For Quick Alerts
  ALLOW NOTIFICATIONS  
  For Daily Alerts

  ದೊಡ್ಡ ಸ್ಟಾರ್‌ಗಳನ್ನು ಹಿಂದಿಕ್ಕಿ ಹೊಸದೊಂದು ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್

  |

  ತಾರೆಯರ ಜನಪ್ರಿಯತೆ ಅಳೆಯುವುದು ಹೇಗೆ? ಈ ಹಿಂದೆ ಅವರ ಸಿನಿಮಾಗಳ ಗುಣಮಟ್ಟ, ಅವುಗಳು ಪ್ರದರ್ಶನ ಕಂಡ ದಿನಗಳು, ಟಿಕೆಟ್ ಮಾರಾಟ, ಕಲೆಕ್ಷನ್ ಮುಂತಾದವುಗಳನ್ನು ಮಾನದಂಡವಾಗಿರಿಸಿಕೊಳ್ಳಲಾಗುತ್ತಿತ್ತು. ಈಗ ಜನಪ್ರಿಯತೆಯ ಮಾನದಂಡಗಳು ವಿಸ್ತರಣೆಯಾಗಿವೆ. ಅದರಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿನ ಫಾಲೋವರ್‌ಗಳು, ಹಿಟ್ಸ್‌ಗಳು ಬಹಳ ಮುಖ್ಯ.

  ದೊಡ್ಡ ದೊಡ್ಡ ಸ್ಟಾರ್ ಗಳನ್ನು ಹಿಂದಿಕ್ಕಿ ದಾಖಲೆ ಬರೆದ ಯಶ್ | Rocking star Yash | Twitter

  ನಟ ಯಶ್ ಕೆಜಿಎಫ್ ಚಿತ್ರದ ಮೂಲಕ ತಮ್ಮ ಕೀರ್ತಿಯನ್ನು ಹೆಚ್ಚಿಸಿಕೊಂಡವರು. ದೇಶದಾದ್ಯಂತ ಮಾತ್ರವಲ್ಲ, ವಿದೇಶಗಳಲ್ಲಿಯೂ ಅವರಿಗೆ ಅಭಿಮಾನಿಗಳಿದ್ದಾರೆ. ಅವರ ಕೆಜಿಎಫ್ ಚಿತ್ರದ ಮೊದಲ ಭಾಗ ಹಾಗೂ ಎರಡನೆಯ ಭಾಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಚರ್ಚೆಗಳಾಗುತ್ತಲೇ ಇರುತ್ತವೆ. ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಜನಪ್ರಿಯತೆ ಅವರಿಗೆ ಮತ್ತೊಂದು ಹೆಗ್ಗಳಿಕೆ ತಂದುಕೊಟ್ಟಿದೆ. ಮುಂದೆ ಓದಿ...

  ಚಿತ್ರರಂಗದಲ್ಲಿ 12ನೇ ವರ್ಷಕ್ಕೆ ಕಾಲಿಡುತ್ತಿರುವ ಯಶ್: ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜು

  12ನೇ ಸ್ಥಾನದಲ್ಲಿ ಯಶ್

  12ನೇ ಸ್ಥಾನದಲ್ಲಿ ಯಶ್

  ಭಾರತದಲ್ಲಿಯೇ ಅತಿ ಹೆಚ್ಚು ಟ್ವೀಟ್‌ಗಳು ರೀಟ್ವೀಟ್ ಆಗುವ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರವಾಗಿದ್ದಾರೆ. 2020ರಲ್ಲಿ ಟ್ವೀಟ್ ಹೆಚ್ಚು ರೀಟ್ವೀಟ್ ಆದ ನಟರ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಯಶ್ 12ನೇ ಸ್ಥಾನ ಪಡೆದಿದ್ದಾರೆ.

  ಚಿತ್ರರಂಗದ ಹೆಮ್ಮೆ

  ಚಿತ್ರರಂಗದ ಹೆಮ್ಮೆ

  ಈ ಖುಷಿಯ ಸಂಗತಿಯನ್ನು ಯಶ್ ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿರುವ ನಮ್ಮ ಚಿತ್ರರಂಗದ ಏಕೈಕ ನಟ ಯಶ್. ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆ, 'ನಾಮ್ ಥೋ ಯಾದ್ ಹೈ ನಾ' ಎಂದು ಹೇಳಿಕೊಂಡಿದ್ದಾರೆ.

  ತಮ್ಮನನ್ನು ಎಷ್ಟು ಮುದ್ದಿಸುತ್ತಾಳೆ ಐರಾ...: ಮುದ ನೀಡುವ ಮುದ್ದಾದ ವಿಡಿಯೋ

  ಜೂ. ಎನ್‌ಟಿಆರ್ ಮೊದಲ ಸ್ಥಾನ

  ಜೂ. ಎನ್‌ಟಿಆರ್ ಮೊದಲ ಸ್ಥಾನ

  ನಟರು ಮಾಡಿರುವ ಟ್ವೀಟ್ 2020ರಲ್ಲಿ ಸರಾಸರಿ ಎಷ್ಟು ಬಾರಿ ಟ್ವೀಟ್ ಆಗಿದೆ ಎನ್ನುವುದು ಈ ಲೆಕ್ಕಾಚಾರ. ಇದರಲ್ಲಿ ಜೂ ಎನ್‌ಟಿಆರ್ ಮೊದಲ ಸ್ಥಾನದಲ್ಲಿದ್ದು, 13,118 ಸರಾಸರಿ ರೀ ಟ್ವೀಟ್ ಪಡೆದಿದ್ದಾರೆ. ಎರಡನೆಯ ಸ್ಥಾನದಲ್ಲಿರುವ ರಜನಿಕಾಂತ್ ಅವರ ಟ್ವೀಟ್‌ಗಳು ಸರಾಸರಿ 10,362 ಬಾರಿ ರೀಟ್ವೀಟ್ ಆಗಿವೆ. ನಂತರದ ಸ್ಥಾನದಲ್ಲಿ ಸಲ್ಮಾನ್ ಖಾನ್ ಇದ್ದು, ಅವರ ಟ್ವೀಟ್‌ಗಳು 6,312 ಬಾರಿ ರೀಟ್ವೀಟ್ ಆಗಿವೆ.

  ಸ್ಟಾರ್‌ಗಳನ್ನು ಹಿಂದಿಕ್ಕಿದ ಯಶ್

  ಸ್ಟಾರ್‌ಗಳನ್ನು ಹಿಂದಿಕ್ಕಿದ ಯಶ್

  ಈ ಪಟ್ಟಿಯಲ್ಲಿ ಯಶ್ 12ನೇ ಸ್ಥಾನದಲ್ಲಿದ್ದಾರೆ. ಅವರ ಟ್ವೀಟ್‌ಗಳು ಸರಾಸರಿ 1496 ಬಾರಿ ರೀಟ್ವೀಟ್ ಆಗಿವೆ. ವಿಶೇಷವೆಂದರೆ ಖ್ಯಾತ ನಟರಾದ ಅಮೀರ್ ಖಾನ್, ಹೃತಿಕ್ ರೋಷನ್, ಮೋಹನ್ ಲಾಲ್, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ಸಮಂತಾ, ಕಾಜಲ್ ಅಗರವಾಲ್ ಮುಂತಾದವರು ಯಶ್ ನಂತರದ ಸ್ಥಾನದಲ್ಲಿದ್ದಾರೆ.

  ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ಲೀಕ್?: ದುರಂತ ಅಂತ್ಯ ಕಾಣಲಿದ್ದಾನಾ ರಾಕಿ ಭಾಯ್?

  ದಕ್ಷಿಣ ಭಾರತದ 12 ನಟರು

  ದಕ್ಷಿಣ ಭಾರತದ 12 ನಟರು

  ಸುಮಾರು 21 ಕಲಾವಿದರ ಪಟ್ಟಿಯಲ್ಲಿ 12 ಮಂದಿ ದಕ್ಷಿಣ ಭಾರತದ ನಟರೇ ಇದ್ದಾರೆ. ಯಶ್ ಅವರಿಗಿಂತ ಮೇಲೆ ಕ್ರಮವಾಗಿ ಸಲ್ಮಾನ್ ಖಾನ್, ಮಹೇಶ್ ಬಾಬು, ಸೂರ್ಯ, ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಲ್ಲು ಅರ್ಜುನ್, ಪವನ್ ಕಲ್ಯಾಣ್, ಕಮಲ ಹಾಸನ್ ಮತ್ತು ಅಜಯ್ ದೇವಗನ್ ಇದ್ದಾರೆ.

  English summary
  Rocking Star Yash has gained 12th position in the average retweets per tweet for Indian actors in Twitter 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X