For Quick Alerts
  ALLOW NOTIFICATIONS  
  For Daily Alerts

  ಬಾಡಿಗೆ ಕಟ್ಟಿಲ್ಲ ಅಂತ ಪ್ರಮಾಣ ಮಾಡಿ ಹೇಳಲಿ: ಮನೆ ಮಾಲೀಕರಿಗೆ ಯಶ್ ಸವಾಲು.!

  By Harshitha
  |

  ರಾಕಿಂಗ್ ಸ್ಟಾರ್ ಯಶ್ ಇದೀಗ ಮತ್ತೆ ಬೇಡದ ವಿಷಯಕ್ಕೆ ಸದ್ದು ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ಸೌಂಡ್ ಮಾಡಿದ್ದ ಯಶ್ 'ಬಾಡಿಗೆ ಮನೆ ವಿವಾದ' ಇದೀಗ ಮತ್ತೆ ಬುಸುಗುಡುತ್ತಿದೆ.

  ಬಾಕಿಯಿರುವ ಬಾಡಿಗೆ ಹಣ 9 ಲಕ್ಷದ 60 ಸಾವಿರ ಪಾವತಿಸಿ, ಮೂರು ತಿಂಗಳ ಒಳಗಾಗಿ ಮನೆ ಖಾಲಿ ಮಾಡಬೇಕು ಎಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಿನ್ನೆ ಆದೇಶ ನೀಡಿತು. ಇದರಿಂದಾಗಿ, ಯಶ್ 'ಬಾಡಿಗೆ ಮನೆ' ರಗಳೆ ಮತ್ತೆ ಮಾಧ್ಯಮಗಳಲ್ಲಿ 'ಬ್ರೇಕಿಂಗ್ ನ್ಯೂಸ್' ಆಯ್ತು.

  ಇಷ್ಟು ದಿನ ಮನೆಗೆ ಬಾಡಿಗೆ ಕಟ್ಟದ ವಿಚಾರದ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನದ ರಾಕಿಂಗ್ ಸ್ಟಾರ್ ಯಶ್ ಇಂದು ಫೇಸ್ ಬುಕ್ ಲೈವ್ ನಲ್ಲಿ ಮನಬಿಚ್ಚಿ ಮಾತನಾಡಿದರು.

  ಗಾದೆ : ಗಾದೆ : "ದಡ್ಡರು ಮನೆ ಕಟ್ತಾರೆ, ಬುದ್ಧಿವಂತರು ಅಲ್ಲಿ ವಾಸಿಸುತ್ತಾರೆ"

  ''ನಾನು ಪ್ರತಿ ತಿಂಗಳೂ ಬಾಡಿಗೆ ಕಟ್ಟಿದ್ದೇನೆ. ಆ ಮನೆ ನನಗೆ ಲಕ್ಕಿ ಅಂತ ಕೆಲವರು ಹೇಳ್ತಿದ್ದಾರೆ. ಅದು ಸುಳ್ಳು. ನನಗೆ ಅಂತಹ ಮೂಢನಂಬಿಕೆ ಇಲ್ಲ. ನಾನು ಬಾಡಿಗೆ ಕಟ್ಟಿಲ್ಲ ಅಂತ ಮನೆ ಮಾಲೀಕರು ಅವರ ಮಗಳ ಮೇಲೆ ಪ್ರಮಾಣ ಮಾಡಿ ಹೇಳಲಿ, ಆಗ ಅವರು ಹೇಳಿದ್ದನ್ನ ಕೊಡುತ್ತೇನೆ'' ಎಂದು ಫೇಸ್ ಬುಕ್ ಲೈವ್ ನಲ್ಲಿ ನಟ ಯಶ್ ಸವಾಲು ಹಾಕಿದ್ದಾರೆ.

  'ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!''ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!'

  ಬಾಡಿಗೆ ಕಟ್ಟಿರುವ ಬಗ್ಗೆ ಫೇಸ್ ಬುಕ್ ಲೈವ್ ವೇಳೆಯಲ್ಲೂ ನಟ ಯಶ್ ದಾಖಲೆಗಳನ್ನ ಪ್ರಸ್ತುತ ಪಡಿಸಿದರು.

  3 ತಿಂಗಳಲ್ಲಿ ಮನೆ ಖಾಲಿ ಮಾಡ್ಬೇಕು: ಯಶ್ ಗೆ ಸಿವಿಲ್ ಕೋರ್ಟ್ ಆದೇಶ3 ತಿಂಗಳಲ್ಲಿ ಮನೆ ಖಾಲಿ ಮಾಡ್ಬೇಕು: ಯಶ್ ಗೆ ಸಿವಿಲ್ ಕೋರ್ಟ್ ಆದೇಶ

  ಮನೆ ಖಾಲಿ ಮಾಡಿ, ಕೀ ಕೊಡುವ ಸಂದರ್ಭದಲ್ಲಿ ಮನೆ ಮಾಲೀಕರು ಹಾಗೂ ಯಶ್ ತಾಯಿ ಪುಷ್ಪ ನಡುವೆ ಸಣ್ಣ ಜಗಳ ಆಯಿತಂತೆ. ಆ ಜಗಳ ಹಾಗೂ ಮನೆ ಮಾಲೀಕರ ಅಹಂ ನಿಂದಾಗಿ ಇಷ್ಟೊಂದು ದೊಡ್ಡ ರಾದ್ಧಾಂತ ಆಗಿದೆ ಎಂದಿದ್ದಾರೆ ನಟ ಯಶ್.

  English summary
  Rocking Star Yash has taken his Facebook Account to clarify about his house rent controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X