For Quick Alerts
  ALLOW NOTIFICATIONS  
  For Daily Alerts

  ಸುದೀಪ್-ಯಶ್ ಅಭಿಮಾನಿಗಳ ನಡುವಿನ ಕೋಲಾಹಲ ಇನ್ನೂ ಕಮ್ಮಿ ಆಗಿಲ್ಲ.!

  By Harshitha
  |
  ಯಶ್ - ಕಿಚ್ಚ ಪ್ಯಾನ್ಸ್ ನಡುವೆ ಕಮ್ಮಿಯಾಗ್ತಿಲ್ಲ ಕಿಚ್ಚು | Filmibeat Kannada

  #HumFitThoIndiaFit ಚಾಲೆಂಜ್ ನ ಸ್ವೀಕರಿಸಿ, ಅದರಲ್ಲಿ ಯಶಸ್ವಿಯಾಗಿ, ಅದೇ ಚಾಲೆಂಜ್ ನ ರಾಕಿಂಗ್ ಸ್ಟಾರ್ ಯಶ್ ಗೆ ನಟ ಸುದೀಪ್ ಹಾಕಿದರು. ಸುದೀಪ್ ಎಸೆದ ಸವಾಲಿಗೆ ಕೊಂಚ ಟ್ವಿಸ್ಟ್ ಕೊಟ್ಟು ಸ್ವೀಕರಿಸಿದ ನಟ ಯಶ್ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಒಂದು ವಿಡಿಯೋನ ಶೇರ್ ಮಾಡಿದ್ದರು.

  ಆ ವಿಡಿಯೋದಲ್ಲಿ 'ಹಾಯ್ ಸುದೀಪ್' ಅಂತ ಯಶ್ ಹೇಳಿದ್ದಾರೆ ಹೊರತು 'ಸುದೀಪ್ ಸರ್', 'ಸುದೀಪ್ ಅವರೇ' ಎಂಬ ಮಾತು ಯಶ್ ಬಾಯಿಂದ ಬಂದಿರಲಿಲ್ಲ. ಹೀಗಾಗಿ, ಸುದೀಪ್ ಗೆ ಯಶ್ ಗೌರವ ಕೊಟ್ಟಿಲ್ಲ ಎಂದು ಕಿಚ್ಚನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಯಶ್ ವಿರುದ್ಧ ಸಮರ ಸಾರಿದ್ದರು.

  ಇದೇ ವಿಚಾರವಾಗಿ ನಿನ್ನೆ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಯಶ್ ಅಣ್ತಮ್ಮಂದಿರು ಹಾಗೂ ಕಿಚ್ಚನ ಹುಡುಗರ ನಡುವೆ ಕಲಹ ಕೋಲಾಹಲವೇ ನಡೆದು ಹೋಯ್ತು. ಯುದ್ಧ ಸಾಕು ಅಂತ ಕಿಚ್ಚ ಸುದೀಪ್ ಕೇಳಿಕೊಂಡರೂ ಉರಿಯುತ್ತಿರುವ ಬೆಂಕಿ ಇನ್ನೂ ತಣ್ಣಗಾಗಿಲ್ಲ. ಮುಂದೆ ಓದಿರಿ...

  ಯುದ್ಧಕ್ಕೆ ಪೂರ್ಣ ವಿರಾಮ ಬಿದ್ದಿಲ್ಲ.!

  ಯುದ್ಧಕ್ಕೆ ಪೂರ್ಣ ವಿರಾಮ ಬಿದ್ದಿಲ್ಲ.!

  ಯಶ್ ಫ್ಯಾನ್ಸ್ ಹಾಗೂ ಸುದೀಪ್ ಅಭಿಮಾನಿಗಳ ನಡುವಿನ ಯುದ್ಧಕ್ಕೆ ಇನ್ನೂ ಪೂರ್ಣ ವಿರಾಮ ಬಿದ್ದಿಲ್ಲ. ಸುದೀಪ್ ಬಳಿ ಯಶ್ ಕ್ಷಮೆ ಕೇಳಬೇಕು ಎಂದು ಕಿಚ್ಚನ ಹುಡುಗರು ನಿನ್ನೆ ಪಟ್ಟು ಹಿಡಿದಿದ್ದರು. ಆದ್ರೆ, ಇಂದು ಯಶ್ ಅಭಿಮಾನಿಗಳ ಬಳಿ ಸುದೀಪ್ ಫ್ಯಾನ್ಸ್ ಕ್ಷಮೆ ಕೇಳಬೇಕು ಅಂತ ಯಶ್ ಅಣ್ತಮ್ಮಂದಿರು ಡಿಮ್ಯಾಂಡ್ ಮಾಡ್ತಿದ್ದಾರೆ.

  ಯಶ್ ಮಾಡಿಬಿಟ್ಟರೇ ಮಹಾಪರಾಧ? ಕುದಿಯುತ್ತಿದೆ ಸುದೀಪ್ ಅಭಿಮಾನಿಗಳ ರಕ್ತ!ಯಶ್ ಮಾಡಿಬಿಟ್ಟರೇ ಮಹಾಪರಾಧ? ಕುದಿಯುತ್ತಿದೆ ಸುದೀಪ್ ಅಭಿಮಾನಿಗಳ ರಕ್ತ!

  ಯಾಕೆ ಕ್ಷಮೆ ಕೇಳಬೇಕು.?

  ರಾತ್ರೋ ರಾತ್ರಿ ಕೆಲ ವಿಡಿಯೋ ಹಾಗೂ ಪೋಸ್ಟ್ ಗಳನ್ನು ಸುದೀಪ್ ಫ್ಯಾನ್ಸ್ ಡಿಲೀಟ್ ಮಾಡಿದ್ದಾರಂತೆ. ಯಶ್ ತಪ್ಪು ಮಾಡದೇ ಇದ್ದರೂ, ಅವರ ವಿರುದ್ಧ ಆರೋಪ ಮಾಡಿದ ಸುದೀಪ್ ಅಭಿಮಾನಿಗಳು ಸದ್ಯ ಯಶ್ ಫ್ಯಾನ್ಸ್ ಗೆ ಕ್ಷಮೆ ಕೇಳಬೇಕಂತೆ.

  ಅಭಿಮಾನಿಗಳಿಗಿರುವ ಕೋಪ ಸುದೀಪ್ ಗಿಲ್ಲ.! ಅದಕ್ಕೆ ಸಾಕ್ಷಿ ಈ ಮಾತು..ಅಭಿಮಾನಿಗಳಿಗಿರುವ ಕೋಪ ಸುದೀಪ್ ಗಿಲ್ಲ.! ಅದಕ್ಕೆ ಸಾಕ್ಷಿ ಈ ಮಾತು..

  ಕಿಡಿಕಾರಬೇಡಿ ಎಂದು ಕೇಳಿಕೊಂಡಿದ್ದರು ನಟ ಸುದೀಪ್

  ''ನನ್ನ ಫಿಟ್ನೆಸ್ ಚಾಲೆಂಜ್ ನ ಸ್ವೀಕರಿಸಿ, ಆ ವಿಡಿಯೋನ ಯಶ್ ಪೋಸ್ಟ್ ಮಾಡಿದ್ದು ಪ್ರೀತಿ ಹಾಗೂ ಗೌರವದಿಂದಲೇ. ದಯವಿಟ್ಟು ಯಶ್ ವಿರುದ್ಧ ಕಿಡಿಕಾರಬೇಡಿ. ಇದು ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರ ಬಳಿ ನಾನು ಮಾಡಿಕೊಳ್ಳುತ್ತಿರುವ ವಿನಂತಿ. ಇದನ್ನ ಗೌರವಿಸುತ್ತೀರಿ ಎಂದು ಭಾವಿಸುವೆ'' ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದರು.

  ತಣ್ಣಗಾಗಿದ್ದ ಸುದೀಪ್ ಅಭಿಮಾನಿಗಳು.!

  ತಣ್ಣಗಾಗಿದ್ದ ಸುದೀಪ್ ಅಭಿಮಾನಿಗಳು.!

  ಸುದೀಪ್ ಟ್ವೀಟ್ ಮಾಡಿದ್ಮೇಲೆ, ಅವರ ಫ್ಯಾನ್ಸ್ ಸ್ವಲ್ಪ ಕೂಲ್ ಆಗಿದ್ದರು. ಆದ್ರೆ, ಇಂದು ಸುದೀಪ್ ಫ್ಯಾನ್ಸ್ ವಿರುದ್ಧ ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದು ಎಲ್ಲಿಗೆ ಹೋಗಿ ತಲುಪುತ್ತದೋ, ನೋಡಬೇಕು.

  English summary
  Rocking Star Yash fans are demanding apology from Kiccha Sudeep fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X