»   » ಮತ್ತೆ 'ಮಳೆ'ಯಲ್ಲಿ ನೆನೆಯುತ್ತಾರಾ ಗಣಿ, ಭಟ್ರು..?

ಮತ್ತೆ 'ಮಳೆ'ಯಲ್ಲಿ ನೆನೆಯುತ್ತಾರಾ ಗಣಿ, ಭಟ್ರು..?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನ ಸೃಷ್ಟಿಸಿದ ಸಿನಿಮಾ 'ಮುಂಗಾರು ಮಳೆ'. ಕಾಮಿಡಿ ಟೈಮ್ ಗಣೇಶ್ ಗೆ ಗೋಲ್ಡನ್ ಸ್ಟಾರ್ ಪಟ್ಟವನ್ನ 'ಮುಂಗಾರು ಮಳೆ' ಮೂಲಕ ತಂದುಕೊಟ್ಟವರು ನಿರ್ದೇಶಕ ಯೋಗರಾಜ್ ಭಟ್. 'ಮುಂಗಾರು ಮಳೆ' ಮತ್ತು 'ಗಾಳಿಪಟ' ಚಿತ್ರಗಳಿಂದ ಗಾಂಧಿನಗರದಲ್ಲಿ ಕಮಾಲ್ ಮಾಡಿದ ಈ ಜೋಡಿ ಇದೀಗ ಹ್ಯಾಟ್ರಿಕ್ ಬಾರಿಸೋಕೆ ಸಜ್ಜಾಗುತ್ತಿದ್ದಾರೆ. [ಮುಂಗಾರು ಮಳೆ2]

ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಗಾಗಿ ಯೋಗರಾಜ್ ಭಟ್ ಸದ್ಯದಲ್ಲೇ ಚಿತ್ರವೊಂದನ್ನ ರೆಡಿಮಾಡಲಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ, ನಿರ್ದೇಶನ ಮತ್ತು ನಿರ್ಮಾಣದ ಹೊಣೆಯನ್ನ ಭಟ್ರು ವಹಿಸಿಕೊಳ್ಳಲಿದ್ದಾರೆ. ಹಾಗಂತ ಖುದ್ದು ಭಟ್ರೇ ಬಾಯ್ಬಿಟ್ಟಿದ್ದಾರೆ. ಹೇಳಿಕೇಳಿ ಯೋಗರಾಜ್ ಭಟ್ ಸಿನಿಮಾ ಮಾಡುತ್ತಿರುವುದರಿಂದ ಗಣೇಶ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. [ಗಣೇಶ್ ಬುಗುರಿ ಆಟ ಶುರು]

Yogaraj Bhat and Ganesh are back with the hattrick movie

ಆದರೆ, ರಿಯಾಲಿಟಿ ಶೋ 'ಸೂಪರ್ ಮಿನಿಟ್' ಸೇರಿದಂತೆ ಸ್ಟೈಲ್ ಕಿಂಗ್, ಝೂಮ್, ಬುಗುರಿ ಚಿತ್ರಗಳಲ್ಲೇ ಬಿಜಿಯಾಗಿರುವ ಗಣೇಶ್ ಅದೆಲ್ಲವೂ ಮುಗಿದ ಬಳಿಕ ಭಟ್ರ ಕ್ಯಾಂಪ್ ಗೆ ಮರಳುತ್ತಾರೆ. ಇನ್ನು ಭಟ್ರು ಕೂಡ 'ವಾಸ್ತುಪ್ರಕಾರ' ಎಲ್ಲಾ ಲೆಕ್ಕಾಚಾರ ಕ್ಲಿಯರ್ ಆದ್ಮೇಲೆ ಹೊಸ ಸಿನಿಮಾಗೆ ಚಾಲನೆ ನೀಡುವುದು. ಇದೆಲ್ಲವು ಆಗಬೇಕು ಅಂದ್ರೆ ಕನಿಷ್ಟ ಇನ್ನೂ ಒಂದು ವರ್ಷ ಬೇಕು. [ಭಟ್ರ ವಾಸ್ತುಪ್ರಕಾರ ಶುರು]

ಸದ್ಯಕ್ಕೆ ಭಟ್ರು ನಿರ್ದೇಶನದಲ್ಲಿ ಗಣಿ ಹೀರೋ ಅನ್ನುವುದನ್ನ ಬಿಟ್ರೆ, ಚಿತ್ರಕಥೆ ಇನ್ನೂ ರೆಡಿಯಾಗಿಲ್ಲ. ಗಣಿ ಮತ್ತೆ ಮಳೆಯಲ್ಲಿ ನೆನೆಯುತ್ತಾರಾ? ಗಣಿ ಜೊತೆ ನಾಯಕಿ ಯಾರು? ಮರಳಿ ಮನೋಮೂರ್ತಿಯನ್ನ ಭಟ್ರು ಕರೆತರ್ತಾರಾ? ಅನ್ನೋದನ್ನ ತಿಳಿದುಕೊಳ್ಳುವುದಕ್ಕೆ ಇನ್ನೂ ಸ್ವಲ್ಪ ದಿನ ಕಾಯಬೇಕು. (ಫಿಲ್ಮಿಬೀಟ್ ಕನ್ನಡ)

English summary
Yogaraj Bhat is planning to direct a movie for Golden star Ganesh..! This would be the hattrick movie of the duo. Yograj bhat himself will be producing and the movie will go on floors by next year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada