For Quick Alerts
  ALLOW NOTIFICATIONS  
  For Daily Alerts

  ಸಿಹಿ ಮಾತುಗಳ ಮೂಲಕ ರಾಧಿಕಾಗೆ ವಿಶ್ ಮಾಡಿದ ಯಶ್

  |

  ನಟಿ ರಾಧಿಕಾ ಪಂಡಿತ್ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಅಚರಣೆ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ನಟಿಗೆ ಪ್ರೀತಿಯ ಶುಭಾಶಯವನ್ನು ತಿಳಿಸಿದ್ದಾರೆ.

  ಯಾರು ಏನೇ ವಿಶ್ ಮಾಡಿದ್ದರು ರಾಧಿಕಾ ಮನಸು ಸಂತೃಪ್ತಿ ಆಗುವುದು ಪತಿ ಯಶ್ ಶುಭಾಶಯದಿಂದ. ಪತ್ನಿಯ ಬರ್ತ್ ಡೇ ಗೆ ಯಶ್ ತಮ್ಮ ಸಿಹಿ ಮಾತುಗಳ ಮೂಲಕ ಶುಭಾಶಯ ತಿಳಿಸಿದ್ದಾರೆ.

  ರಾಧಿಕಾ ಪಂಡಿತ್ ಬಿಟ್ಟು ಯಶ್ ಗೆ ಇಷ್ಟವಾಗಿದ್ದ ನಟಿ ಇವರಂತೆ.!

  ''ನಾನು ಜೀವನದಲ್ಲಿ ಏನನ್ನು ಹೊಂದಿದ್ದೇನೆ ಎಂಬ ಕಾರಣಕ್ಕೆ ನನ್ನ ಜೀವನ ಸುಂದರವಾಗಿಲ್ಲ. ಯಾರನ್ನು ನಾನು ಹೊಂದಿದ್ದೇನೆ ಎನ್ನುವ ಕಾರಣಕ್ಕೆ ನನ್ನ ಜೀವನ ಅದ್ಬುತವಾಗಿದೆ. ನೀನು ನನಗಾಗಿ ಹುಟ್ಟಿರುವವಳು ಎಂಬ ಭಾವನೆ ಮೂಡಿಸಿದಕ್ಕೆ ಧನ್ಯವಾದ. ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಗೆ.'' ಎಂದು ಟ್ವೀಟ್ ಮಾಡುವ ಮೂಲಕ ರಾಧಿಕಾಗೆ ಪ್ರೀತಿ ಮಾತುಗಳನ್ನು ಹೇಳಿದ್ದಾರೆ.

  ರಾಧಿಕಾ ಪಂಡಿತ್ ಈ ವರ್ಷ ತಮ್ಮ ಹುಟ್ಟುಹಬ್ಬದ ಆಚರಣೆ ಅಭಿಮಾನಿಗಳ ಜೊತೆಗೆ ಮಾಡಲಿಲ್ಲ. ನಿನ್ನೆ ಬೆಂಗಳೂರಿನಲ್ಲಿ ಇರದ ಕಾರಣ ಅಭಿಮಾನಿಗಳ ಜೊತೆಗೆ ಬರ್ತ್ ಡೇ ಆಚರಣೆ ಮಾಡಿಕೊಳ್ಳಲು ಸಾಧ್ಯ ಆಗುತ್ತಿಲ್ಲ ಎಂದು ರಾಧಿಕಾ ತಿಳಿಸಿದ್ದರು.

  ಗರ್ಭಿಣಿ ರಾಧಿಕಾ ಬಯಕೆ ಈಡೇರಿಸೋಕೆ ಯಶ್ ಮಾಡಿದ್ದೇನು.?

  ನಟಿ ರಾಧಿಕಾ ಪಂಡಿತ್ ಸದ್ಯ 'ಆದಿಲಕ್ಷ್ಮಿ ಪುರಾಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದು, ಪ್ರಿಯಾ ನಿರ್ದೇಶನವಿದೆ. ನಿರೂಪ್ ಭಂಡಾರಿ ಸಿನಿಮಾದ ನಾಯಕ.

  English summary
  Kannada actor Yash wishes for his wife, Actress Radhika Pandit birthday. Yash tweets about Radhika and shared his love with sweet words.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X