»   » ಕಿನ್ನರಿ ಧಾರಾವಾಹಿ ನಾಯಕನ ವಿರುದ್ದ ಹಲ್ಲೆಯ ದೂರು ದಾಖಲು

ಕಿನ್ನರಿ ಧಾರಾವಾಹಿ ನಾಯಕನ ವಿರುದ್ದ ಹಲ್ಲೆಯ ದೂರು ದಾಖಲು

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರ ಆಗುವ ಕಿನ್ನರಿ ಸೀರಿಯಲ್ ನಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ನಟ ಕಿರಣ್ ರಾಜ್ ಮೇಲೆ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲದೆ ಹಿಂದಿ ಧಾರಾವಾಹಿಗಳಲ್ಲೂ ಗುರುತಿಸಿಕೊಂಡಿದ್ದಾರೆ. ಕಿನ್ನರಿ ಧಾರಾವಾಹಿಯಲ್ಲಿ ನಕುಲ್ ಪಾತ್ರದ ಮೂಲಕ ಗುರುತಿಸಿಕೊಂಡಿರುವ ಕಿರಣ್ ವಿರುದ್ದ ನಟಿ ಹಾಗೂ ಮಾಡೆಲ್ ಯಾಸ್ಮಿನ್ ಪಠಾಣ್ ಪೊಲೀಸರಿಗೆ ದೂರು ನೀಡಿದ್ದಾರೆ.

ಯಾಸ್ಮಿನ್ ಪಠಾಣ್ ಹಾಗೂ ಕಿರಣ್ ರಾಜ್ ಐದು ವರ್ಷಗಳಿಂದಲೂ ಪ್ರೇಮಿಗಳಾಗಿದ್ದರು ಅಷ್ಟೇ ಅಲ್ಲದೆ ಐದು ವರ್ಷ ಇಬ್ಬರು ಲೀವಿಂಗ್ ಟು ಗೆದರ್ ನಲ್ಲಿದ್ದರು. ಮಾರ್ಚ್ 26 ರಂದು ಇಬ್ಬರ ಮಧ್ಯೆ ಜಗಳವಾಗಿತ್ತು, ಇದೇ ಸಮಯದಲ್ಲಿ ಕಿರಣ್ ರಾಜ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯಾಸ್ಮಿನ್ ಪಟಾಣ್ ದೂರಿದ್ದಾರೆ.

ಕನ್ನಡಿಗರನ್ನು ವಿನಮ್ರವಾಗಿ ಕ್ಷಮೆ ಕೇಳಿದ ಭಂಡಾರಿ ಸಹೋದರರು

Yasmin Pathan lodged complaint against Actor Kiran Raj

ಐದು ವರ್ಷದಿಂದ ಪ್ರೀತಿಸುತ್ತಿದ್ದ ಇವರಿಬ್ಬರು ಮದುವೆ ಆಗುವುದಾಗಿಯೂ ನಿರ್ಧಾರ ಮಾಡಿದ್ದರು. ಯಾಸ್ಮಿನ್ ಪಠಾಣ್ ಪೊಲೀಸರಿಗೆ ದೂರು ನೀಡಿದ್ದ ಬೆನ್ನಲ್ಲೆ ನಟ ಕಿರಣ್ ರಾಜ್ ಕೂಡ ಯಾಸ್ಮಿನ್ ಪಟಾಣ್ ವಿರುದ್ದ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Yasmin Pathan lodged complaint against Actor Kiran Raj

ಸದ್ಯ ಆರ್ ಆರ್ ನಗರದ ಪೋಲಿಸರು ನಟ ಕಿರಣ್ ರಾಜ್ ಅವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ ಎನ್ನುವುದು ತನಿಖೆ ಮುಗಿದ ನಂತರ ಹೊರಬರಲಿದೆ. ಇತ್ತ ನಟಿ ಯಾಸ್ಮಿನ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಲ್ಲೆಯ ಪೋಟೋಗಳನ್ನ ಅಪ್ಲೋಡ್ ಮಾಡಿದ್ದಾರೆ.

English summary
A complaint was lodged at the Mumbai police station against Kannada serial actor Kiran Raj. Model-Actress Yasmin Pathan complained to the Mumbai police accusing Kiran Raj assaulting her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X