»   » ಟಗರು ಸಿನಿಮಾ ವಿಮರ್ಶೆ ಮಾಡಿದ ರಾಕಿಂಗ್ ಸ್ಟಾರ್

ಟಗರು ಸಿನಿಮಾ ವಿಮರ್ಶೆ ಮಾಡಿದ ರಾಕಿಂಗ್ ಸ್ಟಾರ್

Posted By:
Subscribe to Filmibeat Kannada

ಕಳೆದ ಮೂರು ವಾರಗಳಿಂದ ಸ್ಯಾಂಡಲ್ ವುಡ್ ನಲ್ಲಿ ಟಗರು ಸಿನಿಮಾದ್ದೇ ಸುದ್ದಿ. ಸಾಮಾನ್ಯ ಜನರು, ಚಿತ್ರರಂಗದ ತಂತ್ರಜ್ಞರು ಹಾಗೂ ಕಲಾವಿದರು ಎಲ್ಲರೂ ಸಿನಿಮಾವನ್ನ ನೋಡಿ ಉತ್ತಮ ಪ್ರತಿಕ್ರಿಯೆಯನ್ನ ನೀಡುತ್ತಾ ಬಂದಿದ್ದಾರೆ.

ಕಳೆದವಾರವಷ್ಟೇ ಕಿಚ್ಚ ಸುದೀಪ್ ಸಿನಿಮಾ ನೋಡಿ ಚಿತ್ರದ ಸ್ಕ್ರೀನ್ ಪ್ಲೇ ಹಾಗೂ ಕಲಾವಿದರ ಅಭಿನಯ ಮತ್ತು ದುನಿಯಾ ಸೂರಿ ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ಸಿನಿಮಾವನ್ನ ನೋಡಿ ತಮ್ಮ ವಿಮರ್ಶೆ ನೀಡಿದ್ದಾರೆ.


ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾದ 'ಕಾನ್ಸ್ ಟೇಬಲ್ ಸರೋಜ'


ಟಗರು ಸಿನಿಮಾ ನೋಡಿದ ನಂತರ ಯಶ್ ಮೊದಲಿಗೆ ಮಾತನಾಡಿದ್ದು ಸೂರಿ ಅವರ ನಿರ್ದೇಶನದ ಬಗ್ಗೆ. ಎಲ್ಲಿಯೂ ಬೇಸರವಾಗದಂತೆ ಚಿತ್ರದ ಚಿತ್ರಕತೆಯನ್ನ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಚಿತ್ರದಲ್ಲಿ ಎಲ್ಲಿಯೂ ಬಿಲ್ಡಪ್ ಗಳಿಲ್ಲ. ಶಿವಣ್ಣನ ಅಭಿನಯ ತುಂಬಾ ಇಷ್ಟವಾಗುತ್ತೆ ಎಂದಿದ್ದಾರೆ.


Yash watched kannada movie Tagaru

ವಿಶೇಷ ಅಂದರೆ ಟಗರು ಸಿನಿಮಾ ನೋಡಿದ ಪ್ರತಿಯೊಬ್ಬರು ಡಾಲಿ ಪಾತ್ರಕ್ಕೆ ಮನಸೋತಿರುವಂತೆ ಯಶ್ ಕೂಡ ಧನಂಜಯ ಅವರ ಅಭಿನಯವನ್ನ ಹಾಗೂ ಪಾತ್ರ ನಿರ್ವಹಣೆಯನ್ನು ಇಷ್ಟ ಪಟ್ಟಿದ್ದಾರೆ. ಕ್ಯಾಮೆರಾ ವರ್ಕ್, ಸಂಭಾಷಣೆ ಹಾಗೂ ಸಿನಿಮಾದ ಎಲ್ಲಾ ಪಾತ್ರಗಳ ಬಗ್ಗೆ ಮಾತನಾಡುವುದರ ಜೊತೆಗೆ ಟಗರು ಚಿತ್ರ ನೋಡುವಾಗ ತಲೆಗೆ ಕೆಲಸ ಹೆಚ್ಚಾಗುತ್ತೆ ಎಂದಿದ್ದಾರೆ.


Yash watched kannada movie Tagaru

ಶಿವಣ್ಣನ ತೆರೆ ಮೇಲೆ ನೋಡುವಾಗ ಕೆಲ ಸೀನ್ ಗಳಲ್ಲಿ ರಾಜ್ ಕುಮಾರ್ ಅವರಂತೆ ಕಾಣುತ್ತಾರೆ ಎಂದಿದ್ದಾರೆ ರಾಕಿಂಗ್ ಸ್ಟಾರ್, ಇದೆ ಜೊತೆಯಲ್ಲಿ ಗೆಳೆಯ ವಸಿಷ್ಠನ ಪಾತ್ರವನ್ನೂ ಇಷ್ಟ ಪಟ್ಟಿದ್ದಾರೆ. ಒಟ್ಟಾರೆ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಹೊಸ ದೇಶಗಳಲ್ಲೂ ಟಗರು ಹವಾ ಜೋರಾಗಿದೆ.


ವಿಲನ್ ಚಿತ್ರದಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಲಿರುವ ನಟಿಯರು ಇವರೇ

English summary
Kannada film actor Yash watched kannada movie Tagaru, Yash has shared his opinion after seeing the Tagaru movie ,Tagaru Shivaraj Kumar, Manwitha Harish starrer movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada