For Quick Alerts
  ALLOW NOTIFICATIONS  
  For Daily Alerts

  ಮಲೆಯಾಳಂ ಸ್ಟಾರ್ ನಟ ಮೋಹನ್ ಲಾಲ್ ಭೇಟಿಯಾದ ರಾಕಿ ಭಾಯ್

  |

  ಕೆಜಿಎಫ್ ಚಿತ್ರದ ನಂತರ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಸ್ಯಾಂಡಲ್ ವುಡ್ ಮಾತ್ರಲ್ಲದೆ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಯಶ್ ಗೆ ಫಿದಾ ಆಗದವರೆ ಇಲ್ಲ. ಕನ್ನಡ ಅಭಿಮಾನಿಗಳು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

  ಯಶ್ ಯಾವುದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೆ ಸಾಕು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಯಶ್ ಅಭಿನಯಕ್ಕೆ ಮನಸೋಲದವರೆ ಇಲ್ಲ. ಅಭಿಮಾನಿಗಳು ಮಾತ್ರವಲ್ಲದೆ ಸ್ಟಾರ್ ನಟರು ಸಹ ಯಶ್ ಗೆ ಫಿದಾ ಆಗಿದ್ದಾರೆ. ಈಗಾಗಲೆ ದಕ್ಷಿಣ ಭಾರತೀಯ ಚಿತ್ರರಂಗದ ಸಾಕಷ್ಟು ಸ್ಟಾರ್ ನಟರನ್ನು ಭೇಟಿಯಾಗಿರುವ ಯಶ್ ಈಗ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಭೇಟಿಯಾಗಿ.

  'KGF ಚಾಪ್ಟರ್ 2' ತೆಲುಗು ವರ್ಷನ್ ದಾಖಲೆ ಮೊತ್ತಕ್ಕೆ ಮಾರಾಟ?'KGF ಚಾಪ್ಟರ್ 2' ತೆಲುಗು ವರ್ಷನ್ ದಾಖಲೆ ಮೊತ್ತಕ್ಕೆ ಮಾರಾಟ?

  ಮೊನ್ನೆ ಮೊನ್ನಯಷ್ಟೆ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಭೇಟಿಯಾಗಿ ಮಾತುಕತೆ ನಡೆಸಿದ್ದ ಯಶ್, ಈಗ ಮೋಹನ್ ಲಾಲ್ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ. ಅಂದ್ಹಾಗೆ ಯಶ್ ಮತ್ತು ಮೋಹನ್ ಲಾಲ್ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದಾರೆ.

  ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಮೋಹನ್ ಲಾಲ್ ಗೆಸ್ಟ್ ಆಗಿ ಬಂದಿದ್ದರು. ಅದೆ ಕಾರ್ಯಕ್ರಮಕ್ಕೆ ಯಶ್ ಕೂಡ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದರು. ಈ ಸಮಯದಲ್ಲಿ ಇಬ್ಬರು ಭೇಟಿಯಾಗಿ ಮಾತುಕತೆ ನೆಡಸಿದ್ದಾರೆ. ಇಬ್ಬರು ಒಟ್ಟಿಗೆ ಕುಳಿತು ಮಾತನಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಶ್ ಗೆ ಮಲಯಾಳಂನಲ್ಲಿಯೂ ಅಪಾರ ಸಂಖ್ಯೆ ಅಭಿಮಾನಿಗಳು ಇದ್ದಾರೆ. ಇಬ್ಬರ ಭೇಟಿ ನೋಡಿ ಮಲಯಾಳಂ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

  English summary
  Kannada Actor Yash meets Malayalam Super star Mohanlal in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X