'ನಟಸಾರ್ವಭೌಮ'ನಿಗಾಗಿ ಹುಬ್ಬಳ್ಳಿಗೆ ಹೊರಟ ಯಶ್.!

ಕಳೆದ ಮೂರು ದಿನಗಳಿಂದ ಐಟಿ ದಾಳಿಯಲ್ಲೇ ಮುಳುಗಿಹೋಗಿದ್ದ ಸ್ಯಾಂಡಲ್ ವುಡ್ ಇಂದು ಸಂಜೆವೊತ್ತಿಗೆ 'ನಟಸಾರ್ವಭೌಮ' ಚಿತ್ರದ ಆಡಿಯೋ ಬಿಡುಗಡೆ ಸಂಭ್ರಮದಲ್ಲಿ ತೇಲಾಡಲಿದೆ.

ಇದೀಗ, ನಟಸಾರ್ವಭೌಮನ ಆಡಿಯೋ ಸಂಭ್ರಮವನ್ನ ಹೆಚ್ಚಿಸಲು ರಾಕಿಂಗ್ ಸ್ಟಾರ್ ಯಶ್ ಕೂಡ ಹುಬ್ಬಳ್ಳಿ ಕಡೆ ಹೊರಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇಂದು ಸಂಜೆ 5.30ಕ್ಕೆ ಹುಬ್ಬಳ್ಳಿಯ ನೆಹರು ಸ್ಟೇಡಿಯಂನಲ್ಲಿ 'ನಟಸಾರ್ವಭೌಮ' ಆಡಿಯೋ ಬಿಡುಗಡೆಯಾಗುತ್ತಿದ್ದು, ಯಶ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯುವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ಪವನ್ ಒಡೆಯರ್ ಹುಬ್ಬಳ್ಳಿ ತಲುಪಿದ್ದಾರೆ.

yash guest for natasarvabhouma audio release

ಇಷ್ಟು ದಿನ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಶೋಗೆ ಯಾರು ಅತಿಥಿಯಾಗಲಿದ್ದಾರೆ ಎಂಬ ಕುತೂಹಲ ಕಾಡುತ್ತಿತ್ತು. ಇದೀಗ, ಕೆಜಿಎಫ್ ಸ್ಟಾರ್ ಯಶ್ ಭಾಗವಹಿಸುತ್ತಿರುವುದು ದೊಡ್ಮನೆ ಅಭಿಮಾನಿಗಳಿಗೆ ಮತ್ತಷ್ಟು ಜೋಶ್ ಹೆಚ್ಚಿಸಿದೆ.

ಇನ್ನುಳಿದಂತೆ ಪವನ್ ಒಡೆಯರ್ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಜನವರಿ ತಿಂಗಳಲ್ಲೇ ಈ ಸಿನಿಮಾ ತೆರೆಕಾಣಲಿದೆ.

More from Filmibeat

English summary
Kannada actor, rocking star yash guest for natasarvabhouma audio release in hubli today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X