For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ 'ಮಾಸ್ಟರ್ ಪೀಸ್' ಶೈನಿಂಗ್ ಯಾವಾಗ?

  By Suneetha
  |

  ರಾಕಿಂಗ್ ಸ್ಟಾರ್ ಯಶ್ ಅವರ 'ಮಾಸ್ಟರ್ ಪೀಸ್' ಡಿಸೆಂಬರ್ 24 ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೀಗ ಜನವರಿ ತಿಂಗಳಿನಲ್ಲಿ, ಹೊಸ ವರ್ಷಕ್ಕೆ ವಿದೇಶಗಳಲ್ಲೂ 'ಮಾಸ್ಟರ್ ಪೀಸ್' ಸೌಂಡ್ ಮಾಡಲಿದೆ ಅನ್ನೋದು ಹೊಸ ವಿಚಾರ.

  ಹೌದು ವಿದೇಶಿಗನ್ನಡಿಗರನ್ನು 'ಮಾಸ್ಟರ್ ಪೀಸ್' ಜನವರಿ ತಿಂಗಳಿನ ನಂತರ ತನ್ನತ್ತ ಸೆಳೆಯಲಿದ್ದಾನೆ. ಹೀಗಂತ ಖುದ್ದು ರಾಕಿಂಗ್ ಸ್ಟಾರ್ ಯಶ್ ಅವರೇ ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ.[ಮುಯ್ಯಿಗೆ ಮುಯ್ಯಿ; ಯಶ್ 'ಮಾಸ್ಟರ್ ಪೀಸ್' ಕಟೌಟ್ ಪೀಸ್ ಪೀಸ್!]

  #Masterpiece will see a wide European release in January. Am sure Kannadigas in & around will make the most out of it :)

  Posted by Yash on Monday, December 21, 2015

  ಮೊದಲಿಗೆ ಯುರೋಪಿನಾದ್ಯಂತ ಮತ್ತು ಯುಕೆಯಲ್ಲಿ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿರುವ 'ಮಾಸ್ಟರ್ ಪೀಸ್' ಮುಂದಿನ ವರ್ಷ ಅಂದರೆ ಜನವರಿ ತಿಂಗಳಿನಲ್ಲಿ ಹೊಸ ವರ್ಷಕ್ಕೆ ಭರ್ಜರಿಯಾಗಿ ತೆರೆ ಕಾಣಲಿದೆ.

  ಇನ್ನು ವಿವಿದೆಡೆ ನೆಲೆಸಿರುವ ಕನ್ನಡಿಗರ ಅಪೇಕ್ಷೆಯ ಮೇರೆಗೆ ಕರ್ನಾಟಕ ಮಾತ್ರವಲ್ಲದೇ ದೆಹಲಿ, ಉತ್ತರ ಭಾರತದ ಕಡೆಗಳಲ್ಲಿ ಯಶ್ ಮತ್ತು ಶಾನ್ವಿ ಶ್ರೀವಾಸ್ತವ್ ಅವರು ಕಾಣಿಸಿಕೊಂಡಿರುವ 'ಮಾಸ್ಟರ್ ಪೀಸ್' ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.['ಮಾಸ್ಟರ್ ಪೀಸ್' ಬಿಡುಗಡೆಗೆ ಮುನ್ನ ಏನಿದು ಅಪಸ್ವರ.?]

  ಒಟ್ನಲ್ಲಿ ಎಲ್ಲಾ ಕಡೆ ರಾಕಿಂಗ್ ಸ್ಟಾರ್ ಯಶ್ ಅವರ 'ಮಾಸ್ಟರ್ ಪೀಸ್'ದೆ ಹವಾ ಜೋರಾಗಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಯಾಗುವುದನ್ನೇ, ಕಾತರದಿಂದ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

  English summary
  Yash Starrer Kannada Movie 'Masterpiece' Europe release in the month of January. Kannada Actor Yash, and Actress Shanvi Srivastava in the lead role. The Movie is directed by Manju Mandavya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X