Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಯಶ್ ಬದಲು ಬೇರೆ ಹೀರೊ 'ರಾಕಿ ಭಾಯ್' ಆಗಬಹುದು" –ವಿಜಯ್ ಕಿರಗಂದೂರು
ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಸಿನಿಮಾ 'ಕೆಜಿಎಫ್ ಚಾಪ್ಟರ್ 2'. ಈ ಸಿನಿಮಾ ಗಳಿಕೆಯಲ್ಲಿ ಅಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ತಂದು ಕೊಟ್ಟ ಸಿನಿಮಾ ಕೂಡ ಹೌದು. ಈ ಸಿನಿಮಾ ಮೂಲಕವೇ ರಾಕಿ ಭಾಯ್ ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ.
'ಕೆಜಿಎಫ್' ಸಿರೀಸ್ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಶಾಕಿಂಗ್ ಅಪ್‌ಡೇಟ್ ಕೊಟ್ಟಿದ್ದಾರೆ. ಎಲ್ಲರೂ 'ಕೆಜಿಎಫ್ ಚಾಪ್ಟರ್ 3'ಗಾಗಿ ಎದುರು ನೋಡುತ್ತಿರುವಾಗಲೇ ವಿಜಯ್ ಕೊಟ್ಟಿರೋ ಹೇಳಿಕೆ ಬಗ್ಗೆ ಎಲ್ಲೆಡೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ರಾಕಿ
ಭಾಯ್
ಎಷ್ಟು
ಕೋಟಿಯ
ಒಡೆಯ?
ಯಶ್
ಬಳಿ
ಬಂಗಲೆ,
ಕಾರು,
ತೋಟ
ಏನೇನಿದೆ?
'ಕೆಜಿಎಫ್ 2' ಸಿನಿಮಾದಿಂದ ಸಿಕ್ಕಿರೋ ಯಶಸ್ಸು ಹೊಂಬಾಳೆ ಫಿಲ್ಸ್‌ಗೆ ಸಿಕ್ಕಾಪಟ್ಟೆ ಬಲ ಸಿಕ್ಕಂತಾಗಿದೆ. ಈ ಮೂಲಕ ಬೇರೆ ಬೇರೆ ಭಾಷೆಗಳಿಗೂ ಲಗ್ಗೆ ಇಟ್ಟಿರೋ ಸಂಸ್ಥೆ 'ಕೆಜಿಎಫ್' ಸರಣಿಯನ್ನು ಮುಂದುವರೆಸೋ ನಿರ್ಧಾರಕ್ಕೆ ಬಂದಿದೆ. ಇದೇ ವೇಳೆ ಕೆಜಿಎಫ್ ಫ್ರಾಂಚೈಸಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಬದಲು ಬೇರೆ ಹೀರೊ ರಾಕಿ ಭಾಯ್ ಆಗಿ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಅದು ಯಾವಾಗ? ಅನ್ನೋ ಪ್ರಶ್ನೆಗೆ ಉತ್ತರವಿದೆ.

ಬೇರೆ ಹೀರೊ ರಾಕಿ ಭಾಯ್ ಆಗ್ತಾರಾ?
ಇತ್ತೀಚೆಗೆ 'ಕೆಜಿಎಫ್' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಹಿಂದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ 'ಕೆಜಿಎಫ್' ಮುಂದಿನ ಸರಣಿಯಲ್ಲಿ ರಾಇ ಭಾಯ್ ಪಾತ್ರವನ್ನು ಬೇರೆ ಹೀರೊನೂ ಮಾಡಬಹುದು ಎಂದು ಹೇಳಿಕೆ ಕೊಟ್ಟಿದ್ದಾರೆ. " ಕೆಜಿಎಫ್ 5ನೇ ಫ್ರಾಂಚೈಸಿ ಬಳಿಕ ರಾಕಿ ಭಾಯ್ ಪಾತ್ರವನ್ನು ಬೇರೆ ಹೀರೊ ಮಾಡುವ ಸಾಧ್ಯತೆ ಇದೆ. ಜೇಮ್ಸ್ ಬಾಂಡ್ ಸಿರೀಸ್‌ನಂತೆ ಹೀರೊಗಳು ಬದಲಾಗುತ್ತಾ ಇರುತ್ತಾರೆ." ಎಂದು ಹೇಳಿದ್ದಾರೆ.
ಆಮಿರ್
ಮೇಲೆ
ಸೌತ್
ಫಿಲ್ಮ್
ಮೇಕರ್ಸ್
ಕಣ್ಣು:
ದಿಗ್ಗಜರ
ಕಾದಾಟಕ್ಕೆ
ಮುಹೂರ್ತ
ಇಟ್ರಾ
ಪ್ರಶಾಂತ್
ನೀಲ್?

ರಾಕಿ ಭಾಯ್ ಪಾತ್ರಕ್ಕೆ ಬೇರೆ ಹೀರೊ ಬರಬಹುದು ಎಂದಿದ್ದೇಕೆ?
'ಕೆಜಿಎಫ್ ಚಾಪ್ಟರ್ 3'ಗೆ ಈ ಸರಣಿ ನಿಲ್ಲಲ್ಲ. ಐದನೇ ಚಾಪ್ಟರ್ ವರೆಗೂ ಈ ಸರಣಿ ಮುಂದುವರೆಯುತ್ತಲೇ ಇರುತ್ತೆ ಎಂದು ವಿಜಯ್ ಕಿರಗಂದೂರು ಅವರೇ ಹೇಳಿದ್ದಾರೆ. ಹೀಗಾಗಿ ಐದು ಸರಣಿಯನ್ನು ದಾಟಿ ಮುಂದಕ್ಕೆ ಹೋದರೇ ಆಗ ರಾಕಿ ಭಾಯ್ ಪಾತ್ರವನ್ನು ಯಶ್ ಬದಲು ಬೇರೆ ಹೀರೊ ಮಾಡಬಹುದು ಎಂದು ಹೇಳಿದ್ದಾರೆ. ಆದರೆ, 'ಕೆಜಿಎಫ್ 3' ರಿಲೀಸ್ ಆಗೋದೇ ಮೂರು ವರ್ಷಗಳ ಬಳಿಕ. ಹೀಗಾಗಿ 'ಕೆಜಿಎಫ್ 4', 'ಕೆಜಿಎಫ್ 5' ರಿಲೀಸ್ ವೇಳೆಗೆ ಎಷ್ಟು ಸಮಯ ಹಿಡಿಯುತ್ತೆ. ಈ ಕಾರಣಕ್ಕೆ ವಿಜಯ್ ಕಿರಗಂದೂರು ಹೀರೊ ಬದಲಾಗಬಹುದು ಎಂದು ಹೇಳಿಕೆ ನೀಡಿದ್ದಾರೆ.

'ಕೆಜಿಎಫ್ 3' ಯಾವಾಗ?
'ಕೆಜಿಎಫ್ 2 ಬ್ಲಾಕ್ ಬಸ್ಟರ್ ಲಿಸ್ಟ್ ಸೇರುತ್ತಿದ್ದಂತೆ 'ಕೆಜಿಎಫ್ 3' ಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ನಿರ್ಮಾಣ ಸಂಸ್ಥೆ ಕೂಡ 'ಕೆಜಿಎಫ್ ಚಾಪ್ಟರ್ 3' ಸೆಟ್ಟೇರಿಸುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಆದರೆ, ಪ್ರಶಾಂತ್ ನೀಲ್ 'ಸಲಾರ್' ಸೇರಿದಂತೆ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋದ್ರಿಂದ 2025ಕ್ಕೆ ಸೆಟ್ಟೇರಬಹುದು. ಹಾಗೇ 2026ಕ್ಕೆ ರಿಲೀಸ್ ಆಗಬಹುದು ಎಂದು ಸುಳಿವು ನೀಡಿದ್ದಾರೆ.
"ನಾನು
ಕೂಡ
'ಕೆಜಿಎಫ್'
ನಿರ್ಮಾಪಕ..
ಸ್ಟಾರ್
ಆಗುವುದಕ್ಕೆ
ಮೊದಲೇ
ನಾನು
ಸೂಪರ್‌ಸ್ಟಾರ್"-ಯಶ್

'ಕೆಜಿಎಫ್'ನಿಂದ ಭರ್ಜರಿ ಸಕ್ಸಸ್
2018ರಲ್ಲಿ 'ಕೆಜಿಎಫ್ ಚಾಪ್ಟರ್ 1' ತೆರೆಕಂಡಾಗ ಈ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದು ಯಾರೂ ಊಹಿಸಿರಲಿಲ್ಲ. ಚಾಪ್ಟರ್ 1 ಸೂಪರ್ ಹಿಟ್ ಆಗಿತ್ತು. ಈ ಬೆನ್ನಲ್ಲೇ 'ಕೆಜಿಎಫ್ ಚಾಪ್ಟರ್ 2' ಬಾಕ್ಸಾಫೀಸ್‌ನಲ್ಲಿ ಸುಮಾರು 1200 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ಹೀಗಾಗಿ ಈ ಫ್ರಾಂಚೈಸಿಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಖುಷಿ ವಿಷಯ ಏನಂದ್ರೆ, 5ನೇ ಪಾರ್ಟ್ ವರೆಗೂ 'ಕೆಜಿಎಫ್' ಸರಣಿಯನ್ನೇ ಮುಂದುವರೆಸಲಿದೆ. ಅಲ್ಲದೆ, 5ನೇ ಚಾಪ್ಟರ್‌ವರೆಗೂ ಯಶ್ ರಾಕಿ ಭಾಯ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.