»   » ಸೊಸೆ ರಾಧಿಕಾ ಪಂಡಿತ್ ಗೆ ಪ್ರೀತಿಯ ಅತ್ತೆ ಕಡೆಯಿಂದ ಸಿಕ್ಕಿದೆ ಅದ್ಧೂರಿ ಗಿಫ್ಟ್!

ಸೊಸೆ ರಾಧಿಕಾ ಪಂಡಿತ್ ಗೆ ಪ್ರೀತಿಯ ಅತ್ತೆ ಕಡೆಯಿಂದ ಸಿಕ್ಕಿದೆ ಅದ್ಧೂರಿ ಗಿಫ್ಟ್!

Posted By:
Subscribe to Filmibeat Kannada

ಅತ್ತೆ ಸೊಸೆ ಅಂದರೆ ಹಾವು ಮುಂಗುಸಿ ತರಹ ಜಗಳ ಆಡುವವರೇ ಜಾಸ್ತಿ. ಆದರೆ ನಟಿ ರಾಧಿಕಾ ಪಂಡಿತ್ ಮತ್ತು ಅವರ ಅತ್ತೆ (ಯಶ್ ತಾಯಿ) ಪುಷ್ಪ ಮಾತ್ರ ಅಮ್ಮ ಮಗಳಂತೆ ಇದ್ದಾರೆ. ಇವರನ್ನು ನೋಡಿದರೆ ಅತ್ತೆ ಸೊಸೆ ಅಂದರೆ ಈ ರೀತಿ ಇರಬೇಕು ಅಂತ ಅನಿಸುತ್ತದೆ.

ಅಪ್ಪಟ್ಟ ಕನ್ನಡತಿ ರಾಧಿಕಾ ಪಂಡಿತ್ ಕನ್ನಡ ಪ್ರೇಮ ನಿಜಕ್ಕೂ ಮೆಚ್ಚುವಂಥದ್ದು!

ಸೊಸೆ ರಾಧಿಕಾ ಪಂಡಿತ್ ಗೆ ಪ್ರೀತಿಯ ಅತ್ತೆ ಕಡೆಯಿಂದ ಈಗ ಒಂದು ಅದ್ದೂರಿ ಗಿಫ್ಟ್ ಸಿಕ್ಕಿದೆ. ಇತ್ತೀಚಿಗಷ್ಟೆ ಯಶ್ ಮತ್ತು ರಾಧಿಕಾ ಹೊಸ ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ ಈ ಮನೆಯನ್ನು ಉಡುಗೊರೆಯಾಗಿ ನೀಡಿದ್ದು ಯಶ್ ತಾಯಿ ಪುಷ್ಪ ಅವರಂತೆ.

Yash mother Pushpa gifted new house to Radhika Pandit

ಪ್ರೀತಿಯ ಮಗ ಮತ್ತು ಸೊಸೆಗೆ ಹೊಸ ಮನೆಯನ್ನು ಪುಷ್ಪ ಕೊಡಿಸಿದ್ದು, ಹಾಗಂತ ಸ್ವತಃ ಯಶ್ ಹೇಳಿದ್ದಾರೆ. ''ಅಮ್ಮನಿಗೆ ಈ ರೀತಿಯ ಮನೆ ಕಟ್ಟಿಸಬೇಕು ಎಂಬ ಆಸೆ ಇತ್ತು. ನಗರದ ಮಧ್ಯ ಭಾಗದಲ್ಲಿ ಮನೆ ಇರಲಿ ಎನ್ನುವುದು ಅಮ್ಮನ ಆಸೆ ಆಗಿತ್ತು. ನಾಲ್ಕೈದು ತಿಂಗಳ ಹಿಂದೆಯೇ ಇದನ್ನು ಅಮ್ಮ ಕೊಂಡುಕೊಳ್ಳಲು ನಿರ್ಧರಿಸಿದ್ದು, ಇದು ಅಮ್ಮ ನಮ್ಮಿಬ್ಬರಿಗೆ ಕೊಟ್ಟ ಉಡುಗೊರೆ'' ಎಂದು ಯಶ್ ಹೇಳಿದ್ದಾರೆ.

ಹೊಸ ಮನೆ ಖರೀದಿಸಿದ ಯಶ್ - ರಾಧಿಕಾ ಪಂಡಿತ್ ಜೋಡಿ

Yash mother Pushpa gifted new house to Radhika Pandit

ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಪೆಂಟ್ ಹೌಸ್ ತಗೆದುಕೊಂಡಿದ್ದು, ಸದ್ಯ ಅದರ ಇಂಟೀರಿಯರ್ ಕೆಲಸಗಳು ನಡೆಯುತ್ತಿದೆಯಂತೆ.

English summary
Actor Yash mother Pushpa gifted new house to Daughter in law Radhika Pandit

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada