Don't Miss!
- Sports
ICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂ
- News
74th Republic Day: ದೇಶಾದ್ಯಂತ ಗಣರಾಜ್ಯೋತ್ಸವ, ದೇಶಭಕ್ತಿ ಮೆರೆದ ರಾಜ್ಯಗಳು
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Automobiles
ಪ್ರತಿ ತಿಂಗಳಿಗೆ Just 7 ಸಾವಿರ ಪಾವತಿಸುವ ಮೂಲಕ ಹೊಸ ಕಾರು ಖರೀದಿಸಿ..
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯೂರೋಪಿನಲ್ಲಿ ರಾಕಿಂಗ್ ಜೋಡಿ; ಅಭಿಮಾನಿಗಳಿಗೆ ಅದೊಂದೇ ಚಿಂತೆ!
ಯಶ್, ತಾನು ರಾಕಿಂಗ್ ಸ್ಟಾರ್ ಅಷ್ಟೇ ಅಲ್ಲ ಪಕ್ಕಾ ಫ್ಯಾಮಿಲಿಮ್ಯಾನ್ ಅನ್ನೋದನ್ನ ಪದೇ ಪದೇ ಪ್ರೂವ್ ಮಾಡ್ತಾ ಬರ್ತಿದ್ದಾರೆ. ಕೆಜಿಎಫ್- 2 ರಿಲೀಸ್ ಆಗಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೀತು. ಸಹಜವಾಗಿಯೇ ಯಶ್ ಮುಂದಿನ ಸಿನಿಮಾ ಯಾವುದು ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆದರೆ ಯಶ್ ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ವಕೇಶನ್ ಮೂಡ್ ನಲ್ಲಿದ್ದಾರೆ. ಕೆಜಿಎಫ್- 2 ರಿಲೀಸ್ ಹಿಂದಿನ ದಿನದವರೆಗೂ ಪ್ರಚಾರಕ್ಕಾಗಿ ಊರೂರು ಸುತ್ತಿದ ಯಶ್ ಸಿನಿಮಾ ಪ್ರೇಕ್ಷಕರ ಮುಂದೆ ಬಂದ ಮೇಲೆ ಸೈಲೆಂಟ್ ಆಗಿಬಿಟ್ಟರು.
ಇತ್ತ ಕೆಜಿಎಫ್- 2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದ್ರೆ, ಅಷ್ಟರಲ್ಲಾಗಲೇ ಯಶ್ ಫ್ಯಾಮಿಲಿ ಜೊತೆ ಜಾಲಿ ಟೂರ್ ಹೊರಟುಬಿಟ್ಟರು. ನಂತರ ಮಕ್ಕಳನ್ನು ಕರೆದುಕೊಂಡು ಅನಿಮಲ್ ಪಾರ್ಕ್‌ಗೂ ಹೋಗಿ ಬಂದಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮತ್ತೆ ಪತ್ನಿ ರಾಧಿಕಾ ಪಂಡಿತ್ ಜೊತೆ ಯೂರೋಪ್ ಫ್ಲೈಟ್ ಏರಿದ್ದಾರೆ.
ಯಶ್‌ಗೆ
'ಬ್ಯಾಡ್
ಬಾಯ್'
ಎಂದ
ಸ್ಟಾರ್
ಪುತ್ರ,
ಖುಷಿಯಾದ
ರಾಧಿಕಾ!
ಯೂರೋಪಿನ ಸುಂದರ ತಾಣಗಳಲ್ಲಿ ವಿಹರಿಸುತ್ತಿರುವ ದಂಪತಿ ಒಂದಷ್ಟು ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ರಾಧಿಕಾ ಪಂಡಿತ್ ಕೊಟ್ಟಿರೋ ಕ್ಯಾಪ್ಷನ್ ಕೂಡ ಸೊಗಸಾಗಿದ್ದು, ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಕೂಡ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಪೋಸ್ಟ್‌ನ ಕಾಮೆಂಟ್ ಬಾಕ್ಸ್‌ನಲ್ಲೂ ಯಶ್ 19 ಅಪ್ ಡೇಟ್ ಕೊಡಿ ಅಂತ ಮನವಿ ಮಾಡಿದ್ದಾರೆ.
ಸಾವಿರ
ಕೋಟಿ
ಸರದಾರ
ಯಶ್
'Y19'
ಸಂಭಾವನೆ
ಬಗ್ಗೆ
ಹೊಸ
ಗಾಳಿ
ಸುದ್ದಿ!

ಲೇಕ್ ಬ್ಲಡ್ ಚರ್ಚ್ ನಲ್ಲಿ ರಾಕಿಂಗ್ ಜೋಡಿ
ಇಟಲಿ, ಸ್ಲೋವೆನಿಯಾ ದೇಶಗಳಲ್ಲಿ ಸುತ್ತಾಡುತ್ತಿರುವ ಜೋಡಿ ರಜೆಯ ಮಜಾ ಸವಿಯುತ್ತಿದೆ. ಸ್ಲೋವೆನಿಯಾದ ಲೇಕ್ ಬ್ಲಡ್ ಚರ್ಚ್ ಮೆಟ್ಟಿಲುಗಳ ಮೇಲೆ ನಿಂತು ರಾಧಿಕಾ ಪಂಡಿತ್ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಒಂದು ಪುಟ್ಟ ದ್ವೀಪದಲ್ಲಿರೋ ಲೇಕ್ ಬ್ಲಡ್ ಚರ್ಚ್ ಪ್ರವಾಸಿಗರ ಹಾಟ್ ಫೇವರಿಟ್ ಸ್ಪಾಟ್.

ವಿಶಿಷ್ಟ ಖಾದ್ಯಗಳ ರುಚಿಗೆ ಮಾರು ಹೋದ ದಂಪತಿ
ಯುರೋಪಿನ ಪ್ರವಾಸಿ ತಾಣಗಳಲ್ಲಿ ಸುತ್ತಾಡುತ್ತಿರುವ ಯಶ್- ರಾಧಿಕಾ ಅಲ್ಲಿನ ರೆಸ್ಟೋರೆಂಟ್ ಗಳಲ್ಲಿ ವಿಶಿಷ್ಟ ಖಾದ್ಯಗಳನ್ನು ಸವಿಯುತ್ತಿದ್ದಾರೆ. ಈ ವೇಳೆ ರಾಕಿಂಗ್ ಸ್ಟಾರ್ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ರಾಧಿಕಾ ಕ್ಯಾಪ್ಷನ್ ನಲ್ಲೂ ಅದನ್ನು ಹೇಳಿದ್ದಾರೆ.

ಗೋವಾ ಪ್ರವಾಸ ಕೈಗೊಂಡಿದ್ದ ಯಶ್- ರಾಧಿಕಾ
ಕೆಜಿಎಫ್- 2 ರಿಲೀಸ್ ಬೆನ್ನಲ್ಲೇ ರಾಕಿಂಗ್ ಜೋಡಿ ಗೋವಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ್ದರು. ಪ್ರವಾಸದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.

ರಾಕಿಂಗ್ ಜೋಡಿ ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷ
ಯಶ್- ರಾಧಿಕಾ ಪಂಡಿತ್ 'ಮೊಗ್ಗಿನ ಮನಸು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಅದೇ ಸಿನಿಮಾದಲ್ಲಿ ಶುರುವಾದ ಸ್ನೇಹ ಮುಂದೆ ಪ್ರೀತಿಗೆ ತಿರುಗಿ ಇಬ್ಬರು ಮದುವೆ ಆದರು. ಇತ್ತೀಚೆಗೆ ಇಬ್ಬರು ಚಿತ್ರರಂಗದಲ್ಲಿ 14 ವರ್ಷ ಪೂರೈಸಿದ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಯಾವಾಗ ಶುರುವಾಗುತ್ತೆ ಯಶ್ 19 ಸಿನಿಮಾ ?
ಕೆಜಿಎಫ್- 2 ನಂತರ ವಾಟ್ ನೆಕ್ಸ್ಟ್ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ನರ್ತನ್ ನಿರ್ದೇಶನದ ಸಿನಿಮಾ ತಡವಾಗುವ ಸುಳಿವು ಸಿಕ್ತಿದ್ದು, ಮತ್ಯಾವ ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಡುತ್ತಾರೋ ಅಂತ ಅಭಿಮಾನಿಗಳು ಕಾಯುವಂತಾಗಿದೆ. ಸ್ಟಾರ್ ನಟರು ಸಾಮಾನ್ಯವಾಗಿ ಒಂದು ಸಿನಿಮಾ ಮುಗಿಯೋಕು ಮೊದಲೇ ಮತ್ತೊಂದು ಸಿನಿಮಾ ಲೈನ್‌ನಲ್ಲಿ ಇಡುತ್ತಾರೆ. ಆದರೆ ಯಶ್ ನಡೆ ಮಾತ್ರ ಕುತೂಹಲ ಕೆರಳಿಸಿದೆ.