»   » ಮೂರು ಕಾರು ಖರೀದಿಸಿದ ನಟ ಯಶ್, ಪ್ರೀತಿಯಲ್ಲಿ ಎಲ್ಲರಿಗೂ ಸಮಪಾಲು

ಮೂರು ಕಾರು ಖರೀದಿಸಿದ ನಟ ಯಶ್, ಪ್ರೀತಿಯಲ್ಲಿ ಎಲ್ಲರಿಗೂ ಸಮಪಾಲು

Posted By:
Subscribe to Filmibeat Kannada
ಮೂರು ಕಾರುಗಳನ್ನ ಖರೀದಿಸಿದ್ದಾರೆ ನಟ ರಾಕಿಂಗ್ ಸ್ಟಾರ್ ಯಶ್ | FIlmibeat Kannada

ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಡಿಸೆಂಬರ್ 9 ನೇ ತಾರೀಖಿಗೆ ಒಂದು‌ ವರ್ಷ ತುಂಬಲಿದೆ. ಇದೇ ಸಂಭ್ರಮದಲ್ಲಿ‌ ಯಶ್ ತಮ್ಮ ಮನೆಯವರಿಗೆ ಉಡುಗೊರೆ ನೀಡಿದ್ದಾರೆ. ಸಾಮಾನ್ಯವಾಗಿ ಮದುವೆ ವಾರ್ಷಿಕೋತ್ಸವಗಳಲ್ಲಿ ಗಂಡ-ಹೆಂಡತಿ ಇಬ್ಬರು ಸೇರಿ ಆಚರಣೆ ಮಾಡೋದು ಕಾಮನ್, ಆದರೆ ಯಶ್ ತಾವು ಎಲ್ಲರಿಗಿಂತಲೂ ಭಿನ್ನ ಅನ್ನೋದನ್ನ ನಿರೂಪಿಸಿದ್ದಾರೆ.

ಯಶ್ ಮದುವೆಯ ಮೊದಲ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಮೂರು ಕಾರುಗಳನ್ನ ಖರೀದಿ ಮಾಡಿದ್ದಾರೆ. ಪ್ರೀತಿಯಲ್ಲಿ ಎಲ್ಲರಿಗೂ ಸಮಪಾಲು ಅನ್ನೋ ರೀತಿಯಲ್ಲಿ ಒಂದು ತನಗಾಗಿ ಮತ್ತೊಂದು‌ ಪತ್ನಿ ರಾಧಿಕಾ‌ಪಂಡಿತ್ ಗಾಗಿ ಇನ್ನೊಂದು ಕಾರನ್ನ ತಮ್ಮ ತಂದೆ-ತಾಯಿಗಾಗಿ ಕೊಂಡುಕೊಂಡಿದ್ದಾರೆ.

Yash bought three cars for the first wedding anniversary

ಯಶ್ ''Mercedes Benz'' ನ ಮೂರು ಬೇರೆ ಬೇರೆ ಮಾಡೆಲ್ ನ‌ ಕಾರುಗಳನ್ನ ಖರೀದಿ ಮಾಡಿದ್ದಾರೆ. ಅಪ್ಪ-ಅಮ್ಮನಿಗೆ ಬೆಂಜ್ (''Mercedes Benz'' ) E-Class , ಪತ್ನಿ ರಾಧಿಕಾ ಪಂಡಿತ್ ಗೆ‌ ಬೆಂಜ್ (''Mercedes Benz'' ) GLS ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ.

ನಟ ಯಶ್ ಅವರಿಗೆ ಕಾರ್ ಮತ್ತು ಬೈಕ್ ಗಳ ಕ್ರೇಜ್ ಇಲ್ಲ. ಸ್ಟಾರ್ ಆದ ನಂತರ ಬೈಕ್ ನಲ್ಲಿ ಓಡಾಡುವುದನ್ನ ನಿಲ್ಲಿಸಿದ್ದಾರೆ. ಮನೆಯಲ್ಲಿ ಎಲ್ಲರಿಗೂ ಅಗತ್ಯಕ್ಕೆ ತಕ್ಕಂತೆ ಈಗಾಗಲೇ ಆರು ಕಾರುಗಳಿವೆ. ಆಡಿ Q7. ಆಡಿ A4, ರೇಂಜ್ ರೋವರ್ ಸೇರಿದಂತೆ ಪಜೆರೊ ಸ್ಪೋರ್ಟ್ಸ್ ಕಾರ್ ಗಳು ಯಶ್ ಮನೆಯಲ್ಲಿವೆ. ಅವುಗಳ ಜೊತೆಗೆ ಯಶ್ ತಮಗಾಗಿ ನಿನ್ನೆ "Benz GLC AMG COUPE" ಕಾರನ್ನ ಕೊಂಡುಕೊಂಡಿದ್ದಾರೆ.

English summary
Actor Rocking Star Yash bought three cars for the first anniversary of the wedding., ಮದುವೆಯ ಮೊದಲ ವಾರ್ಷಿಕೋತ್ಸವಕ್ಕಾಗಿ ನಟ ರಾಕಿಂಗ್ ಸ್ಟಾರ್ ಯಶ್ ಮೂರು ಕಾರುಗಳನ್ನ ಖರೀದಿ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada