»   » ಯಶ್ ಪ್ರತಿ ಹುಟ್ಟುಹಬ್ಬಕ್ಕೆ ಮರೆಯದೆ ಮಾಡುವ ಮೊದಲ ಕೆಲಸ ಇದು

ಯಶ್ ಪ್ರತಿ ಹುಟ್ಟುಹಬ್ಬಕ್ಕೆ ಮರೆಯದೆ ಮಾಡುವ ಮೊದಲ ಕೆಲಸ ಇದು

Posted By:
Subscribe to Filmibeat Kannada

ನಟ ಯಶ್ ತಮ್ಮ ಹುಟ್ಟುಹಬ್ಬವನ್ನು ನಿನ್ನೆ ಆಚರಣೆ ಮಾಡಿಕೊಂಡಿದ್ದಾರೆ. ಬೆಳ್ಳಗೆ ಅಭಿಮಾನಿಗಳ ಜೊತೆಗೆ ಮತ್ತು ಸಂಜೆ ಚಿತ್ರರಂಗ ಗಣ್ಯರ ಜೊತೆಗೆ ಯಶ್ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಹುಟ್ಟುಹಬ್ಬ ಅಂದ ಮೇಲೆ ಕೇಕ್ ಕಟ್ ಮಾಡುವುದು, ಬಂದ ಅಭಿಮಾನಿಗಳಿಗೆ ಫೋಟೋ ನೀಡುವುದು ಎಲ್ಲ ಇರುತ್ತದೆ. ಆದರೆ ಅದರ ಜೊತೆಗೆ ಯಶ್ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬಕ್ಕೆ ಒಂದು ಕೆಲಸವನ್ನು ತಪ್ಪದೆ ಮಾಡುತ್ತಾರೆ.

ಸರಿಯಾಗಿ ಗಮನಿಸಿದರೆ ಪ್ರತಿ ವರ್ಷ ಯಶ್ ತಮ್ಮ ಹುಟ್ಟುಹಬ್ಬದ ದಿನ ಡಾ.ರಾಜ್ ಕುಮಾರ್ ಅವರ ಪುತ್ತಳಿಗೆ ಕೈ ಮುಗಿದು ಹಾರ ಹಾಕಿ ನಂತರ ಮುಂದಿನ ಕೆಲಸ ಮಾಡುತ್ತಾರೆ. ಹೊಸಕೆರೆ ಹಳ್ಳಿಯ ಯಶ್ ನಿವಾಸದ ಪಕ್ಕವೇ ಒಂದು ರಾಜ್ ಕುಮಾರ್ ಪುತ್ತಳಿ ಇದೆ. ಆ ಪುತ್ತಳಿಗೆ ಹಾರ ಹಾಕಿ, ಕೈ ಮುಗಿದು ಅಣ್ಣವ್ರ ಆಶೀರ್ವಾದ ಪಡೆದ ನಂತರ ಯಶ್ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ.

 Yash gets blessing from Rajkumar

ಇನ್ನು ನಿನ್ನೆ ಯಶ್ ರಾಧಿಕಾ ಪಂಡಿತ್ ಇಬ್ಬರು ರಾಜ್ ಪುತ್ತಳಿಗೆ ನಮಸ್ಕಾರ ಮಾಡಿದರು. ಆ ನಂತರ ಅವರ ದಿನಚರಿ ಶುರು ಆಯಿತು. ಪ್ರತಿ ವರ್ಷ ಕೂಡ ಇದು ಹೀಗೆ ಮುಂದುವರೆಯುತ್ತಿದೆ. ಅಂದಹಾಗೆ, ಯಶ್ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ ಅವರ 'ಗಜಕೇಸರಿ' ಸಿನಿಮಾದಲ್ಲಿ ಅಣ್ಣವ್ರ ಅದ್ಬುತ ಡೈಲಾಗ್ ಗಳನ್ನು ಹೇಳಿದ್ದಾರೆ. ಅದಲ್ಲದೆ ಶಿವಣ್ಣ ಮತ್ತು ಪುನೀತ್ ಜೊತೆ ಯಶ್ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ.

English summary
On his birthday kannada actor Yash gets blessing from Dr.Rajkumar. Yash offers flowers garland to Dr.Raj statue which is placed beside his house Kathriguppe Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X