For Quick Alerts
  ALLOW NOTIFICATIONS  
  For Daily Alerts

  ಅರ್ಧಶತಕ ಸಂಭ್ರಮದಲ್ಲಿ ಯಶ್ 'ರಾಜಾಹುಲಿ'

  By Rajendra
  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಜಾಹುಲಿ' ಚಿತ್ರ ಅರ್ಧ ಸೆಂಚುರಿ ಪೂರೈಸಿದೆ. ಈ ಮೂಲಕ ಯಶ್ ನಿರ್ಮಾಪಕರ ಡಾರ್ಲಿಂಗ್ ಆಗಿ ಬದಲಾಗಿದ್ದಾರೆ. ಈಗ ಯಶ್ ಜೊತೆ ಯಾರಾದರೂ ಹೊಸ ಸಿನಿಮಾ ಮಾಡಬೇಕಾದರೆ ಇನ್ನೂ ಮೂರು ವರ್ಷ ಕಾಯಲೇಬೇಕು. ಕಾರಣ 2016ರವರೆಗೂ ಡೇಟ್ಸ್ ಇಲ್ಲ.

  ತಮಿಳಿನ ಸುಂದರ ಪಾಂಡ್ಯನ್ ಚಿತ್ರದ ರೀಮೇಕ್ ರಾಜಾಹುಲಿ. ಈ ಚಿತ್ರವನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಕೊಂಚ ಬದಲಾವಣೆಗಳನ್ನು ಮಾಡಿಕೊಂಡು ತೆರೆಗೆ ತರಲಾಗಿದೆ. ಗುರು ದೇಶಪಾಂಡೆ ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ಗಂಡುಗಲಿ ಕೆ.ಮಂಜು ನಿರ್ಮಿಸಿದ್ದಾರೆ. [ರಾಜಾಹುಲಿ ಚಿತ್ರ ವಿಮರ್ಶೆ]

  ಹಲವಾರು ಚಿತ್ರಗಳನ್ನು ನಿರ್ಮಿಸಿ ಲಾಸ್ ಆಗಿದ್ದ ಕೆ.ಮಂಜು ಅವರನ್ನು 'ರಾಜಾಹುಲಿ' ಚಿತ್ರ ಕೈಹಿಡಿದಿದೆ. ಮೇಘನಾ ರಾಜ್ ಚಿತ್ರದ ನಾಯಕಿಯಾಗಿರುವ ಚಿತ್ರ ಬೆಂಗಳೂರಿನ ಕಪಾಲಿ, ವೀರೇಶ್, ಪಿವಿಆರ್, ರಾಕ್ ಲೈನ್ ಮಾಲ್ ಸೇರಿದಂತೆ ರಾಜ್ಯದಾದ್ಯಂತ 26 ಚಿತ್ರಮಂದಿರಗಳಲ್ಲಿ ಅರ್ಧ ಶತಕ ಪೂರೈಸಿದೆ.

  ಹಂಸಲೇಖ ಅವರ ಸಂಗೀತ, ಕೆಎಂ ವಿಷ್ಣುವರ್ಧನ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು ತಾಂತ್ರಿಕವಾಗಿಯೂ ಚಿತ್ರ ಪ್ರೌಢವಾಗಿದೆ. ಇನ್ನು ಯಶ್ ಅಭಿನಯದ ಮೊದಲಾಸಲ, ಕಿರಾತಕ, ಜಾನು, ಡ್ರಾಮಾ, ಗೂಗ್ಲಿ ಚಿತ್ರಗಳು ಹಿಟ್ ಚಿತ್ರಗಳ ಸಾಲಿನಲ್ಲಿವೆ.

  ರಾಜಾಹುಲಿ ಚಿತ್ರ ತೆರೆಕಂಡ ಒಂದೇ ವಾರದಲ್ಲಿ ರು.7 ಕೋಟಿ ಕಲೆಕ್ಷನ್ ಮಾಡಿತ್ತು. ಇದರಲ್ಲಿ ಕೆ.ಮಂಜು ಪಾಲು ರು.4.5 ಕೋಟಿ. ಮಂಜು ಮಾಂಡವ್ಯ ಅವರ ಸಂಭಾಷಣೆ ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಒಂದು. ಪಾತ್ರವರ್ಗದಲ್ಲಿ ಯಶ್, ಮೇಘನಾ ರಾಜ್, ಚರಣ್ ರಾಜ್, ಎಂ.ಎನ್. ಲಕ್ಷ್ಮಿದೇವಿ, ಸುಧಾ ಬೆಳವಾಡಿ, ಹರ್ಷಾ, ಗಿರೀಶ್, ವಶಿಷ್ಠ, ಚಿಕ್ಕಣ್ಣ, ಅಶ್ವಿನಿ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Rocking Star Yash and Meghana Raj lead Raja Huli completes 50 days in 26 centres. The movie is a remake of 'Sundara Pandian' is also a big hit. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X