For Quick Alerts
  ALLOW NOTIFICATIONS  
  For Daily Alerts

  ಅಪರಾಧ ಮುಕ್ತ ಸಮಾಜಕ್ಕಾಗಿ ಪಣತೊಟ್ಟ ರಾಕಿಂಗ್ ಸ್ಟಾರ್

  By Pavithra
  |

  ನಾವು ಜೀವನ ಮಾಡುವ ಕಡೆಯಲ್ಲಿ ಉತ್ತಮ ಪರಿಸರ ಸೃಷ್ಟಿ ಮಾಡಿಕೊಳ್ಳಬೇಕು ಎಂದು ಸಂದೇಶ ಸಾರಿದ ಯಶ್ ಈಗ ಅಪರಾಧ ಮುಕ್ತ ಸಮಾಜವನ್ನ ಮಾಡಲು ನಿರ್ಧರಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರನ್ನ ಸಿಸಿಬಿ ಯ ರಾಯಭಾರಿ ಆಗಿ ಆಯ್ಕೆ ಮಾಡಲಾಗಿದೆ.

  ಪ್ರೋ ಕಬ್ಬಡಿ ಜಾಹೀರಾತನ್ನು ಹೊರತು ಪಡಿಸಿ ಈವರೆಗೆ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳದ ರಾಕಿಂಗ್ ಸ್ಟಾರ್‌, ಇದೇ ಮೊದಲ ಭಾರಿಗೆ ಪೊಲೀಸ್‌ ಇಲಾಖೆಯ ರಾಯಭಾರಿ ಆಗುವ ಮೂಲಕ ಮೊಟ್ಟ ಮೊದಲ ಜಾಹೀರಾತಿನಲ್ಲಿ ಅಭಿನಯಿಸಲಿದ್ದಾರೆ.

  ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್

  ಈ ಹಿಂದೆ ಕಿಚ್ಚ ಸುದೀಪ್ ಸಿಸಿಬಿ ಯ ರಾಯಭಾರಿ ಆಗಿದ್ದರು. ಕಿಚ್ಚನ ನಂತರ ರಾಕಿಂಗ್ ಸ್ಟಾರ್‌ ಅಪರಾಧಿಗಳಿಗೆ ಮಾತಿನಲ್ಲೇ ಬುದ್ದಿ ಹೇಳಲಿದ್ದಾರೆ. ಸರ್ಕಾರಿಯ ಸಾಕಷ್ಟು ಜಾಹೀರಾತುಗಳಲ್ಲಿ ಸಿನಿಮಾ ಹಾಗೂ ಕ್ರೀಡಾಲೋಕದ ಗಣ್ಯರು ಭಾಗಿ ಆಗಿದ್ದಾರೆ.

  ಯುವ ಮನಸ್ಸುಗಳನ್ನು ಸೆಳೆಯಲು "ಬ್ರಾಂಡ್‌ ಅಂಬಾಸಿಡರ್' ಬಳಕೆಗೆ ಮುಂದಾಗಿರುವ ಪೊಲೀಸ್ ಇಲಾಖೆ ಮಾದಕ ವಸ್ತು ಸೇವನೆ, ರೌಡಿ ಚಟುವಟಕೆಗಳು ಹಾಗೂ ಕಳ್ಳತನ ಸೇರಿದಂತೆ ಅಪರಾಧ ಚಟುವಟಿಕೆಗಳಿಂದ ಮುಕ್ತರಾಗುವಂತೆ ಸಂದೇಶ ಸಾರುವ ಜಾಹೀರಾತುಗಳಲ್ಲಿ ಯಶ್ ಅಭಿನಯಿಸಲಿದ್ದಾರಂತೆ.

  ಗೂಗ್ಲಿ ಸಿನಿಮಾದಲ್ಲಿ ಖಾಕಿ ತೊಟ್ಟು ಪೋಸ್ ಕೊಟ್ಟಿದ್ದ ರಾಕಿಂಗ್ ಸ್ಟಾರ್ ಈ ಬಾರಿ ಅಪರಾಧಿಗಳಿಗೆ ಪಾಠ ಹೇಳಲು ನಿರ್ಧರಿಸಿದ್ದಾರೆ. ಸಾಕಷ್ಟು ವಿಚಾರಗಳಲ್ಲಿ ಅನೇಕರಿಗೆ ಮಾದರಿ ಆಗಿರುವ ಯಶ್ ಮತ್ತೊಂದು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ.

  ಡಿ ಬಾಸ್ ಮನವಿಯನ್ನ ಅಭಿಮಾನಿಗಳು ಪರಿಗಣಿಸಬೇಕಾಗಿದೆ

  English summary
  Kannada actor Yash has been selected as the Ambassador of CCB. Yash will be acting on message-sharing ads to be free from criminal activities including drug abuse, rowdy activities and theft

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X