For Quick Alerts
  ALLOW NOTIFICATIONS  
  For Daily Alerts

  'ಅಮ್ಮ ಐ ಲವ್ ಯೂ' ಸಿನಿಮಾ ನೋಡಿ ಮೆಚ್ಚಿಕೊಂಡ ಯಶ್

  By Naveen
  |
  ಅಮ್ಮ ಐ ಲವ್ ಯೂ ಸಿನಿಮಾ ನೋಡಿ ಯಶ್ ಹೇಳಿದ್ದೇನು ..?| Filmibeat Kannada

  ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಚಿರಂಜೀವಿ ಸರ್ಜಾ ನಟನೆಯ 'ಅಮ್ಮ ಐ ಲವ್ ಯೂ' ಚಿತ್ರಕ್ಕೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗ ಈ ಸಿನಿಮಾವನ್ನು ನಟ ಯಶ್ ಕೂಡ ನೋಡಿದ್ದಾರೆ. ಇಂದು ಸಿನಿಮಾ ವೀಕ್ಷಿಸಿರುವ ಯಶ್ ಅದರ ಬಗ್ಗೆ ಮಾತನಾಡಿದ್ದಾರೆ.

  ''ಅಮ್ಮ ಐ ಲವ್ ಯೂ' ಸಿನಿಮಾ ನೋಡಿದೆ. ಒಳ್ಳೆಯ ಸಿನಿಮಾ ಬಂದಾಗ ಎಲ್ಲರೂ ಅದನ್ನು ನೋಡಬೇಕು, ಪ್ರೋತ್ಸಾಹ ನೀಡಬೇಕು. ಈ ಸಿನಿಮಾದ ವಿಷಯ ತುಂಬ ಚೆನ್ನಾಗಿದೆ. ಮಕ್ಕಳು ತಂದೆ - ತಾಯಿಗೆ ತ್ಯಾಗ ಮಾಡುವುದು ಕಡಿಮೆ. ಆದರೆ ಇಲ್ಲಿ ಒಬ್ಬ ಮಗ ತಾಯಿಗೋಸ್ಕರ ಎಷ್ಟು ಕಷ್ಟ ಪಡುತ್ತಾನೆ ಎನ್ನುವ ಅಂಶ ಇದೆ.'' ಎಂದು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ ಯಶ್.

  'ಅಮ್ಮ ಐ ಲವ್ ಯು' ವಿಮರ್ಶೆ: ಹೆಂಗಳೆಯರ ಮನಮಿಡಿಯುವ ಚಿತ್ರ 'ಅಮ್ಮ ಐ ಲವ್ ಯು' ವಿಮರ್ಶೆ: ಹೆಂಗಳೆಯರ ಮನಮಿಡಿಯುವ ಚಿತ್ರ

  ಜೊತೆಗೆ ''ಅಮ್ಮ ಐ ಲವ್ ಯೂ' ಚಿತ್ರದಲ್ಲಿ ಒಳ್ಳೆಯ ಕಥೆ ಇದೆ. ಚೈತನ್ಯ ತುಂಬ ಚೆನ್ನಾಗಿ ಡೈರೆಕ್ಟ್ ಮಾಡಿದ್ದಾರೆ. ಚಿರು ತುಂಬ ಚೆನ್ನಾಗಿ ನಟನೆ ಮಾಡಿದ್ದಾರೆ. ದ್ವಾರಕೀಶ್ ಸಂಸ್ಥೆಯಿಂದ ಮತ್ತೊಮ್ಮೆ ಒಂದು ಒಳ್ಳೆಯ ಸಿನಿಮಾ ಬಂದಿದೆ. ಈ ಸಿನಿಮಾ ನೋಡಿ ಆಶೀರ್ವಾದ ಮಾಡಿ.'' ಎಂದು ತಮ್ಮ ಅಭಿಮಾನಿಳಿಗೆ ಯಶ್ ಹೇಳಿದ್ದಾರೆ.

  English summary
  Kannada actor Yash watched 'amma i love you' movie and he appreciate Chiranjeevi sarja for fantastic role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X