Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕೆಜಿಎಫ್ 2' ಯಶಸ್ಸಿನ ಬಳಿಕ ಮಾಧ್ಯಮಗಳಿಂದ ದೂರ ಉಳಿದಿದ್ದೇಕೆ ಯಶ್?
'ಕೆಜಿಎಫ್ 2' ಸಿನಿಮಾ ಬಹುದೊಡ್ಡ ಯಶಸ್ಸು ಗಳಿಸಿದೆ. ಸ್ವತಃ ಚಿತ್ರತಂಡ ಸಹ ಇಷ್ಟು ದೊಡ್ಡ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ. ಯಶ್‌ರ ಪಾತ್ರ ರಾಕಿಭಾಯ್ ಅಂತೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಟ್ ಆಗಿಬಿಟ್ಟಿತು.
'ಕೆಜಿಎಫ್' ಸಿನಿಮಾದ ಮೊದಲ ಭಾಗವನ್ನು ಬಹಳವಾಗಿ ಪ್ರಮೋಟ್ ಮಾಡಿದ್ದ ಯಶ್ ಹಾಗೂ ಇಡೀ ಚಿತ್ರತಂಡ 'ಕೆಜಿಎಫ್ 2' ಅನ್ನು ದೊಡ್ಡ ಮಟ್ಟದಲ್ಲಿ ಪ್ರಚಾರವನ್ನೇನೂ ಮಾಡಿರಲಿಲ್ಲ. 'ಕೆಜಿಎಫ್' ಸಿನಿಮಾಕ್ಕೆ ಹಿಂದಿಯ ಕಾಮಿಡಿ ಯೂಟ್ಯೂಬ್ ಚಾನೆಲ್‌ಗಳಿಗೂ ಯಶ್ ಸಂದರ್ಶನ ನೀಡಿದ್ದರು. ಆದರೆ 'ಕೆಜಿಎಫ್ 2' ಗೆ ಹಿಂದಿ ಮಾಧ್ಯಮಗಳಿಗೆ ಬಹಳ ದೊಡ್ಡ ಯೂಟ್ಯೂಬ್ ಚಾನೆಲ್‌ಗಳಿಗೆ ಮಾತ್ರವೇ ಸಂದರ್ಶನ ನೀಡಿದರು.
ಆದರೆ ಒಮ್ಮೆ ಸಿನಿಮಾ ಯಶಸ್ವಿ ಆದ ಬಳಿಕ ಯಶ್ ಮಾಧ್ಯಮಗಳ ಮುಂದೆ ಬರಲೇ ಇಲ್ಲ. ಸಕ್ಸಸ್ ಪಾರ್ಟಿಯನ್ನು ತಮ್ಮ ಚಿತ್ರತಂಡದ ಜೊತೆಗಷ್ಟೆ ಆಚರಿಸಿ ಸುಮ್ಮನಾದರು. ಆದರೆ ಮಾಧ್ಯಮಗಳ ಮುಂದೆ ಬಂದು ತಮ್ಮ ಸಿನಿಮಾ ದೊಡ್ಡ ಯಶಸ್ವಿಯಾಗಿದ್ದಕ್ಕೆ ಬೆನ್ನು ತಟ್ಟಿಕೊಳ್ಳಲಿಲ್ಲ. ನಾವೇ ಗ್ರೇಟ್ ಎನ್ನಲಿಲ್ಲ. ಯಶಸ್ವಿ ಸಿನಿಮಾ ಕೊಟ್ಟವರು, ತಮ್ಮ ಗೆಲುವಿನ ಪ್ರಚಾರ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ನೀವೇಕೆ ನಿಮ್ಮ ಗೆಲುವಿನ ಪ್ರಚಾರ ಮಾಡಲಿಲ್ಲ ಎಂದು ಸಂದರ್ಶನವೊಂದರಲ್ಲಿ ಯಶ್‌ಗೆ ಪ್ರಶ್ನೆ ಎದುರಾಯ್ತು.

ಮಾಧ್ಯಮಗಳ ಮುಂದೆ ಬರಲಿಲ್ಲ ಯಶ್ ಏಕೆ?
ಇದಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರಿಸಿರುವ ಯಶ್, ''ನನ್ನ ಬಗ್ಗೆ ನಾನು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಆ ರೀತಿಯ ವ್ಯಕ್ತಿ ನಾನಲ್ಲ. 'ನಾನು ರಾಜ ಎಂದು ಹೇಳುವ ವ್ಯಕ್ತಿ ನಿಜವಾಗಿಯೂ ರಾಜನಾಗಿರುವುದಿಲ್ಲ. ನೀವು ನಿಜವಾಗಿಯೂ ಯಶಸ್ವಿಯಾಗಿದ್ದರೆ ಅದನ್ನು ಜನರಿಗೆ ಹೇಳುವ ಅವಶ್ಯಕತೆ ಇಲ್ಲ. ಜನಕ್ಕೆ ತಾನಾಗಿಯೇ ವಿಷಯ ತಿಳಿಯುತ್ತದೆ. ಅದರ ಪ್ರಚಾರ ಬೇಕಿಲ್ಲ. ನಾವು ಒಳ್ಳೆಯ ಕಾರ್ಯ ಮಾಡುತ್ತಿರಬೇಕು ಅಷ್ಟೆ'' ಎಂದಿದ್ದಾರೆ ಯಶ್.

ಸುಮ್ಮನೆ ಕೂರುವ ವ್ಯಕ್ತಿ ನಾನಲ್ಲ: ಯಶ್
'ಕೆಜಿಎಫ್' ಸಿನಿಮಾ ಬಿಟ್ಟು ಬೇರೆ ಸಿನಿಮಾ ಮಾಡಿದರೆ ಜನ ಒಪ್ಪಿಕೊಳ್ಳುತ್ತಾರಾ ಎಂಬ ಭಯ, ಅನುಮಾನ ಇದೆಯಾ ಎಂಬ ಬಗ್ಗೆ ಉತ್ತರಿಸಿರುವ ಯಶ್, ''ನಾನು ಬಂದೆ, ನಾನು ಅದನ್ನು ಮಾಡುತ್ತಿದ್ದೇನೆ ಎಂದೆಲ್ಲ ಹೇಳುವ ವ್ಯಕ್ತಿ ನಾನಲ್ಲ. ಸುಮ್ಮನೆ ಕೂರುವ ವ್ಯಕ್ತಿ ಸಹ ನಾನಲ್ಲ. ನನ್ನ ಕನಸುಗಳು ಬಹಳ ದೊಡ್ಡದಿವೆ. ಕನಸು ಹೇಗಿರಬೇಕೆಂದರೆ ಕನಸನ್ನು ಯಾರ ಮುಂದಾದರೂ ಹೇಳಿದರೆ ಅವರು ಭಯಪಡಬೇಕು. ನಾನೂ ಸಹ ಹಾಗೆಯೇ. ನನ್ನ ಕನಸುಗಳು ಬಹಳ ದೊಡ್ಡವು'' ಎಂದಿದ್ದಾರೆ ಯಶ್.

ಹುಟ್ಟುಹಬ್ಬದಂದು ಸಿನಿಮಾ ಘೋಷಿಸಲಿದ್ದಾರೆ ಯಶ್
ಯಶ್ ತಮ್ಮ ಮುಂದಿನ ಸಿನಿಮಾಕ್ಕೆ ತಯಾರಾಗುತ್ತಿದ್ದಾರೆ. ಯಶ್‌ರ ಮುಂದಿನ ಸಿನಿಮಾ ಭಾರಿ ಬಜೆಟ್‌ನದ್ದಾಗಿರಲಿದ್ದು, ವಿದೇಶಿ ನಟರು, ತಂತ್ರಜ್ಞರು ಸಹ ಸಿನಿಮಾದಲ್ಲಿರಲಿದ್ದಾರೆ. ಯಶ್‌ರ ಮುಂದಿನ ಸಿನಿಮಾವನ್ನು ಸ್ವತಃ ಯಶ್ ನಿರ್ಮಾಣ ಮಾಡಲಿದ್ದಾರೆ. ಅವರೇ ನಿರ್ದೇಶನ ಸಹ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಯಶ್‌ರ ಮುಂದಿನ ಹುಟ್ಟುಹಬ್ಬದ ದಿನದಂದು ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಲಿದ್ದಾರೆ. ಯಶ್‌ರ ಹುಟ್ಟುಹಬ್ಬ ಇದೇ ಜನವರಿ 08 ರಂದು.

ಭಾರಿ ಕಲೆಕ್ಷನ್ ಮಾಡಿದ್ದ 'ಕೆಜಿಎಫ್ 2'
ಯಶ್ ನಟನೆಯ 'ಕೆಜಿಎಫ್ 2' ಸಿನಿಮಾ ಇದೇ ವರ್ಷದ ಏಪ್ರಿಲ್ 14 ರಂದು ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಯಿತು. ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿಯನ್ನು ಸಿನಿಮಾ ಗಳಿಸಿತು. 'ಕೆಜಿಎಫ್ 2' ಸಿನಿಮಾ ಸುಮಾರು 1500 ಕೋಟಿ ರುಪಾಯಿ ಹಣ ಗಳಿಸಿತು. ಮೊದಲ 'ಕೆಜಿಎಫ್' ಸಿನಿಮಾ ಸುಮಾರು 200 ಕೋಟಿ ಗಳಿಸಿತ್ತು. ಅಂದಹಾಗೆ 'ಕೆಜಿಎಫ್' ಹಾಗೂ 'ಕೆಜಿಎಫ್ 2' ಸಿನಿಮಾಕ್ಕೆ ಹೊಂಬಾಳೆಯ ಜೊತೆಗೆ ಯಶ್ ಸಹ ಬಂಡವಾಳ ಹೂಡಿದ್ದರಂತೆ.