Just In
Don't Miss!
- News
ಶಿವಮೊಗ್ಗದಲ್ಲಿ ಭಾರೀ ಸ್ಫೋಟ; ಸಿಬಿಐ ತನಿಖೆ ಇಲ್ಲ
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Sports
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
250 ಥಿಯೇಟರ್ ಗಳಲ್ಲಿ 25 ದಿನಗಳನ್ನು ಪೂರೈಸಿದ 'ಮಾಸ್ಟರ್ ಪೀಸ್'
ರಾಕಿಂಗ್ ಸ್ಟಾರ್ ಯಶ್ ಅವರ 'ಮಾಸ್ಟರ್ ಪೀಸ್' ಸಿನಿಮಾ ಬಾಕ್ಸಾಫೀಸಿನಲ್ಲಿ ಕಮಾಲ್ ಮಾಡಿದ್ದು ನಿಮಗೆ ಗೊತ್ತೇ ಇದೆ. ಕ್ರಿಸ್ ಮಸ್ ಹಬ್ಬದಂದು ಗ್ರ್ಯಾಂಡ್ ಆಗಿ ತೆರೆ ಕಂಡಿದ್ದ ಯಶ್ ಮತ್ತು ಶಾನ್ವಿ ಶ್ರೀವಾತ್ಸವ್ ಜೋಡಿಯ 'ಮಾಸ್ಟರ್ ಪೀಸ್' ಬಿಡುಗಡೆ ಆದ ಮೊದಲ ದಿನದಿಂದಲೇ ಗಳಿಕೆ ವಿಷಯದಲ್ಲಿ ಸುದ್ದಿ ಮಾಡಿತ್ತು.
ನಿರ್ದೇಶಕ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿದ್ದ 'ಮಾಸ್ಟರ್ ಪೀಸ್' ಇಡೀ ಕರ್ನಾಟಕದಾದ್ಯಂತ ಇದೀಗ ಸುಮಾರು 250 ಚಿತ್ರಮಂದಿರಗಳಲ್ಲಿ ಯಶಸ್ವಿ 25ನೇ ದಿನವನ್ನು ಪೂರೈಸಿದೆ.[ಪೀಸ್ ಪೀಸ್ ಮಾಡಿದ 'ಮಾಸ್ಟರ್ ಪೀಸ್' ಗೆ ವಿಮರ್ಶಕರು ಜೈ ಅಂದ್ರಾ?]
ಸ್ಯಾಂಡಲ್ ವುಡ್ ನಲ್ಲಿ 'ಅಣ್ತಮ್ಮ' ಅಂತಾನೇ ಖ್ಯಾತಿ ಗಳಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರು 'ಮಾಸ್ಟರ್ ಪೀಸ್' ಸಿನಿಮಾದಲ್ಲಿ ಡೈಲಾಗ್ ಮೂಲಕಾನೇ ಸಖತ್ ಶೈನ್ ಆಗಿದ್ದರು.
ನಿರ್ಮಾಪಕ ವಿಜಯ್ ಕಿರಗಂದೂರು ಅವರು ಬಂಡವಾಳ ಹಾಕಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದ್ದ ಈ ಸಿನಿಮಾ ನಮ್ಮ ದೇಶದಲ್ಲಿ ಮಾತ್ರವಲ್ಲದೇ, ಹೊರದೇಶಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶದ 10 ಸಿಟಿಗಳಲ್ಲಿ ಈಗಾಗಲೇ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.[ವಿದೇಶದಲ್ಲಿ 'ಮಾಸ್ಟರ್ ಪೀಸ್' ಹವಾ ಬಲು ಜೋರು ಗುರು]
ಇನ್ನು ಜನವರಿ 29 ರಿಂದ ಯುಎಸ್ ಎ ನಲ್ಲೂ ಮಾಸ್ಟರ್ ಪೀಸ್ ಹವಾ ಆರಂಭವಾಗಲಿದೆ. ಕಳೆದ ವರ್ಷ ಯಶ್ ಮತ್ತು ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಮಿ.ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ 200 ದಿನಗಳನ್ನು ಪೂರೈಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು.[ಎರಡು ವಾರಗಳಲ್ಲಿ 'ಮಾಸ್ಟರ್ ಪೀಸ್' ಬಾಚಿದ್ದು ಎಷ್ಟು?]
ಇದೀಗ ಸಂಭಾಷಣೆಗಾರರಾಗಿದ್ದ ಮಂಜು ಮಾಂಡವ್ಯ ಭಡ್ತಿ ಪಡೆದುಕೊಂಡು ಮಾಡಿದ 'ಮಾಸ್ಟರ್ ಪೀಸ್' ಸಿನಿಮಾ ಇದನ್ನು ಬ್ರೇಕ್ ಮಾಡುತ್ತಾ ಅಂತ ಕಾದು ನೋಡಬೇಕು.