»   » ರಾಕಿಂಗ್ ಸ್ಟಾರ್ ಯಶ್ ಗೆ 'ಬಾಸ್' ಮೇಲ್ಯಾಕೆ ಅತಿಯಾದ ಪ್ರೀತಿ.?

ರಾಕಿಂಗ್ ಸ್ಟಾರ್ ಯಶ್ ಗೆ 'ಬಾಸ್' ಮೇಲ್ಯಾಕೆ ಅತಿಯಾದ ಪ್ರೀತಿ.?

Posted By:
Subscribe to Filmibeat Kannada
ಯಶ್ ಜೀವನದಲ್ಲಿ 'ಬಾಸ್' ಪ್ರಾಮುಖ್ಯತೆ ಏನು ಅನ್ನೋದರ ಇಂಟ್ರೆಸ್ಟಿಂಗ್ ವಿಚಾರ | Filmibeat Kannada

ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ ವುಡ್ ನ ಓಡುವ ಕುದುರೆ. ಯಶ್ ಮದುವೆ ವಾರ್ಷಿಕೋತ್ಸವಕ್ಕೆ ಕಾರು ಖರೀದಿ ಮಾಡಿರೋದೇ ಈಗ ಎಲ್ಲೆಡೆ ಸುದ್ದಿ. ಯಶ್ ಮೂರು ಬೆಂಜ್ ಕಾರ್ ಖರೀದಿ ಮಾಡೋವಷ್ಟು ಸಂಪಾದನೆ ಮಾಡೋದಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅದು ಸಾಕಷ್ಟು ಜನರಿಗೆ ಗೊತ್ತಿದೆ. ಅದೇ ರೀತಿ ಚಿಕ್ಕ ವಯಸ್ಸಿನಿಂದಲೂ 'ಬಾಸ್' ಅಂದ್ರೆ ಯಶ್ ಅವರಿಗೆ ತುಂಬಾ ಪ್ರೀತಿ.

ಯಾರು ಈ ಬಾಸ್ ? ಅವರ ಮೇಲೆ ರಾಕಿಂಗ್ ಸ್ಟಾರ್ ಗೆ ಯಾಕೆ ಪ್ರೀತಿ ಇವೆಲ್ಲವೂ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು. ಯಶ್ ಅವರ ಪಾಲಿಗೆ ಬಾಸ್ ಅಂದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ. ಚಿಕ್ಕಂದಿನಿಂದಲೇ ಎಲ್ಲರೂ ಗುರುತಿಸುವಂತೆ ಬೆಳೆಯಬೇಕು, ಎಲ್ಲಿರಿಂದ ಬಾಸ್ ಅನ್ನಿಸಿಕೊಳ್ಳಬೇಕು ಅನ್ನೋದು ಆಧುನಿಕ ಭಗೀರಥನ ಕನಸಾಗಿತ್ತು. ಯಶ್ ಜೀವನದಲ್ಲಿ ಬಾಸ್ ಪ್ರಾಮುಖ್ಯತೆ ಹೇಗಿದೆ ಅನ್ನೋದರ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ಮುಂದೆ ಓದಿ

ಯಶ್ ಕಾರ್ ಗಳಲ್ಲಿ ಬಾಸ್

ಯಶ್ ತಾವು ಓಡಾಡೋದಕ್ಕೆ ಬಳಸುವ ಎಲ್ಲಾ ಕಾರ್ ಗಳ ನಂಬರ್ ನಲ್ಲಿ 'ಬಾಸ್' ಅಂತಾನೆ ಇರುತ್ತೆ. ಈ ಹಿಂದೆಯಿಂದ ಪಜೆರೊ ಮತ್ತು ಆಡಿ ಕಾರ್ ಗಳ ನಂಬರ್ "8055" ಅಂತಲೇ ಇರೋದು. ಇತ್ತೀಚಿಗಷ್ಟೆ ಖರೀದಿಸಿರೋ ಬೆಂಜ್ ಕಾರಿಗೂ ಇದೇ ನಂಬರ್ ಬರಲಿದೆ.

ರಾಕಿಂಗ್ ಸ್ಟಾರ್ ಸಿನಿಮಾಗಳಲ್ಲೂ ಬಾಸ್

ರಾಕಿಂಗ್ ಸ್ಟಾರ್ ಅಭಿನಯದ ಸಿನಿಮಾಗಳಲ್ಲೂ ಬಾಸ್ ಅನ್ನೋ ಪದಗಳು ಹಾಗೂ ಸಂಭಾಷಣೆ ಇದ್ದೇ ಇರುತ್ತೆ. ಮಾಸ್ಟರ್ ಪೀಸ್ ಸಿನಿಮಾದ ಹಾಡೊಂದರಲ್ಲಿ ಯಶ್ ಧರಿಸಿದ್ದ ಶರ್ಟ್ ಮೇಲೆ 'ಬಾಸ್' ಅನ್ನೋ ಹೆಸರಿದೆ. ಅಷ್ಟೇ ಅಲ್ಲದೆ ಸುಹಾಸಿನಿ ಅವರ ಸಂಭಾಷಣೆಯಲ್ಲೂ ಬಾಸ್ ಅನ್ನುವುದರ ಬಗ್ಗೆ ಡೈಲಾಗ್ ಇದೆ.

ಸಂತು ಸ್ಟ್ರೈಟ್ ಫಾರ್ವರ್ಡ್ ನಲ್ಲಿ ಬಾಸ್ ಹಾಡು

ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದ ಹಾಡಿನಲ್ಲಿ 'ಬಾಸ್' ಅನ್ನೋ ಪದವನ್ನ ಬಳಸಿ ಹಾಡನ್ನ ಬರೆಯಲಾಗಿದೆ. ಅದರ ಜೊತೆಗೆ ಹಾಡಿನ ಸೆಟ್ ಕೂಡ ಅದೇ ರೀತಿ ಇದೆ.

ಸ್ನೇಹಿತರಿಗೆ ಯಶ್ ಬಾಸ್

ಯಂಗ್ ಅಭಿಮಾನಿಗಳಿಗೆ ಯಶ್ ಬಾಸ್. ರಾಕಿಂಗ್ ಸ್ಟಾರ್ ಜೊತೆ ಇರೋ ಸ್ನೇಹಿತರೆಲ್ಲರೂ ಅವರನ್ನ ಕರೆಯೋದು ಬಾಸ್ ಅಂತಲೇ. ಯಶ್ ರನ್ನ 'ಬಾಸ್' ಅಂತ ಕರೆಯೋದಕ್ಕೂ ಅರ್ಥವಿದೆ. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ರೈತರಿಗಾಗಿಯೂ ಯಶ್ ಶ್ರಮಿಸುತ್ತಿದ್ದಾರೆ. ಕನಸು ಕಂಡಂತೆ ಕಷ್ಟ ಪಟ್ಟು ಬೆಳೆದಿದ್ದಾರೆ.

English summary
All car numbers are the same as Kannada actor Rocking Star Yash has a huge love for the word Boss,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada