For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ತಂಡಕ್ಕೆ ಬೇಡಿಕೆ ಇಟ್ಟ ಯಶ್ ಅಭಿಮಾನಿಗಳು

  |
  KGF 2 movie : 'ಕೆಜಿಎಫ್ 2' ತಂಡಕ್ಕೆ ಬೇಡಿಕೆ ಇಟ್ಟ ಯಶ್ ಅಭಿಮಾನಿಗಳು |FILMIBEDAT KANNADA

  'ಕೆಜಿಎಫ್' ಸಿನಿಮಾ ನೋಡಿ ಇಷ್ಟ ಪಟ್ಟ ಅಭಿಮಾನಿಗಳು 'ಕೆಜಿಎಫ್ 2' ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಚಿತ್ರತಂಡದ ಮುಂದೆ ಫ್ಯಾನ್ಸ್ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

  #WeWantKGFChapter2Update ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವಿಟ್ಟರ್ ನಲ್ಲಿ 'ಕೆಜಿಎಫ್ 2' ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. 'ಕೆಜಿಎಫ್ 2' ಸಿನಿಮಾ ಯಾವ ಹಂತದಲ್ಲಿ ಇದೆ?, ಯಾವ ಕೆಲಸಗಳು ನಡೆಯುತ್ತಿದೆ? ಹಾಗೂ ಸದ್ಯದ ಅಪ್ ಡೇಟ್ ತಿಳಿಸುವಂತೆ ಮನವಿ ಮಾಡಿದ್ದಾರೆ.

  ಕೋಲಾರದಿಂದ ಹೈದರಾಬಾದ್ ಗೆ ಶಿಫ್ಟ್ ಆದ 'ಕೆಜಿಎಫ್-2' ಚಿತ್ರತಂಡ

  ಯಶ್ ಅಭಿಮಾನಿಗಳ ಖಾತೆಗಳು, ಫ್ಯಾನ್ಸ್ ಅಸೋಸಿಯೇಶನ್ ಖಾತೆಗಳಲ್ಲಿ #WeWantKGFChapter2Update ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತದೆ. ಚಿತ್ರತಂಡದ ಪ್ರತಿಕ್ರಿಯೆಯ ನಿರೀಕ್ಷೆಗಳಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ.

  ಇನ್ನು, ಮೈಸೂರು, ಬೆಂಗಳೂರು, ಕೋಲಾರದಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಈಗ ದಿಢೀರನೆ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ನಿನ್ನೆಯಿಂದ (ಸಪ್ಟೆಂಬರ್ 4) ಹೈದರಾಬಾದ್ ನಲ್ಲಿ ಚಿತ್ರತಂಡ ಚಿತ್ರೀಕರಣ ಮಾಡುತ್ತಿದೆ.

  ಕೆಜಿಎಫ್-2 ಚಿತ್ರೀಕರಣಕ್ಕೆ ಕೋಲಾರ ನ್ಯಾಯಾಲಯದಿಂದ ತಡೆಯಾಜ್ಞೆ

  'ಕೆಜಿಎಫ್ 2' ಚಿತ್ರೀಕರಣ ಕೋಲಾರದ ಸೈಲೈಡ್ ಗುಡ್ಡದಲ್ಲಿ ನಡೆಯುತ್ತಿತ್ತು. ಆದರೆ, ಅಲ್ಲಿಯ ಪರಿಸರವನ್ನು ನಾಶ ಮಾಡಲಾಗುತ್ತಿದೆ ಅಲ್ಲದೆ, ಸ್ಥಳಿಯರಿಗೆ ತೊಂದರೆಯಾಗುತ್ತಿದೆ ಎಂದು ಶ್ರೀನಿವಾಸ್ ಕೋರ್ಟ್ ಮೆಟ್ಟಿಲೇರಿದ್ದರು. ಕೋಲಾರ ಸಿಟಿ ಸಿವಿಲ್ ಕೋರ್ಟ್ ಅರ್ಜಿ ಪರಿಗಣಿಸಿ ಚಿತ್ರೀಕರಣಕ್ಕೆ ತಾತ್ಕಾಲಿಕ ತಡೆ ನೀಡಿದೆ. ಹಾಗಾಗಿ ,ಚಿತ್ರತಂಡ ಈಗ ಹೈದರಾಬಾದ್ ಕಡೆ ಪಯಣ ಬೆಳೆಸಿದೆ.

  English summary
  Actor Yash fans asking 'KGF chapter 2' movie updates by using #WeWantKGFChapter2Update hashtag.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X