For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷಕ್ಕೆ ದರ್ಶನ್, ಯಶ್ ಕುಟುಂಬ ಹಂಚಿಕೊಂಡ ಮೊದಲ ಪೋಟೋ

  |

  2019ಕ್ಕೆ ಗುಡ್ ಬೈ ಹೇಳಿ 2020ನೇ ವರ್ಷವನ್ನು ಎಲ್ಲರೂ ಖುಷಿ ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಕೂಡ ಹೊಸ ವರುಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಡಿ ಬಾಸ್ ಮತ್ತು ಯಶ್ 2020ನೇ ವರ್ಷದಲ್ಲಿ ಮೊದಲ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ.

  ಅರ್ಥಪೂರ್ಣ ಸಂದೇಶದೊಂದಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್ಅರ್ಥಪೂರ್ಣ ಸಂದೇಶದೊಂದಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್

  ಈ ಫೋಟೋಗಳನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹಾಗಿದ್ರೆ, ಯಾವ ಯಾವ ಸ್ಟಾರ್ ಗಳು ಹೊಸ ವರ್ಷದ ಮೊದಲ ದಿನ ಯಾವ ಫೋಟೋ ಹಂಚಿಕೊಂಡಿದ್ದಾರೆ ಎಂಬುದನ್ನು ನೋಡೋಣ....

  ರಾಕಿ ಭಾಯ್ ಫ್ಯಾಮಿಲಿ

  ರಾಕಿ ಭಾಯ್ ಫ್ಯಾಮಿಲಿ

  ಹೊಸ ವರ್ಷದ ವಿಶೇಷವಾಗಿ ರಾಕಿಂಗ್ ಸ್ಟಾರ್ ದಂಪತಿ ಮೊದಲ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ಯಶ್, ರಾಧಿಕಾ ಪಂಡಿತ್, ಮಗಳು ಐರಾ ಹಾಗೂ ಮಗ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಬಹಳ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

  ಡಿ ಬಾಸ್ ಕುಟುಂಬ

  ಡಿ ಬಾಸ್ ಕುಟುಂಬ

  ಹೊಸ ವರ್ಷದ ಪ್ರಯುಕ್ತ ನಿರ್ಮಾಪಕಿ ಶೈಲಜಾ ನಾಗ್ ಅವರು ಡಿ ಬಾಸ್ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ದರ್ಶನ್, ಅವರ ಪತ್ನಿ ವಿಜಯ್ ಲಕ್ಷ್ಮಿ ದರ್ಶನ್, ಮಗ ವಿನೀಶ್, ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ ಶೈಲಜಾ ನಾಗ್ ಈ ಫೋಟೋದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  ಹೊಸ ವರ್ಷಕ್ಕೆ ಹೊಸ ಲುಕ್ ನೊಂದಿಗೆ ಬಂದ ಪವರ್ ಸ್ಟಾರ್ ಪುನೀತ್ಹೊಸ ವರ್ಷಕ್ಕೆ ಹೊಸ ಲುಕ್ ನೊಂದಿಗೆ ಬಂದ ಪವರ್ ಸ್ಟಾರ್ ಪುನೀತ್

  ದಿನಕರ್ ತೂಗುದೀಪ

  ದಿನಕರ್ ತೂಗುದೀಪ

  ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡ ಹೊಸ ವರ್ಷದ ಪ್ರಯುಕ್ತ, ತಮ್ಮ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ''ಈ ಹೊಸ ವರ್ಷ ನಿಮ್ಮನ್ನು ಪ್ರೀತಿ ನಗು ನಲಿವಿನ ಅಲೆಯಿಂದ ಆವರಿಸಲಿ. ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು'' ಎಂದು ಪತ್ನಿ, ಮಕ್ಕಳ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ.

  ಮಗು ಫೋಟೋ ಹಂಚಿಕೊಂಡ ಸುನಿ

  ಮಗು ಫೋಟೋ ಹಂಚಿಕೊಂಡ ಸುನಿ

  ನಿರ್ದೇಶಕ ಸುನಿ ಅವರು ಮಗುವೊಂದರ ಫೋಟೋ ಹಂಚಿಕೊಂಡು ಹೊಸ ವರ್ಷಕ್ಕೆ ವಿಶ್ ಮಾಡಿದ್ದಾರೆ. ಸ್ನೇಹಿತರೊಬ್ಬರ ಮಗು ಫೋಟೋವನ್ನು ಸುನಿ ಅವರ ಪತ್ನಿ ಕ್ಲಿಕ್ಕಿಸಿದ್ದಾರೆ. ಆ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ ಸುನಿ.

  'ಬಾ ಬಾ ನಾ ರೆಡಿ' ಎಂದು 2020ಕ್ಕೆ ಚಾಲೆಂಜ್ ಹಾಕಿದ ಚಾಲೆಂಜಿಂಗ್ ಸ್ಟಾರ್'ಬಾ ಬಾ ನಾ ರೆಡಿ' ಎಂದು 2020ಕ್ಕೆ ಚಾಲೆಂಜ್ ಹಾಕಿದ ಚಾಲೆಂಜಿಂಗ್ ಸ್ಟಾರ್

  ಮಂತ್ರಾಲಯದಲ್ಲಿ ಜಗ್ಗೇಶ್

  ಮಂತ್ರಾಲಯದಲ್ಲಿ ಜಗ್ಗೇಶ್

  ನವರಸ ನಾಯಕ ಜಗ್ಗೇಶ್ ಅವರು ಹೊಸ ವರ್ಷದ ವಿಶೇಷವಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ''ಮಂತ್ರಾಲಯ ಪ್ರಭುಗಳು ಮುಂದೆ ಇಂದು.. ಈ ವರ್ಷದ ವಿಶೇಷ ಶ್ರೀಗಳು ನನಗೆ ಧನಭಿಕ್ಷೆ ನೀಡಿದರು.. ನನಗೆ ರಾಯರೆ ಕೈಯಾರೆ ಕೊಟ್ಟಷ್ಟು ಆನಂದವಾಯಿತು. ಹರಿಓಂ.. ಸರ್ವೆಜನಃಸುಖಿನೋಭವಂತು'' ಎಂದು ಟ್ವೀಟ್ ಮಾಡಿದ್ದಾರೆ.

  ಶುಭ್ರ ಅಯ್ಯಪ್ಪ

  ಶುಭ್ರ ಅಯ್ಯಪ್ಪ

  ವಜ್ರಕಾಯ ಖ್ಯಾತಿಯ ನಟಿ ಶುಭ್ರ ಅಯ್ಯಪ್ಪ ಹೊಸ ವರ್ಷಕ್ಕೆ ವಿಶ್ ಮಾಡಿದ್ದು, ಸಾಗರತೀರದಲ್ಲಿ ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

  ಶ್ರೀಮುರಳಿ ಪತ್ನಿ

  ಶ್ರೀಮುರಳಿ ಪತ್ನಿ

  ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಪತ್ನಿ ವಿದ್ಯಾ ಅವರು ಹೊಸ ವರ್ಷಕ್ಕೆ ಶುಭಕೋರಿದ್ದು, ಕೈಹಿಡಿದು ಸಾಗುತ್ತಿರುವ ಮೊದಲ ಫೋಟೋ ಹಾಕಿದ್ದಾರೆ. ಕೈಮೇಲೆ ಮುರಳಿ ಎಂದು ಬರೆಸಿಕೊಂಡಿರುವುದು ಗಮನ ಸೆಳೆಯುತ್ತಿದೆ.

  English summary
  Kannada actor Yash-Radhika Pandit and Challenging star darshan shared their first family photo in 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X