For Quick Alerts
  ALLOW NOTIFICATIONS  
  For Daily Alerts

  ಸಿಂಡ್ರೆಲ್ಲಾ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ: ರಾಕಿ ಭಾಯ್ ಎಲ್ಲಿ?

  |

  ವಿವಾಹದ ಬಳಿಕ ರಾಧಿಕಾ ಪಂಡಿತ್ ಸಿನಿಮಾದಿಂದ ದೂರವಿರಬಹುದು. ಆದರೆ, ಸೋಶಿಯಲ್ ಮೀಡಿಯಾದಿಂದ ದೂರವಿಲ್ಲ. ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇದ್ದೇ ಇರುತ್ತಾರೆ. ತಮ್ಮ ಮಕ್ಕಳೊಂದಿಗೆ ಕಳೆದ ಮಧುರ ಕ್ಷಣಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.

  ಇತ್ತೀಚೆಗೆ ರಾಧಿಕಾ ಪಂಡಿತ್ ಪತಿ ಯಶ್ ಜೊತೆ ವಿದೇಶ ಪ್ರವಾಸದ ಫೋಟೊಗಳನ್ನು ಶೇರ್ ಮಾಡಿದ್ದರು. ಯಶ್ ಹಾಗೂ ರಾಧಿಕಾ ಅಭಿಮಾನಿಗಳು ಇಬ್ಬರನ್ನೂ ಒಟ್ಟಿಗೆ ಕಂಡು ಹರ್ಷ ವ್ಯಕ್ತ ಪಡಿಸಿದ್ದರು. ಮತ್ತೆ ರಾಧಿಕಾ ಪಂಡಿತ್ ಸಿನಿಮಾದಲ್ಲಿ ನಟಿಸಬೇಕು ಅಂತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

  ಯೂರೋಪಿನಲ್ಲಿ ರಾಕಿಂಗ್ ಜೋಡಿ; ಅಭಿಮಾನಿಗಳಿಗೆ ಅದೊಂದೇ ಚಿಂತೆ!ಯೂರೋಪಿನಲ್ಲಿ ರಾಕಿಂಗ್ ಜೋಡಿ; ಅಭಿಮಾನಿಗಳಿಗೆ ಅದೊಂದೇ ಚಿಂತೆ!

  ನಿನ್ನೆ(ಆಗಸ್ಟ್ 05) ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಈ ಫೋಟೊಗಳನ್ನೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೊಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

  ರಾಧಿಕಾ ಪಂಡಿತ್ ಮನೆಯಲ್ಲಿ ಸಂಭ್ರಮ!

  ರಾಧಿಕಾ ಪಂಡಿತ್ ಮನೆಯಲ್ಲಿ ಸಂಭ್ರಮ!

  ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಪ್ರತಿಹಬ್ಬವನ್ನೂ ಆಚರಣೆ ಮಾಡುತ್ತಾರೆ. ಅದರಂತೆ ವರಮಹಾಲಕ್ಷ್ಮಿ ಹಬ್ಬವನ್ನೂ ರಾಧಿಕಾ ಪಂಡಿತ್ ಮಕ್ಕಳೊಂದಿಗೆ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಈ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೋಟೊಗಳಲ್ಲಿ ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ.

  ರಾಧಿಕಾಗೆ ಆಯ್ರಾ ಹೆಲ್ಪ್

  ರಾಧಿಕಾಗೆ ಆಯ್ರಾ ಹೆಲ್ಪ್

  ಆಗಸ್ಟ್ 5 ರಂದು ದೇಶದಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಲಾಗಿದೆ. ವರಮಹಾಲಕ್ಷ್ಮಿ ಹಬ್ಬವನ್ನು ಸಾಮಾನ್ಯವಾಗಿ ಎಲ್ಲಾ ಸೆಲೆಬ್ರೆಟ್ರಿಗಳು ಆಚರಣೆ ಮಾಡುತ್ತಾರೆ. ಹಾಗೇ ಪ್ರತಿ ವರ್ಷದಂತೆಯೇ ರಾಧಿಕಾ ಪಂಡಿತ್ ಮನೆಯಲ್ಲೂ ಹಬ್ಬ ಜೋರಾಗಿ ನಡೆದಿದೆ. ಅಮ್ಮನೊಂದಿಗೆ ಪುತ್ರಿ ಆಯ್ರಾ, ಪುತ್ರ ಯಥರ್ವ್​​ ಕೂಡ ಹಬ್ಬ ಆಚರಿಸಿದ್ದಾರೆ. ಅದರಲ್ಲೂ ಈ ಬಾರಿ ರಾಧಿಕಾ ಪಂಡಿತ್‌ಗೆ ಮಗಳು ಆಯ್ರಾ ಸಾಥ್ ನೀಡಿದ್ದಾರೆ. ಈ ಮಾತನ್ನು ಸ್ವತ: ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

  ಯಶ್ ಕಾಣಿಸುತ್ತಿಲ್ಲ ಎಲ್ಲಿ?

  ಯಶ್ ಕಾಣಿಸುತ್ತಿಲ್ಲ ಎಲ್ಲಿ?

  ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಆದರೆ, ಅವರೊಂದಿಗೆ ಯಶ್ ಮಾತ್ರ ಕಾಣಿಸುತ್ತಿಲ್ಲ. ಈ ಬಗ್ಗೆ ಅವರ ಅಭಿಮಾನಿಗಳು ತಮಾಷೆಯಾಗಿ ಕೇಳುತ್ತಿದ್ದಾರೆ. ಯಶ್ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರಾ? ಅಂತೆಲ್ಲಾ ಅನುಮಾನ ವ್ಯಕ್ತಪಡಿಸಿದ್ದಾರೆ. ಹೇಳಿ ಕೇಳಿ ವರಮಹಾಲಕ್ಷ್ಮಿ ಹಬ್ಬ ಹೆಣ್ಣು ಮಕ್ಕಳ ಹಬ್ಬ ಹೀಗಾಗಿ ಈ ಪೋಟೊದಲ್ಲಿ ಯಶ್ ಮಿಸ್ಸಿಂಗ್ ಅಂತ ಅವರೇ ಹೇಳ್ತಿದ್ದಾರೆ.

  ಯಶ್ 19ನೇ ಸಿನಿಮಾ ಯಾವಾಗ?

  ಯಶ್ 19ನೇ ಸಿನಿಮಾ ಯಾವಾಗ?

  ರಾಕಿ ಭಾಯ್ 19ನೇ ಸಿನಿಮಾಗಾಗಿ ಎಲ್ಲರೂ ಕಾದು ಕೂತಿದ್ದಾರೆ. 'ಕೆಜಿಎಫ್ 2' 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಮಫ್ತಿ ನಿರ್ದೇಶಕ ನರ್ತನ್ ಜೊತೆ ಮುಂದಿನ ಸಿನಿಮಾ ಎಂದು ನಂಬಲಾಗಿತ್ತು. ಆದ್ರೀಗ ಪೋಸ್ಟ್ ಪೋನ್ ಆಗಿರೋದ್ರಿಂದ ಮುಂದಿನ ಸಿನಿಮಾ ಯಾವುದು? ಅನ್ನೋ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ. ಸದ್ಯಕ್ಕಿರೋ ಮಾಹಿತಿ ಪ್ರಕಾರ, ಯಶ್ ಹುಟ್ಟುಹಬ್ಬಕ್ಕೆ ಮುಂದಿನ ಸಿನಿಮಾ ಅನೌನ್ಸ್ ಆಗಲಿದೆ ಎನ್ನಲಾಗಿದೆ.

  Recommended Video

  ನವೆಂಬರ್ 1ಕ್ಕೆ ಕರುನಾಡಿ‌ನ ಪರಮಾತ್ಮನಿಗೆ ಕರ್ನಾಟಕ ರತ್ನ ಪ್ರಧಾನ | Puneeth Rajkumar | Basavaraj Bommai
  English summary
  Yash Wife Radhika Pandit Celebrated Varamahalakshmi With Her Kids, Know More.
  Saturday, August 6, 2022, 17:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X