»   » ಬಾಕ್ಸ್ ಆಫೀಸ್ ನಲ್ಲಿ 'ರಾಮಾಚಾರಿ' ತಕಧಿಮಿತ

ಬಾಕ್ಸ್ ಆಫೀಸ್ ನಲ್ಲಿ 'ರಾಮಾಚಾರಿ' ತಕಧಿಮಿತ

Posted By:
Subscribe to Filmibeat Kannada

ಒಳ್ಳೆ ಕನ್ನಡ ಸಿನಿಮಾ ಮಾಡಿದ್ರೆ ಯಾರು ತಾನೇ ನೋಡಲ್ಲ..!? 'ಕನ್ನಡ ಸಿನಿಮಾಗಳಿಗೆ ಕಲೆಕ್ಷನ್ ಕಮ್ಮಿ' ಅಂತ ತಲೆ ಚಚ್ಚಿಕೊಳ್ಳುತ್ತಿದ್ದ ನಿರ್ಮಾಪಕರು ಒಮ್ಮೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಕಲೆಕ್ಷನ್ ರಿಪೋರ್ಟ್ ನ ನೋಡಲೇಬೇಕು.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಾಗಿದ್ದ ಎಲ್ಲಾ ರೆಕಾರ್ಡ್ ಗಳನ್ನ ಅಳಿಸಿ ಹಾಕಿ, ಹೊಚ್ಚ ಹೊಸ ದಾಖಲೆಯನ್ನ ಬರೆದಿದೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ.

MR and MRS Ramachari1

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25 ರಂದು ತೆರೆಕಂಡ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ರಿಲೀಸ್ ಆದ ಎರಡೇ ವಾರಗಳಲ್ಲಿ ಕಮಾಯಿ ಮಾಡಿರುವುದು ಎಷ್ಟು ಗೊತ್ತಾ..? ಬರೋಬ್ಬರಿ 26 ಕೋಟಿ...!

ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಹಿಸ್ಟರಿ..! ಕರ್ನಾಟಕದಾದ್ಯಂತ ಮತ್ತು ಕಳೆದ ವಾರವಷ್ಟೇ ಮಹಾರಾಷ್ಟ್ರದಲ್ಲಿ ರಿಲೀಸ್ ಆದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' 190 ಕ್ಕೂ ಎಲ್ಲಾ ಥಿಯೇಟರ್ ಗಳಲ್ಲಿ '26 ಕೋಟಿ ರೂಪಾಯಿ' ಕೊಳ್ಳೆ ಹೊಡೆದಿದೆ. [ಬಾಕ್ಸ್ ಆಫೀಸಲ್ಲಿ ಭರ್ಜರಿ ಓಪನಿಂಗ್ ಪಡೆದ 'ರಾಮಾಚಾರಿ']

MR and MRS Ramachari2

ಅದ್ರಲ್ಲಿ, ಥಿಯೇಟರ್ ಬಾಡಿಗೆ ಬಿಟ್ಟರೆ ಬಂದಿರುವ ಲಾಭ ಬರೋಬ್ಬರಿ 22 ಕೋಟಿ. ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದ ನೆಲೆಯೂರಿರುವ ಹೀರೋಗಳು ಮತ್ತು ನಿರ್ದೇಶಕರು ಮಾಡದ ಇಂತಹ ದೊಡ್ಡ ದಾಖಲೆಯನ್ನ ರಾಕಿಂಗ್ ಸ್ಟಾರ್ ಯಶ್ ಮತ್ತು ನವ ನಿರ್ದೇಶಕ ಸಂತೋಷ್ ಅನಂದ್ ರಾಮ್ ಮಾಡಿ, ಎಲ್ಲರ ಹುಬ್ಬೇರಿಸಿದ್ದಾರೆ.

ಮೊದಲ ವಾರ ಎಲ್ಲೆಡೆ 12 ಕೋಟಿ ರೂಪಾಯಿ ಪೈಸಾ ವಸೂಲಿ ಮಾಡಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಎರಡನೇ ವಾರ, ಬಾಲಿವುಡ್ ನಲ್ಲಿ 'ಪಿಕೆ', ಸ್ಯಾಂಡಲ್ ವುಡ್ ನಲ್ಲಿ 'ಖುಷಿ ಖುಷಿಯಾಗಿ' ಮತ್ತು 'ಶಿವಂ' ಅಬ್ಬರವಿದ್ದರೂ 9 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ.

MR and MRS Ramachari3

ಸ್ಟಾರ್ ಸಿನಿಮಾವೇ ಆದರೂ, ಎರಡೇ ವಾರಕ್ಕೆ ಥಿಯೇಟರ್ ನಿಂದ ಎತ್ತಂಗಡಿ ಆಗುವ ಈಗಿನ ಪರಿಸ್ಥಿತಿಯಲ್ಲಿ ಸತತ ಮೂರನೇ ವಾರವೂ ಮಲ್ಟಿಪ್ಲೆಕ್ಸ್ ಗಳಲ್ಲಿ 1400 ಶೋಗಳು ಮತ್ತು 190ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ 'ರಾಮಾಚಾರಿ'ಯ 'ಯಶ'ಸ್ಸಿನ ನಾಗಲೋಟ ಮುಂದುವರಿದಿರುವುದು ಗಾಂಧಿನಗರದ ಉತ್ತಮ ಬೆಳವಣಿಗೆ. [ಎರಡನೇ ವರ್ಷವೂ ಸ್ಯಾಂಡಲ್ ವುಡ್ ಸುಲ್ತಾನ್ ಯಶ್]

ಇದೇ ಸಂತಸವನ್ನ 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡ ನಿರ್ದೇಶಕ ಸಂತೋಷ್ ಅನಂದ್ ರಾಮ್, ''ಕನ್ನಡ ಚಿತ್ರರಂಗದಲ್ಲಿ 'ರಾಮಾಚಾರಿ' ಆಲ್ ಟೈಮ್ ರೆಕಾರ್ಡ್ ಮಾಡಿದ್ದಾನೆ. ಎರಡು ವಾರಕ್ಕೆ ನಮಗೆ 22 ಕೋಟಿ ನೆಟ್ ಕಲೆಕ್ಷನ್ ಸಿಕ್ಕದೆ. ಕನ್ನಡ ಪ್ರೇಕ್ಷಕರ ಸಪೋರ್ಟ್ ನಮಗಿದೆ, ಎಲ್ಲಾ ಕಡೆ ಸಿನಿಮಾ ಹೌಸ್ ಫುಲ್ ಆಗಿ ಓಡುತ್ತಿದೆ''.

''ಸಂತೋಷ್, ವೀರೇಶ್, ನವರಂಗ್ ನಲ್ಲಿ ಮೊದಲ ದಿನ ಹಾಕಿದ್ದ ಹೌಸ್ ಫುಲ್ ಬೋರ್ಡ್ ನ ಇನ್ನೂ ತೆಗದೇ ಇಲ್ಲ ಸಾರ್ ಅಂತಾರೆ. ಮಲ್ಟಿಪ್ಲೆಕ್ಸ್ ಗಳಲ್ಲೂ ಅಷ್ಟೇ, ಪ್ರತಿ ಶೋ ಕೂಡ ಸೋಲ್ಡ್ ಔಟ್ ಆಗುತ್ತಿದೆ. ಸಿನಿಪೋಲಿಸ್ ನಲ್ಲಿ ಇನ್ನೂ 7 ಶೋ ನಡೆಯುತ್ತಿದೆ. ಓರಾಯಿನ್ ಮಾಲ್, ಗೋಪಾಲ್ ಆರ್ಕೆಡ್ ನಲ್ಲೂ ಕಲೆಕ್ಷನ್ ಸೂಪರ್ ಆಗಿದೆ. ಇದು ಇಂಡಸ್ಟ್ರಿ ರೆಕಾರ್ಡ್'',

MR and MRS Ramachari4

''ಪರಭಾಷೆಯವರೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಯನ್ನ ನೋಡುತ್ತಿದ್ದಾರೆ. ಬೆಳಗಾವಿ, ಬಳ್ಳಾರಿಯಂತ ಗಡಿ ಭಾಗಗಳಲ್ಲೂ 'ರಾಮಾಚಾರಿ' ಚೆನ್ನಾಗಿ ಓಡುತ್ತಿದೆ. ಮುಖ್ಯ ಚಿತ್ರಮಂದಿರ ಸಂತೋಷ್ ನಲ್ಲಿ ಇವತ್ತಿನ ವರೆಗೂ 300 ರೂಪಾಯಿ ಟಿಕೆಟ್ ಬ್ಲಾಕ್ ನಲ್ಲಿ ಹೋಗುತ್ತಿದೆ'' ಅಂತ ಖುಷಿ ಖುಷಿಯಿಂದ ಮಾತನಾಡಿದ್ರು ಸಂತೋಷ್ ಅನಂದ್ ರಾಮ್.

ರಾಜ್ಯದ ಮೂಲೆಮೂಲೆಯಲ್ಲೂ ಇಷ್ಟೆಲ್ಲಾ ಕಲೆಕ್ಷನ್ ಮಾಡುತ್ತಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಗೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಲಭ್ಯವಾಗಿದೆ. ಅದ್ರಲ್ಲೂ ಡಾ.ವಿಷ್ಣು ಅಭಿಮಾನಿಗಳಿಗೆ ಹಬ್ಬವಾಗಿರುವ 'ರಾಮಾಚಾರಿ'ಯನ್ನ ನೋಡೋಕೆ ಪದೇ ಪದೇ ಥಿಯೇಟರ್ ಗಳಿಗೆ ಮುಗಿಬೀಳ್ತಿದ್ದಾರೆ. [ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..]

MR and MRS Ramachari5

ಬರಗಾಲ ಬಂದಿದ್ದ ಗಾಂಧಿನಗರದಲ್ಲಿ 'ರಾಮಾಚಾರಿ' ಅಬ್ಬರದಿಂದ ಒಳ್ಳೆ ಬೆಳೆ ಸಿಗುತ್ತಿದೆ. ಇದಕ್ಕೆ 'ಸಾಹಸಸಿಂಹ'ನ ಕೃಪೆ ಇದೆ ಅಂದ್ರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ..! ಎಷ್ಟೇ ಆಗಲಿ, ಈಗಿನ 'ರಾಮಾಚಾರಿ', ಅಂದಿನ 'ರಾಮಾಚಾರಿ'ಯ ಫ್ಯಾನ್ ಅಲ್ವಾ..! (ಫಿಲ್ಮಿಬೀಟ್ ಕನ್ನಡ)

English summary
Rocking Star Yash starrer MR and MRS Ramachari has created All Time Record in Sandalwood Box Office by Collecting 26 Crores Gross Amount in just two weeks, which is Highest so far in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada