»   » ಬಾಕ್ಸ್ ಆಫೀಸ್ ಮೇಲೆ 'ರಾಜಾಹುಲಿ' ದಾಳಿಗೆ ಸಿದ್ಧ

ಬಾಕ್ಸ್ ಆಫೀಸ್ ಮೇಲೆ 'ರಾಜಾಹುಲಿ' ದಾಳಿಗೆ ಸಿದ್ಧ

Posted By:
Subscribe to Filmibeat Kannada

ಇದೇ ನವೆಂಬರ್ 1ರಿಂದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಾಹುಲಿ ಗರ್ಜಿಸಲಿದೆ. ಗುರು ದೇಶಪಾಂಡೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ತನ್ನ ಶೀರ್ಷಿಕೆಯಿಂದಲೇ ಮಾಸ್ ಅಭಿಮಾನಿಗಳನ್ನು ಸೆಳೆಯುತ್ತಿದೆ. ಕೆ.ಮಂಜು ಅವರು ಭಾರಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದೆ.

ಯಶ್ ಅಭಿನಯದ 'ಗೂಗ್ಲಿ' ಚಿತ್ರ ಸೆಂಚುರಿ ಬಾರಿಸಿದೆ. ಈ ಸಂದರ್ಭದಲ್ಲಿ 'ರಾಜಾಹುಲಿ' ಚಿತ್ರಮಂದಿರಗಳಿಗೆ ಲಗ್ಗೆ ಹಾಕುತ್ತಿದೆ. ಈ ಬಾರಿಯೂ ಬಾಕ್ಸ್ ಆಫೀಸ್ ಮೇಲೆ 'ರಾಜಾಹುಲಿ' ಕಣ್ಣಿಟ್ಟಿದ್ದು ದಾಳಿ ಮಾಡಿ ಪಂಜಾ ಬೀಸುವುದು ನಿಶ್ಚಿತ ಎಂಬ ವಿಶ್ವಾಸದಲ್ಲಿ ಎಲ್ಲರಲ್ಲೂ ಇದ್ದಾರೆ.


ರಾಜಾಹುಲಿ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ತಮಿಳಿನ ಯಶಸ್ವಿ ಚಿತ್ರ ಸುಂದರಪಾಂಡ್ಯನ್ ರೀಮೇಕ್ ಇದಾಗಿದ್ದು, ಮೂಲ ಚಿತ್ರದಲ್ಲಿ ಶಶಿಕುಮಾರ್, ವಿಜಯ್ ಸೇತುಪತಿ, ಸೂರಿ ಹಾಗೂ ಲಕ್ಷ್ಮಿ ಮೆನನ್ ಅಭಿನಯಿಸಿದ್ದಾರೆ.

ಯಶ್ ಅವರ ಹುಲಿಯಂತಹ ಕಲ್ಲಿಮೀಸೆ, ವಿಭಿನ್ನ ಗೆಟಪ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅವರು ಇಲ್ಲಿಯವರೆಗೂ ಮಾಡದೇ ಇರುವಂತಹ ಪಾತ್ರ ಇದು ಎನ್ನುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಇರುವುದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷಿಸುವಂತಾಗಿದೆ.

ಇದೇ ಮೊದಲ ಸಲ ಯಶ್ ಗೆ ಸುಂದರ್ ರಾಜ್ ಹಾಗೂ ಪ್ರಮಿಳ ಜೋಸೈ ಅವರ ಪುತ್ರಿ ಮೇಘನ ರಾಜ್ ನಾಯಕಿ ಆಗಿದ್ದಾರೆ. ತಾರಾಗಣದಲ್ಲಿ ಚಿಕ್ಕಣ್ಣ, ಅಶ್ವಿನಿ ಚರಣ್ ರಾಜ್ ಮುಂತಾದವರು ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Rocking Star Yash and Meghana Raj lead 'Raja Huli' have finally announced its release date. The movie which bagged the U/A Certificate from Central Censor Board will be releasing on November 1, 2013.
Please Wait while comments are loading...