For Quick Alerts
  ALLOW NOTIFICATIONS  
  For Daily Alerts

  ಗಾಳಿಪಟ ಹಾರಿಸಲು ಜೋಗ್ ಫಾಲ್ಸ್ ಗೆ ಹೋದ ಯೋಗರಾಜ್ ಭಟ್ರು

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ರು 'ಪಂಚತಂತ್ರ' ಸಿನಿಮಾ ಸಕ್ಸಸ್ ನ ನಂತರ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶೃಂಗಾರದ ಹೊಂಗೆ ಮರ ಹೂ ಬಿಟ್ಟ ಮೇಲೆ ಭಟ್ರು ಈಗ ಗಾಳಿಪಟ ಹಾರಿಸಲು ತಯಾರಾಗಿದ್ದಾರೆ.

  'ಪಂಚತಂತ್ರ' ಸಿನಿಮಾ ರಿಲೀಸ್ ಆದ ನಂತರ ಭಟ್ರು ಮುಂಗಾರು ಮಳೆಗಾಗಿ ಕಾದು ಕುಳಿತ್ತಿದ್ರು. ಕಾರಣ ಭಟ್ರು 'ಗಾಳಿಪಟ-2' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರೀಕರಣ ಪ್ರಾರಂಭಿಸಲು ಮುಂಗಾರು ಮೆಳೆ ಬೇಕಂತೆ. ಹಾಗಾಗಿ ಭಟ್ರು ಕಾಯುತ್ತಿದ್ದ ಸಮಯ ಈಗ ಬಂದಿದೆ. ಮುಂಗಾರು ಶುರುವಾಗಿದೆ. ಅಂದ್ಮೇಲೆ ಭಟ್ರ ಸಿನಿಮಾ ಕೂಡ ಪ್ರಾರಂಭವಾಗಿದೆ.

  ಟಿವಿಯಲ್ಲಿ ಬರ್ತಿದೆ ಭಟ್ಟರ 'ಪಂಚತಂತ್ರ' ಸಿನಿಮಾ

  ಮುಂಗಾರು ಮಳೆಗೆಗೂ ಭಟ್ರಿಗೆ ಅವಿನಾಭಾವ ಸಂಬಂಧ. ಅದನ್ನ ವಿಶೇಷವಾಗಿ ಹೇಳ ಬೇಕಾಗಿಲ್ಲ. ಮಳೆಗಾಗಿ ಇಷ್ಟುದಿನ ಕಾದಿದ್ದ ಭಟ್ರು ತಂಡದವರ ಜೊತೆ ಸೀದಾ ಜೋಗ್ ಫಾಲ್ಸ್ ಗೆ ತೆರಳಿದ್ದಾರೆ. ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ನಲ್ಲಿ 'ಗಾಳಿಪಟ-2 'ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

  ಈಗಾಗಲೆ ಜೋಗ್ ಫಾಲ್ಸ್ ನಲ್ಲಿ ಚಿತ್ರತಂಡದ ಜೊತೆ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಲೊಕೇಶನ್ ಗಾಗಿ ಇತ್ತೀಚಿಗಷ್ಟೆ ವಿದೇಶ ಕೂಡ ಸುತ್ತಿಕೊಂಡು ಬಂದಿದ್ರು. ಈಗ ಜೋಗ್ ಫಾಲ್ಸ್ ಕಡೆ ಪಯಣ ಬೆಳೆಸಿದ್ದಾರೆ.

  ಅಂದ್ಹಾಗೆ ಚಿತ್ರದಲ್ಲಿ ಶರಣ್, ರಿಷಿ ಮತ್ತು ಪವನ್ ಕುಮಾರ್ ನಾಯಕನಾಗಿ ಮಿಂಚಲಿದ್ದಾರೆ. ಗಾಳಿಪಟ ಚಿತ್ರ 2008ರಲ್ಲಿ ತೆರೆಕಂಡಿತ್ತು. ಗಾಯಕ ರಾಜೇಶ್ ಕೃಷ್ಣನ್, ದಿಗಂತ್ ಮತ್ತು ಗಣೇಶ್ ಪ್ರಮುಕ ಪಾತ್ರದಲ್ಲಿ ಮಿಂಚಿದ್ದರು. ಆದ್ರೆ ಈ ಬಾರಿ ಸಂಪೂರ್ಣ ಹೊಸ ತಂಡದೊಂದಿಗೆ ಗಾಳಿಪಟ ಹಾರಿಸುತ್ತಿದ್ದಾರೆ.

  English summary
  Kannada famous Yogaraj Bhat's directorial venture Galipata-2 has started shooting. Shooting began at Jog Falls.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X