»   » ಯಶ್ 'ರಾಮಾಚಾರಿ'ಗೆ ಬಿಡುಗಡೆ ಭಾಗ್ಯ ಯಾವಾಗ?

ಯಶ್ 'ರಾಮಾಚಾರಿ'ಗೆ ಬಿಡುಗಡೆ ಭಾಗ್ಯ ಯಾವಾಗ?

Posted By:
Subscribe to Filmibeat Kannada

'ಗಜಕೇಸರಿ' ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ಚಿತ್ರಗಳನ್ನು ಪ್ರೇಕ್ಷಕರು ಕಾತುರದಿಂದ ನಿರೀಕ್ಷಿಸುವಂತಾಗಿದೆ. ಆದರೆ ಅವರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಯಾವಾಗ ತೆರೆಕಾಣುತ್ತದೆ ಎಂಬ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ.

ಇದೇ ಡಿಸೆಂಬರ್ 25 ಅಥವಾ 26ಕ್ಕೆ ಚಿತ್ರ ತೆರೆಗೆ ಬರುವುದು ಬಹುತೇಕ ಖಚಿತವಾಗಿದೆ. ಕ್ರಿಸ್ಮಸ್ ಹಬ್ಬಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಅಕ್ಟೋಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ನವೆಂಬರ್ ಗೆ ಮುಂದೂಡಿ ಕಡೆಗೆ ಡಿಸೆಂಬರ್ ನಲ್ಲಿ ತೆರೆಕಾಣಲು ಸಿದ್ಧವಾಗಿದೆ. ["ಲೋ ರಾಮಾಚಾರಿ ಎಲ್ಲಿದ್ದೀಯೋ" ಟೀಸರ್ ಸೂಪರ್]

Mr & Mrs Ramachari

ಚಿತ್ರೀಕರಣದಲ್ಲಾದ ಹಲವಾರು ತೊಂದರೆಗಳು, ಹಾಡುಗಳ ಚಿತ್ರೀಕರಣ ತಡವಾಗಿದ್ದೇ ಚಿತ್ರ ಮುಂದೂಡಲು ಕಾರಣ ಎನ್ನಲಾಗಿದೆ. ಗೂಗ್ಲಿ, ರಾಜಾಹುಲಿ, ಗಜಕೇಸರಿ, ಡ್ರಾಮಾ ಚಿತ್ರಗಳ ಗೆಲುವಿನಿಂದ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸ್ಟಾರ್ ಆಗಿ ಮಿಂಚ್ತಿರೋ ಯಶ್ ಮುಂದಿನ ಸಿನಿಮಾ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮೂಲಕ ಮತ್ತೊಂದು ಗೆಲುವು ದಾಖಲಿಸುವ ಭರವಸೆ ಮೂಡಿಸಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ ಮತ್ತೆ ಜೋಡಿಯಾಗಿರೋ ಸಿನಿಮಾ ಇದು. ಎರಡೆರೆಡು ಯಶಸ್ವಿ ಸಿನಿಮಾ ಕೊಟ್ಟು ಸ್ಯಾಂಡಲ್ ವುಡ್ ನ ಯಶಸ್ವಿ ಜೋಡಿ ಅನ್ನಿಸಿಕೊಂಡಿರೋ ಯಶ್-ರಾಧಿಕಾ ಪಂಡಿತ್ ಜೋಡಿಯಾಗ್ತಿರೋ ಮುಂದಿನ ಸಿನಿಮಾ ಇದು.

ಈ ಚಿತ್ರದಲ್ಲಿ ವಿಷ್ಣು ಅಭಿನಯದ ದಾಖಲೆ ಚಿತ್ರ ನಾಗರಹಾವಿನ ಛಾಯೆಯೂ ಇದೆ.ರಾಕಿಂಗ್ ಸ್ಟಾರ್ ಯಶ್ ರನ್ನ ಮತ್ತೊಮ್ಮೆ ಹಳ್ಳಿ ಹೈದನ ಗೆಟಪ್ ನಲ್ಲಿ ನೋಡೋಕೆ ಕಾದಿರೋ ಚಿತ್ರಪ್ರೇಮಿಗಳಿಗೆ ಈ ಚಿತ್ರ ಹಬ್ಬ ನೀಡಲಿದೆ.

ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಡ್ರಾಮಾ ಮತ್ತು ಮೊಗ್ಗಿನ ಮನಸು ಚಿತ್ರಗಳ ಬಳಿಕ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಅಭಿನಯದ ಚಿತ್ರ ಇದಾಗಿದೆ. ಸಂತೋಷ್ ಅವರು ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬರುತ್ತಿದೆ. (ಫಿಲ್ಮಿಬೀಟ್ ಕನ್ನಡ)

English summary
Rocking Star Yash and Radhika Pandit lead Mr & Mrs Ramachari to get Christmas release. While ideally all movies are released on Fridays, December 25th is a Thursday. So it is not known if the movie will be released on 25th or 26th of December.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada