Don't Miss!
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- News
Iran Earthquake: ವಾಯುವ್ಯ ಇರಾನ್ನಲ್ಲಿ ಭೂಕಂಪನ; 7 ಸಾವು, 400 ಕ್ಕೂ ಹೆಚ್ಚು ಗಾಯಾಳು
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅದಿತಿ ಪ್ರಭುದೇವ ನೋಡಿ ಕರಗಿಹೋಗಿದ್ದ ಕಾಫಿನಾಡಿನ ಹುಡುಗ: ಮದುವೆಗೆ 'ಪರ್ಫೆಕ್ಟ್ ಗರ್ಲ್' ಒಪ್ಪಿಸಿದ್ದೇಗೆ?
ಕನ್ನಡ ಚಿತ್ರರಂಗದ ಕ್ಯೂಟ್ ಗರ್ಲ್ ಅಂಡ್ ಚಾರ್ಮಿಂಗ್ ಗರ್ಲ್ ಅಂದರೆ ಅದು ಅದಿತಿ ಪ್ರಭುದೇವ. ಸ್ಯಾಂಡಲ್‌ವುಡ್‌ನಲ್ಲಿ ಇವರಷ್ಟು ಬ್ಯುಸಿ ಇರೋ ನಟಿ ಮತ್ತೊಬ್ಬರಿಲ್ಲ. ಒಂದರ ಹಿಂದೊಂದು ಸಿನಿಮಾಗಳು ರಿಲೀಸ್ ಆಗುತ್ತಲೇ ಇವೆ. ಹೀಗೆ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅದಿತಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.
ಅದಿತಿ ಪ್ರಭುದೇವ ಹಾಗೂ ಕಾಫಿನಾಡಿನ ಹುಡುಗ ಯಶಸ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಎರಡೂ ಕುಟುಂಬದಲ್ಲೂ ಸಂಭ್ರಮ ಸಡಗರ ಮನೆ ಮಾಡಿದೆ. ಇಂದು (ನವೆಂಬರ್ 27) ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮವಿದ್ದು, ಅದಿತಿ ಮದುಮಗಳಾಗಿ ಮಿಂಚುತ್ತಿದ್ದಾರೆ.
ನಟಿ
ಅದಿತಿ
ವಿವಾಹ:
ಆಮಂತ್ರಣ
ಪತ್ರಿಕೆ
ಮೇಲೆ
ರಾರಾಜಿಸಿದ
ನಟಿಯ
ಕನ್ನಡ
ಪ್ರೇಮ
ದಾವಣಗೆರೆ ಮೂಲದ ಅದಿತಿ ಪ್ರಭುದೇವ ಹಾಗೂ ಕೊಡಗಿನ ಕುವರ ಯಶಸ್ ಇಬ್ಬರ ಸಂಬಂಧ ಕುದುರಿದ್ದು ಹೇಗೆ? ಇದು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್? ಯಾರು ಮೊದಲು ಮದುವೆಗೆ ಪ್ರಪೋಸ್ ಮಾಡಿದ್ದು? ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ.

ಅದಿತಿ ಪ್ರಭುದೇವ ವಿವಾಹ
ಹೆಚ್ಚು ಕಡಿಮೆ ಒಂದು ವರ್ಷದ ಹಿಂದೆ ಅದಿತಿ ಪ್ರಭುದೇವ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಕಾಫಿ ಬೆಳೆಗಾರ ಹಾಗೂ ಉದ್ಯಮಿ ಆಗಿರುವ ಯಶಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸುಳಿವೇ ನೀಡಿದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರಿಂದ ಅದಿತಿ ಪ್ರಭುದೇವ ಯಾವಾಗ ಮದುವೆ ಆಗುತ್ತಾರೆ? ಇದು ಲವ್ ಮ್ಯಾರೇಜ್ ಇರಬಹುದಾ? ಅಥವಾ ಅರೇಂಜ್ಡ್ ಮ್ಯಾರೇಜ್ ಆಗುತ್ತಿದ್ದಾರಾ? ಅನ್ನೋದು ಕುತೂಹಲ ಎಲ್ಲರನ್ನೂ ಇತ್ತು. ಅದಕ್ಕೆ ಒಂದು ವರ್ಷದ ಹಿಂದೆನೇ ತೆರೆ ಎಳೆದಿದ್ದರು. ಅಂತೆಯೇ ಈಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ನಾಳೆ (ನವೆಂಬರ್ 28) ವಿವಾಹವಾಗುತ್ತಿದ್ದಾರೆ.

'ಪರ್ಫೆಕ್ಟ್ ಗರ್ಲ್'ಗೆ ಕರಗಿದ್ದ ಕಾಫಿನಾಡಿನ ಹುಡುಗ!
ಎಲ್ಲರಿಗೂ ಈ ಸಂಬಂಧ ಕುದುರಿದ್ದು ಹೇಗೆ ಅನ್ನೋ ಕುತೂಹಲವಿತ್ತು. ದಾವಣಗೆರೆಯ ಹುಡುಗಿ ಅದಿತಿ ಪ್ರಭುದೇವಗೂ ಕೊಡಗಿನ ಕಾಫಿ ಬೆಳೆಗಾರನಿಗೂ ಲಿಂಕ್ ಸಿಕ್ಕಿದ್ದು ಹೇಗೆ? ಖಂಡಿತಾ ಇದು ಲವ್ ಮ್ಯಾರೇಜ್ ಇರುತ್ತೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ, ನಿಶ್ವಿತಾರ್ಥ ಮಾಡಿಕೊಂಡ ಬಳಿಕ ಅದಿತಿ ಪ್ರಭುದೇವ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಹಿರಿಯರು ನೋಡಿ ಒಪ್ಪಿದವರನ್ನೇ ವಿವಾಹವಾಗುತ್ತಿದ್ದೇನೆ ಎಂದು ಹೇಳಿದ್ದರು. ಆದರೆ, ಯಶಸ್ ನಟಿ ಅದಿತಿಯನ್ನು ಮದುವೆ ಆಗುವುದಕ್ಕೆ ಒಂದು ಅಲ್ಬಮ್ ಸಾಂಗ್ ಕಾರಣ. ಅದುವೇ 'ಪರ್ಫೆಕ್ಟ್ ಗರ್ಲ್'.

ಅದಿತಿ ಪೋಷಕರನ್ನು ಒಪ್ಪಿಸಿದ್ದ ಯಶಸ್
'ಪರ್ಫೆಕ್ಟ್ ಗರ್ಲ್' ಅಲ್ಬಮ್ ಸಾಂಗ್‌ನಲ್ಲಿ ಅದಿತಿ ಪ್ರಭುದೇವ ಮೂರು-ನಾಲ್ಕು ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡು ನೋಡಿದ ಬಳಿಕ ಯಶಸ್‌ಗೆ ಅದಿತಿ ಇಷ್ಟ ಆಗಿದ್ದರು. ಆಗಲೇ ತಮ್ಮ ಮನೆಯವರಿಗೆ ಯಶಸ್ ತಿಳಿಸಿದ್ದರು. ಅವರೂ ಕೂಡ ಮಗನ ಇಚ್ಚೆಯಂತೆ ವಿಚಾರಣೆ ಶುರು ಮಾಡಿದ್ದರು. ಆಗ ಅದಿತಿ ಮನೆಯಲ್ಲೂ ಗಂಡು ಹುಡುಕುತ್ತಿರೋದು ಗೊತ್ತಾಯಿತು. ಇರಡೂ ಕುಟುಂಬದವರು ಭೇಟಿ ಮಾಡಿ ಮಾತುಕತೆ ನಡೆಸಿದರು. ಆ ಬಳಿಕ ಯಶಸ್ ಹಾಗೂ ಅದಿತಿ ಇಬ್ಬರಿಗೂ ಒಬ್ಬರನ್ನೊಬ್ಬರು ಅರಿತಿಕೊಳ್ಳಲು ಬಿಟ್ಟಿದ್ದರು. ಆಗಲೇ ಅದಿತಿಗೆ ಕಾಫಿನಾಡಿನ ಹುಡುಗ ಇಷ್ಟ ಆಗಿಬಿಟ್ಟಿದ್ದ. ಹಾಗಾಗೇ ನಿಶ್ಚಿತಾರ್ಥ ಮಾಡಿ, ಮದುವೆಗೂ ನಿಶ್ಚಯ ಮಾಡಿದ್ದರು.

ಅದಿತಿ ಪ್ರಭುದೇವ ಗಾಳಿ ಸುದ್ದಿಗೆ ಸಿಲುಕಲಿಲ್ಲ
ಅದಿತಿ ಪ್ರಭುದೇವ ಹಾಗೂ ಯಶಸ್ ನಿಶ್ಚಯ ಮಾಡಿಕೊಳ್ಳುತ್ತಿದ್ದಂತೆ ತಮ್ಮ ಅಭಿಮಾನಿಗಳಿಗೆ ಹಾಗೂ ಮಾಧ್ಯಮಕ್ಕೆ ಸುದ್ದಿಯನ್ನು ಮುಟ್ಟಿಸಿದ್ದರು. ಮುಂದಿನ ದಿನಗಳಲ್ಲಿ ಇದು ಗೊತ್ತಾಗಿ ಅದಕ್ಕೆ ರೆಕ್ಕೆ ಪುಕ್ಕ ಬರಬಾರದು ಅನ್ನೋ ಕಾರಣಕ್ಕೆ ನಿಶ್ಚಿತಾರ್ಥ ಆದ ಕೂಡ ಹೇಳುತ್ತಿದ್ದೇವೆ ಎಂದು ಅದಿತಿ ಅಂದೇ ಹೇಳಿದ್ದರು. ಈಗ ಹೆಚ್ಚು ಕಡಿಮೆ ಒಂದು ವರ್ಷದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು (ನವೆಂಬರ್ 27) ಆರತಕ್ಷತೆ, ನಾಳೆ ನವೆಂಬರ್ 28) ಮದುವೆ ಅದ್ಧೂರಿಯಾಗಿ ಜರುಗಲಿದೆ.