For Quick Alerts
ALLOW NOTIFICATIONS  
For Daily Alerts

  ಆಚಾರ್ಯ ಕಾಲೇಜು ಕ್ಯಾಂಪಸ್ ನಲ್ಲಿ ರೇವತಿ ನಕ್ಷತ್ರ

  By Rajendra
  |

  ಕನ್ನಡದ 'ಇದು ಸಾಧ್ಯ' ಹಾಗೂ 'ನಿಶ್ಯಬ್ಧ' ಚಿತ್ರಗಳಲ್ಲಿ ಅಭಿನಯಿಸಿರುವ ಬಹುಭಾಷಾ ತಾರೆ ರೇವತಿ ಅವರು ಬೆಂಗಳೂರಿನ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿಯಾದ ಕ್ಷಣವಿದು. ಬೆಂಗಳೂರಿನ ಆಚಾರ್ಯ ಪದವಿ ಕಾಲೇಜಿಗೆ ಅವರು ಇತ್ತೀಚೆಗೆ ಭೇಟಿ ನೀಡಿದ್ದರು.

  ವಿದ್ಯಾರ್ಥಿಗಳೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಸರಳ, ಮುಗ್ಧ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರಿಸಿದರು. ಬಹಳಷ್ಟು ವಿದ್ಯಾರ್ಥಿಗಳು ಅವರು ಕೊಟ್ಟಂತಹ ಉತ್ತರಗಳಿಂದ ಉತ್ತೇಜಿತರಾದರು. ಅವರಂತೆ ತಾವೂ ಕಲಾವಿದರಾಗಬೇಕೆಂದು ಆಸೆಪಟ್ಟರು. ರೇವತಿ ಅವರಿಂದ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ಸಂಭ್ರಮಿಸಿದರು.

  ಬಹಳಷ್ಟು ಮಂದಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ರೇವತಿ ಅವರು ಸಂಯಮದಿಂದಲೇ ಉತ್ತರಿಸಿದರು. ಬೆಳ್ಳಿತೆರೆಯ ಮೇಲೆ ರೇವತಿ ಅವರು ತಮ್ಮದೇ ಆದಂತಹ ಛಾಪು ಮೂಡಿಸಿದ ಕಲಾವಿದೆ. ಆದರೆ ಅವರಿಗೆ ಯಾವ ರೀತಿಯ ಚಿತ್ರಗಳು ಇಷ್ಟ ಎಂಬುದನ್ನು ಅವರ ಬಾಯಿಂದಲೇ ಕೇಳಿ ಕುತೂಹಲ ತಣಿಸಿಕೊಂಡರು. ಸ್ಲೈಡ್ ಗಳಲ್ಲಿ ನೋಡಿ ರೇವತಿ ಜೊತೆಗಿನ ಪ್ರಶ್ನೋತ್ತರ.

  ತಮಗೆ ಯಾವ ರೀತಿಯ ಚಿತ್ರಗಳೆಂದರೆ ಇಷ್ಟ?

  ರೇವತಿ ಅವರು ಮಾತನಾಡುತ್ತಾ, ತಮಗೆ ಜ್ವಲಂತ ಸಮಸ್ಯೆಗಳ ಕುರಿತ ಚಿತ್ರಗಳು ಇಷ್ಟ. ಹಾಗಂತ ಕೇವಲ ಸಾಮಾಜಿಕ ಸಮಸ್ಯೆಗಳ ಚಿತ್ರಗಳಷ್ಟೇ ಅಲ್ಲ, ಲವ್ ಸ್ಟೋರೀಸ್, ಸಾಂಸ್ಕೃತಿಕ ಚೌಕಟ್ಟಿನ ಹಾಗೂ ಭಾವನಾತ್ಮಕ ಚಿತ್ರಗಳೆಂದರೂ ತಮಗೆ ಇಷ್ಟ ಎಂದು ಹೇಳಿದರು.

  ಯಾವುದೇ ಪಾತ್ರವನ್ನು ಮರೆಯುವಂತಿರಬಾರದು

  ಯಾವುದೇ ಚಿತ್ರವನ್ನು ನೋಡಿದ ಬಳಿಕ ಪ್ರೇಕ್ಷಕರು ಒಂದಷ್ಟು ಏನಾದರೂ ಮನೆ ತನಕ ಕೊಂಡೊಯ್ಯುವಂತಿರಬೇಕು. ಆಗಷ್ಟೇ ಆ ಚಿತ್ರಕ್ಕೆ ಬೆಲೆ. ನನ್ನ ಚಿತ್ರಗಳಲ್ಲಿನ ಯಾವುದೇ ಪಾತ್ರವನ್ನು ಜನ ಮರೆಯುವುದು ನನಗೆ ಇಷ್ಟವಿಲ್ಲ ಎಂದರು.

  ಮಹಿಳಾ ಸಮಸ್ಯೆಗಳ ಬಗೆಗೆ ಹೆಚ್ಚು ಚಿತ್ರಗಳು ಬರಬೇಕು ಅಂತೀರಾ?

  ಈಗಾಗಲೆ ಸಾಕಷ್ಟು ಸಮಸ್ಯೆಗಳ ಬಗ್ಗೆ ಚರ್ಚೆಗಳಾಗಿವೆ, ಆಗುತ್ತಿವೆ. ಇದರ ಜೊತೆಗೆ ಇನ್ನಷ್ಟು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು.

  ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ

  ಎಚ್ ಐವಿ ಹಾಗೂ ಏಡ್ಸ್ ಕುರಿತು ಜಾಗೃತಿ ಮೂಡಿಸುತ್ತಿರುವ ಸಂಸ್ಥೆ ಜೊತೆ ತಾವೂ ಕೆಲಸ ಮಾಡುತ್ತಿದ್ದೇವೆ. ಇದರ ಪ್ರೇರಣೆಯಿಂದಲೇ ತಾವು 'ಫಿರ್ ಮಿಲೇಂಗೆ' ಎಂಬ ಚಿತ್ರ ಮಾಡಿದೆ. ಅದೇ ರೀತಿ 'Mitr, My friend' ಎಂಬ ಚಿತ್ರ ವಿದೇಶಗಳಲ್ಲಿರುವ ಬಹಳಷ್ಟು ಭಾರತೀಯರಿಗೆ ಪ್ರೇರಣೆಯಾಯಿತು. ಈ ತರಹದ್ದೇ ಸಮಸ್ಯೆ ಇಟ್ಟುಕೊಂಡು ಚಿತ್ರ ಮಾಡುವುದು ಅಷ್ಟು ಸೂಕ್ತವಲ್ಲ ಎಂಬುದು ತಮ್ಮ ಅಭಿಪ್ರಾಯ. ಅದು ಆ ಕ್ಷಣಕ್ಕೆ ಅನ್ನಿಸಬೇಕಷ್ಟೇ. ಇದು ನೋಡಿ ಕಲಿಯುಬೇಕಾದಂತಹದ್ದು.

  ತಾವೇಕೆ ಇಂಗ್ಲಿಷ್ ಚಿತ್ರವನ್ನು ನಿರ್ದೇಶಿಸಲು ಬಯಸಿದಿರಿ?

  ಬೇರೆ ಭಾಷೆಗಳಿಗೆ ಹೋಲಿಸಿದರೆ ತಮಗೆ ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಚೆನ್ನಾಗಿತ್ತು. ಇದಕ್ಕಿಂತಲೂ ಹೆಚ್ಚಾಗಿ ವಿದೇಶಗಳಲ್ಲಿ ನನಗೆ ಫ್ರೆಂಡ್ಸ್ ಜಾಸ್ತಿ. ಕನ್ನಡ, ಹಿಂದಿ ಅಥವಾ ಮಲಯಾಳಂನಲ್ಲಿ ಚಿತ್ರ ಮಾಡಿದರೆ ಅದು ಕೇವಲ ಆಯಾ ಭಾಷೆಗಷ್ಟೇ ಸೀಮಿತವಾಗುತ್ತದೆ. ಪ್ರಾದೇಶಿಕ ಚಿತ್ರ ಅನ್ನಿಸಿಕೊಳ್ಳುವುದಕ್ಕಿಂತಲೂ ಭಾರತೀಯ ಚಿತ್ರ ಮಾಡಬೇಕು ಅನ್ನಿಸಿತು. ಹಾಗಾಗಿ Mitr, My friend ಚಿತ್ರ ಮಾಡಿದೆ.

  ಈಗಿನ ಐಟಂ ಹಾಡುಗಳ ಬಗ್ಗೆ ತಮ್ಮ ಅನಿಸಿಕೆ?

  ನಾನು ಯಾರ ಬಗ್ಗೆಯೂ ತೀರ್ಪು ಕೊಡುವುದಿಲ್ಲ. ಎಲ್ಲರೂ ಮೋಹಕ ಮಹಿಳೆಯರೇ. ಅವರೆಲ್ಲಾ ತುಂಬಾ ಸೊಗಸಾಗಿ ಡಾನ್ಸ್ ಮಾಡುತ್ತಾರೆ. ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಯಾರು ಏನು ಮಾಡಿದರೂ ನನ್ನ ಅಭ್ಯಂತರವೇನು ಇಲ್ಲ. ಐಟಂ ಹಾಡುಗಳನ್ನು ಜನ ಇಷ್ಟಪಡುತ್ತಿದ್ದಾರೆ. ಇದಕ್ಕೆಂದೇ ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ. ಒಂದು ವೇಳೆ ನನಗೇನಾದರೂ ಅದೇ ರೀತಿಯ ಶೇಪ್ ಇದ್ದಿದ್ದರೆ ನಾನೂ ಐಟಂ ಡಾನ್ಸ್ ಮಾಡುತ್ತಿದ್ದೆ.

  ರೇವತಿ ಉತ್ತರಕ್ಕೆ ವಿದ್ಯಾರ್ಥಿಗಳು ಚಕಿತ

  ಐಟಂ ಹಾಡುಗಳ ಬಗೆಗಿನ ರೇವತಿ ಅವರ ಉತ್ತರಕ್ಕೆ ವಿದ್ಯಾರ್ಥಿಗಳು ಚಕಿತರಾದರು. ಎಲ್ಲರ ಪರವಾಗಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ಸಹರಾ ಶರ್ಮಾ ಹಾಗೂ ಮರೀತಾ ಜೇಸುದಾಸ್ ಸಂದರ್ಶಿಸಿದರು. ಸಹರಾ ಮಾತನಾಡುತ್ತಾ "ಮುಂದೆ ನಾನು ಚಿತ್ರರಂಗಕ್ಕೆ ಅಡಿಯಿಡಬೇಕೆಂದಿದ್ದೇನೆ. ರೇವತಿ ಅವರೇ ನನಗೆ ಸ್ಫೂರ್ತಿ. ತಮ್ಮ ಚಿತ್ರಗಳ ಮಹತ್ವ ಅವರಿಗೆ ಗೊತ್ತು. ತಮ್ಮ ಕೆಲದ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ. ಅವರೊಂದಿಗೆ ಕಳೆದ ಕ್ಷಣಗಳು ನಿಜಕ್ಕೂ ನಮ್ಮ ಪಾಲಿನ ಅದೃಷ್ಟ" ಎಂದಿದ್ದಾರೆ.

  English summary
  One of the classy actresses of Indian Cinema, the popular yesteryear heroine Revathi, who has acted in all south Indian languages as a star heroine recently visited Acharya Campus, Bangalore. Budding journos Sahara Sharma and Mareeta Jesudas , Dept. of Mass. Comm & Journalism interviewed the star and here is the insight.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more