»   » 'ಯಶೋಮಾರ್ಗ'ಕ್ಕಾಗಿ ಹೊಸ ಕಚೇರಿ ಸ್ಥಾಪಿಸಿದ ಯಶ್ ದಂಪತಿ

'ಯಶೋಮಾರ್ಗ'ಕ್ಕಾಗಿ ಹೊಸ ಕಚೇರಿ ಸ್ಥಾಪಿಸಿದ ಯಶ್ ದಂಪತಿ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್, ತಮ್ಮ 'ಯಶೋಮಾರ್ಗ ಫೌಂಡೇಶನ್'ನಿಂದ ರೈತರು, ಬಡವರು ಕಷ್ಟದಲ್ಲಿದ್ದರಿಗೆ ನೆರವಾಗುತ್ತಿದ್ದಾರೆ. ಇದೀಗ, ಯಶ್ ಅವರ ಸಾಮಾಜಿಕ ಕಾರ್ಯಗಳಲ್ಲಿ ಪತ್ನಿ ರಾಧಿಕಾ ಪಂಡಿತ್ ಅವರು ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ.

ಇಷ್ಟು ದಿನ ಫೇಸ್ ಬುಕ್, ಟ್ವಿಟ್ಟರ್ ಹಾಗೂ ವೆಬ್ ಸೈಟ್ ಮೂಲಕ ಜನರ ಸಂಕಷ್ಟಗಳಿಗೆ ಮಿಡಿಯುತ್ತಿದ್ದ 'ಯಶೋಮಾರ್ಗ ಫೌಂಡೇಶನ್', ಇನ್ನು ಒಂದು ಹೆಜ್ಜೆ ಮುಂದೆ ಸಾಗಿ, ನೂತನ ಕಚೇರಿ ನಿರ್ಮಾಣ ಮಾಡಿದೆ.[ಯಶ್ ಹುಟ್ಟುಹಬ್ಬಕ್ಕೆ ವೆಬ್ ಲೋಕಕ್ಕೆ ಯಶೋಮಾರ್ಗ ಎಂಟ್ರಿ!]

ಇತ್ತೀಚೆಗಷ್ಟೆ ನೂತನ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್, 'ಯಶೋಮಾರ್ಗ ಫೌಂಡೇಶನ್' ನೂತನ ಕಚೇರಿಗೆ ಚಾಲನೆ ನೀಡಿದರು.

'ಯಶೋಮಾರ್ಗ' ಕಚೇರಿ ಸ್ಥಾಪಿಸಿದ ಯಶ್

ನಟ ಯಶ್ ಸಾರಥ್ಯದ 'ಯಶೋಮಾರ್ಗ ಫೌಂಡೇಶನ್'ನ ಕೆಲಸ ಕಾರ್ಯಗಳಿಗಾಗಿ ನೂತನ ಕಚೇರಿ ಸ್ಥಾಪನೆಯಾಗಿದೆ.

ಹೊಸ ಕಛೇರಿಯಲ್ಲಿ ರಾಧಿಕಾ-ಯಶ್ ಪೂಜೆ!

ಹೊಸದಾಗಿ ನಿರ್ಮಾಣ ಮಾಡಿದ 'ಯಶೋಮಾರ್ಗ ಫೌಂಡೇಶನ್' ಕಚೇರಿಗೆ, ನಟ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಪೂಜೆ ಮಾಡಿ ಚಾಲನೆ ನೀಡಿದರು.

ಯಶ್ 'ಯಶೋಮಾರ್ಗ'ದಲ್ಲಿ ರಾಧಿಕಾ ಹೆಜ್ಜೆ!

ಇಷ್ಟು ದಿನ ಯಶ್ ಅವರು ಮಾತ್ರ ತಮ್ಮ 'ಯಶೋಮಾರ್ಗ'ದ ಮೂಲಕ ಸಾಮಾಜಿಕ ಕಾರ್ಯಗಳನ್ನ ಹಮ್ಮಿಕೊಳ್ಳುತ್ತಿದ್ದರು. ಇನ್ನು ಮುಂದೆ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಯಶ್ ಅವರ 'ಯಶೋಮಾರ್ಗ'ದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.

ಸಂಸತ ಹಂಚಿಕೊಂಡ ರಾಧಿಕಾ ಪಂಡಿತ್

''ಬೇರೆಯವರಿಗೆ ನಮ್ಮಿಂದ ಆಗುವ ಸಹಾಯ ಮಾಡಿದರೇ, ಅದರಲ್ಲಿ ಕಾಣುವ ತೃಪ್ತಿ ಬೇರೊಂದು ಇಲ್ಲ. ಇದು ನಮ್ಮ ಹೊಸ ಕಛೇರಿ. ಇದಕ್ಕೆ ಎಲ್ಲರೂ ಕೈಜೋಡಿಸಿ. ಆಗಲೇ ಬದಲಾವಣೆ ತರಲು ಸಾಧ್ಯ''- ರಾಧಿಕಾ ಪಂಡಿತ್

'ಯಶೋಮಾರ್ಗ ಫೌಂಡೇಶನ್' ಉದ್ದೇಶ!

ರೈತರು, ಬಡವರು, ಕಷ್ಟದಲ್ಲಿ ಇರುವವರಿಗೆ ವಿಶೇಷ ಸವಲತ್ತುಗಳನ್ನ ಒದಗಿಸುವ ಮೂಲಕ 'ಯಶೋಮಾರ್ಗ ಫೌಂಡೇಶನ್' ಸಹಾಯ ಮಾಡಿದೆ. ಬರಪೀಡಿತ ಹಳ್ಳಿಗಳ ಅಭಿವೃದ್ದಿಗೆ, ಕೃಷಿ ಅಭಿವೃದ್ದಿ ಸೇರಿದಂತೆ ಹಲವು ಜನರ ಯೋಜನೆಗಳನ್ನ ಮಾಡುವ ಉದ್ದೇಶ ಹೊಂದಿದೆ ಯಶೋಮಾರ್ಗ.

English summary
Newly weds Yash and Radhika Pandit couple Recently Started a New Foundation ''YashoMarga Foundation''. which, According to the Website, is their Effort to Contribute to the Society.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada