For Quick Alerts
  ALLOW NOTIFICATIONS  
  For Daily Alerts

  100 ದಿನ ಪೂರೈಸಿದ 'ಕೆಜಿಎಫ್ 2'!

  |

  ಕನ್ನಡದ ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾ 'ಕೆಜಿಎಫ್ 2' ರಣಕಹಳೆ ಮತ್ತೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿದ್ದೂ, ಆಗಿದ್ದೂ ದಿನಗಳು ಉರುಳಿದರೂ, ಈ ಚಿತ್ರದ ಹವಾ ಮಾತ್ರ ಕಡಿಮೆ ಆಗಿಲ್ಲ. ಒಂದಲ್ಲಾ ಒಂದು ವಿಚಾರಕ್ಕೆ 'ಕೆಜಿಎಫ್ 2' ಸದ್ದು ಮಾಡುತ್ತಲೇ ಇದೆ.

  'ಕೆಜಿಎಫ್ 2' ಸಿನಿಮಾ ರಿಲೀಸ್ ಮುಂಚೆ ಹುಟ್ಟುಹಾಕಿದ ಎಲ್ಲಾ ನಿರೀಕ್ಷೆಗಳನ್ನು ಮೀರಿದೆ. ವಿಶ್ವಾದ್ಯಂತ 'ಕೆಜಿಎಫ್ 2' ಮಾಡಿದ ಅಬ್ಬರ, ಇಡಿ ವಿಶ್ವವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

  ಯಶ್‌ಗೆ 'ಬ್ಯಾಡ್ ಬಾಯ್' ಎಂದ ಸ್ಟಾರ್ ಪುತ್ರ, ಖುಷಿಯಾದ ರಾಧಿಕಾ!ಯಶ್‌ಗೆ 'ಬ್ಯಾಡ್ ಬಾಯ್' ಎಂದ ಸ್ಟಾರ್ ಪುತ್ರ, ಖುಷಿಯಾದ ರಾಧಿಕಾ!

  'ಕೆಜಿಎಫ್ 2' ಸಿನಿಮಾದ ನಿನ್ನೆ, ಮೊನ್ನೆ ರಿಲೀಸ್ ಆಯ್ತೇನೋ ಅನ್ನೋ ಹಾಗಾದೆ, ಅಷ್ಟರ ಮಟ್ಟಿಗೆ ಈ ಚಿತ್ರದ ಬಗ್ಗೆ ಕ್ರೇಜ್ ಇನ್ನೂ ಇದೆ. ಆದರೆ ಅದಾಗಲೇ ಈ ಸಿನಿಮಾ 100 ದಿನಗಳನ್ನು ಪೂರೈಸಿದೆ. 'ಕೆಜಿಎಫ್ 2' ಚಿತ್ರಕ್ಕೆ ನೋಡ, ನೋಡುತ್ತಿದ್ದಂತೆಯೇ 100 ದಿನ ತುಂಬಿದೆ.

  Yash 19: ಯಶ್‌ಗೆ ನರ್ತನ್ ನಿರ್ದೇಶನವಿಲ್ಲ, 'ಕೆಜಿಎಫ್ 3'ಗಾಗಿ ಯಶ್ ಪಟ್ಟು!Yash 19: ಯಶ್‌ಗೆ ನರ್ತನ್ ನಿರ್ದೇಶನವಿಲ್ಲ, 'ಕೆಜಿಎಫ್ 3'ಗಾಗಿ ಯಶ್ ಪಟ್ಟು!

  ಏಪ್ರಿಲ್ 14ರಂದು 'ಕೆಜಿಎಫ್ 2' ರಿಲೀಸ್!

  ಏಪ್ರಿಲ್ 14ರಂದು 'ಕೆಜಿಎಫ್ 2' ರಿಲೀಸ್!

  'ಕೆಜಿಎಫ್ 2' ಸಿನಿಮಾ ಇದೇ ವರ್ಷದ ಏಪ್ರಿಲ್ 14 ರಂದು ತೆರೆಗೆ ಬಂತು. 'ಕೆಜಿಎಫ್ 2' ರಿಲೀಸ್ ಮುನ್ನ ಇದ್ದಿದ್ದೂ ನಿರೀಕ್ಷೆಯ ಬೆಟ್ಟ. ಆದರೆ ಸಿನಿಮಾ ರಿಲೀಸ್ ಬಳಿಕ 'ಕೆಜಿಎಫ್ 2' ಮಾಡಿದ್ದೆಲ್ಲವೂ ಬರಿ ದಾಖಲೆ. ಅತಿ ಕಡಿಮೆ ಸಮಯದಲ್ಲಿ 'ಕೆಜಿಎಫ್ 2' ಸಿನಿಮಾ ದೊಡ್ಡ ಮಟ್ಟದಲ್ಲಿ ದಾಖಲೆಯನ್ನು ಮಾಡಿ ಬಿಟ್ಟಿರು. 100 ದಿನ ಹತ್ತಾರು ಚಿತ್ರಮಂದಿರಗಳಲ್ಲಿ ಇರುವ ಸಿನಿಮಾಗಳು ಮಾಡದ ದಾಖಲೆಯನ್ನು ಈ ಚಿತ್ರ ಅತ್ಯಂತ ವೇಗವಾಗಿ ಮಾಡಿತು. ಏಪ್ರಿಲ್ 14ಕ್ಕೆ ತೆರೆಬಂದ ಕೆಜಿಎಫ್ 2 ಚಿತ್ರಕ್ಕೆ ಇಂದು (ಜುಲೈ 22) 100 ದಿನಗಳನ್ನು ಪೂರೈಸಿದೆ.

  100 ದಿನ ಪೂರೈಸಿದ 'ಕೆಜಿಎಫ್ 2'!

  'ಕೆಜಿಎಫ್ 2' ಸಿನಿಮಾತಂಡ ಸದ್ಯ 100ನೇ ದಿನದ ಸಂಭ್ರಮದಲ್ಲಿ ಇದೆ. ಈ ಸಿನಿಮಾ ರಿಲೀಸ್ ಆದ 50 ದಿನಗಳ ಬಳಿಕ ಓಟಿಟಿಯಲ್ಲಿ ತೆರೆಗೆ ಬಂತು. 'ಕೆಜಿಎಫ್ 2' ಓಟಿಟಿಗೆ ಬಂದರೂ ಕೂಡ, ಭಾರತದಾದ್ಯಂತ ಹಲವು ಕಡೆಗಳಲ್ಲಿ ಸಿನಿಮಾ ಮಂದಿರದಲ್ಲಿ ಇತ್ತು. ಬಿಗ್ ಓಪನಿಂಗ್ ಪಡೆದು ಹಲವು ಪ್ರಥಮಗಳಿಗೆ ಸಾಕ್ಷಿ ಆದ ಕೆಜಿಎಫ್ 2 100 ದಿನಗಳನ್ನು ಪೂರೈಸಿದ ಹಿನ್ನೆಲೆ, ಚಿತ್ರತಂಡ ಈ ಖುಷಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿದೆ ಹಂಚಿಕೊಂಡಿದೆ.

  ಕೆಜಿಫ್ 2 ಬಗ್ಗೆ ವಿಜಯ್ ಕಿರಗಂದೂರು ಟ್ವೀಟ್!

  'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ 100 ದಿನ ಆದ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಈ ಬಗ್ಗೆ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. " ಅಚಲವಾದ ಬೆಂಬಲಕ್ಕಾಗಿ ಅಭಿಮಾನಿಗಳಿಗೆ ದೊಡ್ಡ ಧನ್ಯವಾದಗಳು. ನಿಮ್ಮ ಬೇಷರತ್ತಾದ ಪ್ರೀತಿಯು, ನಮಗೆ ಅತ್ಯುತ್ತಮವಾದದ್ದನ್ನು ಕೊಡಲು ಉತ್ತೇಜನ ನೀಡಿತು. ಇದನ್ನು ಇನ್ನೂ ದೊಡ್ಡದಾಗಿ ನಿರ್ಮಿಸುತ್ತಲೇ ಇರುತ್ತೇವೆ. ಮತ್ತು ನಮ್ಮ ಮುಂದಿನ ಯೋಜನೆಗಳೊಂದಿಗೆ ನಿಮಗೆ ಮನರಂಜನೆ ನೀಡುವುದಾಗಿ ಭರವಸೆ ನೀಡುತ್ತೇವೆ. 100 ಮಾನ್‌ಸ್ಟರ್ ಡೇಸ್ ಆಫ್ ಕೆಜಿಎಫ್ 2." ಎಂದು ವಿಜಯ್ ಕಿರಗಂದೂರು ಬರೆದುಕೊಂಡಿದ್ದಾರೆ.

  'ಕೆಜಿಎಫ್ 2' ಸಾಲು, ಸಾಲು ದಾಖಲೆ!

  'ಕೆಜಿಎಫ್ 2' ಸಾಲು, ಸಾಲು ದಾಖಲೆ!

  'ಕೆಜಿಎಫ್ 2' ಸಿನಿಮಾ ಮೊದಲ ದಿನವೇ 100 ಕೋಟಿಯನ್ನು ಕಲೆ ಹಾಕುವುದರ ಮೂಲಕ ಘರ್ಜನೆ ಶುರು ಮಾಡಿತು. ನಂತರ ಕೆಜಿಫ್ ಮಾಡಿದೆಲ್ಲವೂ ದಾಖಲೆಯೇ. ಅತ್ತ ಬಾಲಿವುಡ್‌ನಲ್ಲೂ ಅಲ್ಲಿನ ಸಿನಿಮಾಗಳ ದಾಖಲೆಯನ್ನು ನಿರಾಯಾಸವಾಗಿ ಮುರಿದು ಬಿಟ್ಟಿತು. ಇನ್ನು ವಿಶ್ವದಾದ್ಯಂತ ₹1250 ಕೋಟಿಗೂ ಅಧಿಕ ಗಳಿಸಿದೆ ಎನ್ನಲಾಗಿದೆ. ಜೊತೆಗೆ ಭಾರತದಾದ್ಯಂತ ಸುಮಾರು 5 ಕೋಟಿಗೂ ಅಧಿಕ ಮಂದಿ ಕೆಜಿಎಫ್ 2 ಸಿನಿಮಾ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

  English summary
  Yash Starrer KGF 2 Completes 100 Days, What KGF Team Says, Know More
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X