel directing the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X