For Quick Alerts
  ALLOW NOTIFICATIONS  
  For Daily Alerts

  ಸಪ್ತ ಸಾಗರದಾಚೆಗೆ ಹಾರಿದ 'ರಾಮಾಚಾರಿ'

  By Harshitha
  |

  ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಏಳೇ ವರ್ಷಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಯುವ ಸಮೂಹಕ್ಕೆ ಬ್ರ್ಯಾಂಡ್ ಆಗಿ 'ಯೂತ್ ಐಕಾನ್' ಅನ್ನುವ ಬಿರುದಾಂಕಿತರಾಗಿರುವ ಯಶ್, ವಿದೇಶದಲ್ಲೂ ಅಷ್ಟೇ ಜನಪ್ರಿಯ.

  ಸ್ಯಾಂಡಲ್ ವುಡ್ ನ ಲೇಟೆಸ್ಟ್ 'ಸುಲ್ತಾನ್' ಆಗಿರುವ ಯಶ್, ಬರೀ ಕರ್ನಾಟಕದ ಗಡಿಗಷ್ಟೇ ಸೀಮಿತವಾಗಿಲ್ಲ. ತಮ್ಮ ಚಿತ್ರಗಳಿಂದ ಗಡಿಯಾಚೆ ಇರಲಿ, ಸಾಗರದಾಚೆಗೂ ಲಗ್ಗೆ ಇಟ್ಟಿದ್ದಾರೆ ಯಶ್.

  ಅದಕ್ಕೆ 'ಡ್ರಾಮಾ', 'ಗೂಗ್ಲಿ' ಮತ್ತು 'ಗಜಕೇಸರಿ' ಚಿತ್ರಗಳೇ ಸಾಕ್ಷಿ. ದೂರದ ಅಮೇರಿಕಾ, ಆಸ್ಟ್ರೇಲಿಯಾ, ಲಂಡನ್, ಜರ್ಮನಿ, ಸಿಂಗಾಪುರ್, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಯಶ್ ಕಟ್ಟಾ ಭಕ್ತರ ಸಂಖ್ಯೆ ಲೆಕ್ಕವಿಲ್ಲದಷ್ಟು. [ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ]

  ಅಲ್ಲಿನ ಪ್ರೇಕ್ಷಕರ ಒತ್ತಾಯದ ಮೇರೆಗೆ 'ಡ್ರಾಮಾ', 'ಗೂಗ್ಲಿ' ಮತ್ತು 'ಗಜಕೇಸರಿ' ಚಿತ್ರಗಳು ರಿಲೀಸ್ ಆಗಿ ಅಭೂತಪೂರ್ವ ಯಶಸ್ಸು ಕಂಡಿತ್ತು.

  ಇದೀಗ ಅದೇ ಸಾಲಿಗೆ ಸೇರುವುದಕ್ಕೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಕೂಡ ತಯಾರಾಗಿದೆ. ಅಂದ್ರೆ, 'ಟೆಕ್ಸಾಸ್, ಕ್ಯಾಲಿಫೋರ್ನಿಯಾ, ಇರಾಕ್, ಆಸ್ಟೇಲಿಯಾ, ಅಬುಧಾಬಿ, ಸಿಂಗಾಪುರ್' ಸೇರಿದಂತೆ ಹಲವು ದೇಶಗಳಲ್ಲಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಬಿಡುಗಡೆಯಾಗಲಿದೆ. [ಬಾಕ್ಸ್ ಆಫೀಸ್ ನಲ್ಲಿ 'ರಾಮಾಚಾರಿ' ತಕಧಿಮಿತ]

  ''ಕರ್ನಾಟಕದಲ್ಲಿ ಸಿನಿಮಾ ಸೂಪರ್ ಆಗಿ ಓಡುತ್ತಿದೆ. ಕಳೆದ ವಾರವಷ್ಟೇ ಮಹಾರಾಷ್ಟ್ರದಲ್ಲೂ ಚಿತ್ರವನ್ನ ರಿಲೀಸ್ ಮಾಡಿದ್ವಿ. ಫಾರಿನ್ ನಿಂದ ಬೇಡಿಕೆ ಹೆಚ್ಚಾಗಿದೆ.''

  ''ಯಶ್ ಅಭಿನಯದ ಮೂರು ಚಿತ್ರಗಳು ಈಗಾಗಲೇ ವಿದೇಶದಲ್ಲೂ ಹಿಟ್ ಆಗಿದೆ. ಹೀಗಾಗಿ ನಾವು ಅನೇಕ ದೇಶಗಳಲ್ಲಿ ಚಿತ್ರವನ್ನ ರಿಲೀಸ್ ಮಾಡುತ್ತಿದ್ದೀವಿ.'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಸಂತೋಷ್ ಅನಂದ್ ರಾಮ್ ತಿಳಿಸಿದ್ದಾರೆ.

  ಈಗಾಗಲೇ ಅದರ ತಯಾರಿಯಲ್ಲಿ ತೊಡಗಿರುವ ನಿರ್ಮಾಪಕ ಜಯಣ್ಣ-ಭೋಗೇಂದ್ರ ವಿದೇಶಿ ವಿತರಕರ ಜೊತೆ ಮಾತುಕತೆ ನಡೆಸಿದ್ದಾರೆ. ಜನವರಿ ಕೊನೆಗೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಆರಕ್ಕೂ ಹೆಚ್ಚು ವಿದೇಶಗಳಲ್ಲಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ವಿಜೃಂಭಿಸಲಿದ್ದಾನೆ. [ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..]

  ಕರ್ನಾಟಕದಲ್ಲೇ ಕನ್ನಡ ಚಿತ್ರಗಳಿಗೆ ಕೇಳುವವರಿಲ್ಲ. ಎಂತೆಂಥ ಸಿನಿಮಾಗಳೇ ಕೇವಲ ಎರಡೇ ವಾರಕ್ಕೆ ಎತ್ತಂಗಡಿ ಆಗಿರುವ ಉದಾಹರಣೆ ನಮ್ಮ ಕಣ್ಣೆದುರಿದೆ. ಅಂಥದ್ರಲ್ಲಿ ಎರಡು ವಾರಗಳಲ್ಲಿ ಬರೋಬ್ಬರಿ 26 ಕೋಟಿ ಬಾಚಿ, ವಿದೇಶಿ ನೆಲಕ್ಕೂ ಅಡಿಯಿಡುತ್ತಿರುವ 'ರಾಮಾಚಾರಿ'ಯನ್ನ ಮೆಚ್ಚಲೇಬೇಕಲ್ಲವೇ...!? (ಫಿಲ್ಮಿಬೀಟ್ ಕನ್ನಡ)

  English summary
  Rocking Star Yash starrer MR and MRS Ramachari is all set to release in Foreign countries. Producer Jayanna is already in talk with Texas, Australia, California, Abu Dhabi and Singapore Distributors. The movie might release by end of January or in the first week of February.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X