»   » 'ರಾಮಾಚಾರಿ' ಓಟಕ್ಕೆ ಬ್ರೇಕ್ ಹಾಕುವ ಗುಂಡಿಗೆ ಯಾರಿಗಿದೆ?

'ರಾಮಾಚಾರಿ' ಓಟಕ್ಕೆ ಬ್ರೇಕ್ ಹಾಕುವ ಗುಂಡಿಗೆ ಯಾರಿಗಿದೆ?

Posted By:
Subscribe to Filmibeat Kannada

''ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ. ಕನ್ನಡ ಚಿತ್ರಗಳಲ್ಲಿ ಕ್ವಾಲಿಟಿ ಇಲ್ಲ. ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ'' ಅಂತ ಗೊಣಗುವವರು ಸಾಕಷ್ಟು ಮಂದಿ ಇದ್ದಾರೆ. ಅಂಥವರೆಲ್ಲರಿಗೂ ಸೆಡ್ಡು ಹೊಡೆದು, 'ಕನ್ನಡ ಚಿತ್ರಕ್ಕೆ ಮಾರ್ಕೆಟ್ ಎಷ್ಟಿದೆ' ಅಂತ ರಾಮಾಚಾರಿ ತೋರಿಸಿಕೊಟ್ಟಿದ್ದಾನೆ.

ಹೌದು, ಸ್ಯಾಂಡಲ್ ವುಡ್ ಇತಿಹಾಸದಲ್ಲಿನ ಹಿಂದೆಲ್ಲಾ ದಾಖಲೆಗಳನ್ನ ಧೂಳಿಪಟ ಮಾಡಿ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಹೊಸ ಹಿಸ್ಟ್ರಿ ಕ್ರಿಯೇಟ್ ಮಾಡಿದೆ. [ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..]


Yash starrer Mr and Mrs Ramachari completes 25 weeks

ರಿಲೀಸ್ ಆದ ವಾರಗಳಲ್ಲೇ ಕೋಟಿ-ಕೋಟಿ ಕಲೆಕ್ಷನ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಈಗ ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿದೆ.


25 ವಾರಗಳ ಪ್ರದರ್ಶನ ಪೂರೈಸಿ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಕೇವಲ ಎರಡ್ಮೂರು ವಾರಕ್ಕೆ ಕನ್ನಡ ಚಿತ್ರಗಳು ಚಿತ್ರಮಂದಿರಗಳಿಂದ ಎತ್ತಂಗಡಿ ಆಗುತ್ತಿರುವ ಈಗಿನ ಕಾಲದಲ್ಲಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' 25 ವಾರಗಳನ್ನ ಪೂರೈಸಿದೆ ಅಂದ್ರೆ ಅದಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಕಾರಣ. [ಹತ್ತು ಭಾಷೆಗಳಿಗೆ ಶತಕ ಪೂರೈಸಿದ 'ರಾಮಾಚಾರಿ']


Yash starrer Mr and Mrs Ramachari completes 25 weeks

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿ ಅಭಿನಯದ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. ಯುವ ಪ್ರತಿಭೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಘರ್ಜನೆ ಕೂಡ ಕೇಳಿಬಂದಿದ್ದು ವಿಶೇಷ. ['ರಾಮಾಚಾರಿ' ಚಿತ್ರ ನೋಡಿ ಥ್ರಿಲ್ಲಾದ ರಾಮ್ ಚರಣ್]


ಜ್ಯೂನಿಯರ್ ರಾಮಾಚಾರಿ ಆಗಿ ರಾಕಿಂಗ್ ಸ್ಟಾರ್ ನೀಡಿದ ಆಂಗ್ರಿ ಪರ್ಫಾಮೆನ್ಸ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅದ್ರ ಪರಿಣಾಮ, ರಾಮಾಚಾರಿ ಚಿತ್ರಮಂದಿರಗಳಲ್ಲಿ ಇನ್ನೂ ಗಟ್ಟಿಯಾಗಿ ನೆಲೆಯೂರಿದ್ದಾನೆ. ಫುಲ್ ಝೂಮ್ ನಲ್ಲಿ ಓಡುತ್ತಿರುವ 'ರಾಮಾಚಾರಿ' ಯಶಸ್ಸಿಗೆ ಬ್ರೇಕ್ ಹಾಕುವ ಗುಂಡಿಗೆ ಯಾರಿಗಿದೆ ಹೇಳಿ.?

English summary
Rocking Star Yash starrer MR and MRS Ramachari has created a new wave by completing 25 weeks.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada