For Quick Alerts
  ALLOW NOTIFICATIONS  
  For Daily Alerts

  ಶಂಕರ್ ಸಿನಿಮಾಕ್ಕೂ ಮುನ್ನ ಕನ್ನಡಿಗ ನಿರ್ದೇಶಕನಿಗೆ ಯೆಸ್ ಎಂದ ಯಶ್

  |

  ನಟ ಯಶ್ ಅವರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬುದು ಹಲವರ ಕುತೂಹಲ. ಕೆಜಿಎಫ್ ಸಿನಿಮಾ ಸರಣಿಯ ಪ್ರಚಂಡ ಹಿಟ್ ಬಳಿಕ ಯಶ್ ರ ಮುಂದಿನ ಸಿನಿಮಾದ ಆಯ್ಕೆ ಏನಾಗಿರುತ್ತದೆ ಎಂಬುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಕುತೂಹಲವೂ ಆಗಿದೆ.

  ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಓಕೆ ಹೇಳಿದ ಯಶ್ | Filmibeat Kannada

  2017 ರಿಂದಲೂ ಯಶ್ ಅವರು ಕೆಜಿಎಫ್ ಸಿನಿಮಾಕ್ಕೆ ಮಾತ್ರವೇ ಕೆಲಸ ಮಾಡಿದ್ದಾರೆ. ಮೊದಲ ಕೆಜಿಎಫ್ ಸಿನಿಮಾ ಚಿತ್ರೀಕರಣ ಮುಗಿದಾಗ 'ಕಿರಾತಕ 2' ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಅದೇಕೋ ಆ ಸಿನಿಮಾ ಸೆಟ್ಟೇರಲಿಲ್ಲ.

  ಇದೀಗ ಹೊಸ ಸುದ್ದಿಯ ಪ್ರಕಾರ ಯಶ್ ಅವರು ತಮಿಳಿನ ಸೂಪರ್ ಹಿಟ್ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಸಿನಿಮಾಕ್ಕೂ ಮುನ್ನಾ ಕನ್ನಡದ ನಿರ್ದೇಶಕನ ಸಿನಿಮಾಕ್ಕೆ ಎಸ್ ಎಂದಿದ್ದಾರೆ ಎನ್ನಲಾಗುತ್ತಿದೆ.

  ಯಶ್ ಗೆ ಕತೆ ಹೇಳಿರುವ ನರ್ತನ್?

  ಯಶ್ ಗೆ ಕತೆ ಹೇಳಿರುವ ನರ್ತನ್?

  'ಮಫ್ತಿ' ಅಂಥಹಾ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿರುವ ನರ್ತನ್‌, ಯಶ್ ಗೆ ಕತೆ ಹೇಳಿದ್ದು, ನರ್ತನ್ ಸಿನಿಮಾಕ್ಕೆ ಯಶ್ ಓಕೆ ಎಂದಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣವು ಶಂಕರ್ ಸಿನಿಮಾಕ್ಕೂ ಮುನ್ನವೇ ಪ್ರಾರಂಭವಾಗಲಿದೆಯಂತೆ.

  ಇದೂ ಸಹ ಪ್ಯಾನ್ ಇಂಡಿಯಾ ಸಿನಿಮಾ

  ಇದೂ ಸಹ ಪ್ಯಾನ್ ಇಂಡಿಯಾ ಸಿನಿಮಾ

  'ಮಫ್ತಿ' ಅಂತವಾ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರೂ ಸಹ ನರ್ತನ್ ಆ ನಂತರ ಬೇರೆ ಸಿನಿಮಾ ನಿರ್ದೇಶಿಸಿಲ್ಲ. ಕತೆಯ ಬಗ್ಗೆ ಅತೀವವಾದ ಕಾಳಜಿವಹಿಸುವ ನರ್ತನ್, ಕತೆ ಪಕ್ಕಾ ಆಗಿರುವ ಕಾರಣ ಯಶ್ ಅನ್ನು ಸಂಪರ್ಕಿಸಿದ್ದಾರಂತೆ. ಈ ಸಿನಿಮಾ ಸಹ ಕೆಜಿಎಫ್ ನಂತೆ ಅದ್ಧೂರಿ ಪ್ಯಾನ್ ಸಿನಿಮಾ ಆಗಿರಲಿದೆ.

  ಶಂಕರ್ ಸಿನಿಮಾದಲ್ಲಿ ನಟ ಯಶ್

  ಶಂಕರ್ ಸಿನಿಮಾದಲ್ಲಿ ನಟ ಯಶ್

  ಇಂಡಿಯನ್, ರೋಬೊ, ಅನ್ನಿಯನ್, ಬಾಯ್ಸ್‌ ನಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಶಂಕರ್ ಅವರ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುವುದು ಬಹುತೇಕ ಖಾತ್ರಿಯಾಗಿದೆ. ಈ ಸಿನಿಮಾದಲ್ಲಿ ಯಶ್ ಜೊತೆಗೆ ತೆಲುಗಿನ ರಾಮ್ ಚರಣ್ ತೇಜ ಸಹ ಇರಲಿದ್ದಾರಂತೆ.

  ಜುಲೈ 16 ಕ್ಕೆ ಕೆಜಿಎಫ್ 2

  ಜುಲೈ 16 ಕ್ಕೆ ಕೆಜಿಎಫ್ 2

  ಇನ್ನು ಕೆಜಿಎಫ್ 2 ಸಿನಿಮಾದ ಬಿಡುಗಡೆ ಕೆಲವೇ ದಿನಗಳಲ್ಲಿ ಆಗಲಿದೆ. ಜುಲೈ 16 ರಂದು ಕೆಜಿಎಫ್ 2 ಸಿನಿಮಾ ತೆರೆಗೆ ಬರಲಿದೆ. ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿ ನಟಿಸಿದ್ದಾರೆ. ರವೀನಾ ಟಂಡನ್, ಪ್ರಕಾಶ್ ರೈ, ಇನ್ನೂ ಕೆಲವು ಹೊಸ ಪಾತ್ರಗಳು ಸಿನಿಮಾದಲ್ಲಿ ಇರಲಿವೆ.

  English summary
  Actor Yash may act in director Narthan's next movie. Narthan well known for his movie Mafti. After that Yash will act in Shankar's movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X