twitter
    For Quick Alerts
    ALLOW NOTIFICATIONS  
    For Daily Alerts

    'ಎಣ್ಣೆ ಪ್ರಿಯ'ರ ಉತ್ಸಾಹ ನೋಡಿ ಯೋಗರಾಜ್ ಭಟ್ಟರು ಬರೆದ ಹೊಸ ಹಾಡು

    |

    'ನಿಜವಾಗ್ಲು ಬಾರು ಗಂಡ್ಮಕ್ಳ ತವರು' ಎಂಬ ಕುಡುಕರ ಧ್ಯೇಯ ಗೀತೆ ಬರೆದವರು ಯೋಗರಾಜ್ ಭಟ್ಟರು. ಇತ್ತೀಚಿನ ಸಿನಿಮಾಗಳಲ್ಲಿ 'ಎಣ್ಣೆ'ಯ ಕುರಿತಾಗೊಂದು ಹಾಡು ಇರಲೇಬೇಕು ಮತ್ತು ಅದು ಯೋಗರಾಜ್ ಭಟ್ಟರ ಸಾಹಿತ್ಯದಲ್ಲಿ ಮೂಡಬೇಕು ಎನ್ನುವುದು ಅನೇಕ ನಿರ್ದೇಶಕರ ಬಯಕೆ. ಏಕೆಂದರೆ ಎಷ್ಟೋ ಸಿನಿಮಾಗಳ ಜನಪ್ರಿಯತೆಗೆ, ಪ್ರಚಾರಕ್ಕೆ ಈ ಹಾಡುಗಳೇ ಪ್ರಮುಖ ಅಸ್ತ್ರ.

    ಹಾಗಾಗಿ ಯೋಗರಾಜ್ ಭಟ್ಟರು ಬರೆಯುವ 'ಪಾನ ಸಾಹಿತ್ಯ'ಕ್ಕೆ ಭರ್ಜರಿ ಡಿಮ್ಯಾಂಡ್ ಇದೆ. ಮಧುಪ್ರಿಯರ ಬಾಯಲ್ಲಿ ಅವರ ಹಾಡುಗಳು ಸದಾ ನಲಿದಾಡುತ್ತಿರುತ್ತವೆ. ಕುಡುಕರ ಹಾಡಿನಲ್ಲಿಯೂ ತತ್ವಶಾಸ್ತ್ರದ ಅಂಶಗಳನ್ನು ಅದ್ಭುತ ಪದಪುಂಜಗಳ ಮೂಲಕ ಹೇಳಬಹುದು ಎಂಬುದನ್ನು ತೋರಿಸಿಕೊಟ್ಟವರು ಅವರು. ಲಾಕ್ ಡೌನ್ ಅವಧಿಯಲ್ಲಿ ಮದ್ಯ ಪ್ರೇಮಿಗಳಿಗೆ ಗುಂಡು ಹಾಕುವ ಅವಕಾಶವಿರಲಿಲ್ಲ. ಈಗ ಬಾರ್‌ಗಳು ತೆರೆದಿವೆ. ಜನರು ಕಿ.ಮೀ.ಗಟ್ಟಲೆ ಸರದಿಯಲ್ಲಿ ನಿಂತು ಬಾಟಲಿ ಖರೀದಿಸುತ್ತಿದ್ದಾರೆ. ಅದನ್ನು ಕಂಡು ಯೋಗರಾಜ್ ಭಟ್ಟರು ಪದ್ಯವೊಂದನ್ನು ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ...

    ದಾಕ್ಷಿಣ್ಯ, ಬಾಯಾರಿಕೆ

    ದಾಕ್ಷಿಣ್ಯ, ಬಾಯಾರಿಕೆ

    ರಸ್ತೆಗಳಲ್ಲಿ ಓಡಾಡುತ್ತಿದ್ದಾಗ ಬಾರ್‌ಗಳ ಮುಂದೆ, ವೈನ್ ಶಾಪ್‌ಗಳ ಮುಂದೆ ಮದ್ಯ ಪ್ರಿಯರು ಕ್ಯೂನಲ್ಲಿ ನಿಂತಿದ್ದು ಕಂಡೆ. ವಾಹನಗಳೆಲ್ಲ ನಿಧಾನ ಮಾಡಿ ಅವರನ್ನು ನೋಡುತ್ತಿದ್ದರು. ಅವರು ನಾಚಿಕೆಯಿಂದ ಮುಖ ಮುಚ್ಚಿಕೊಳ್ಳುತ್ತಿದ್ದರು. ಅವರ ಕಣ್ಣಲ್ಲಿ ನಾಚಿಕೆ, ದಾಕ್ಷಿಣ್ಯ, ಬಾಯಾರಿಕೆ, ಮೋಹ-ದಾಹ ಎಲ್ಲ ನೋಡಿ ಗುಲಾಂ ಅಲಿ ನೆನಪಾದರು ಎಂದು ಭಟ್ಟರು ಹೇಳಿದ್ದಾರೆ.

    ನಿತ್ಯೋತ್ಸವ ಕವಿಗೆ ಭಾವುಕ ಸಾಲುಗಳ ವಿದಾಯ ಹೇಳಿದ ಯೋಗರಾಜ್ ಭಟ್ನಿತ್ಯೋತ್ಸವ ಕವಿಗೆ ಭಾವುಕ ಸಾಲುಗಳ ವಿದಾಯ ಹೇಳಿದ ಯೋಗರಾಜ್ ಭಟ್

    ನೋಡಲಾಗಲಿಲ್ಲ ಬಾಯಾರಿದವರ ಬಾಧೆ

    ನೋಡಲಾಗಲಿಲ್ಲ ಬಾಯಾರಿದವರ ಬಾಧೆ

    ಈ ಸನ್ನಿವೇಶದಲ್ಲಿ ಗುಲಾಂ ಅಲಿ ಹಾಡಿದ ನನ್ನ ಬಹಳ ಇಷ್ಟದ ಹಾಡು ನೆನಪಾಯ್ತು. 'ಹಂಗಾಮಾ ಹೈ ಕ್ಯೂಂ ಬರ್ಪ' ಹಾಡನ್ನು ಅಕ್ಬರ್ ಅಲಹಾಬಾದಿ ಬರೆದಿದ್ದರು. ಮದ್ಯಪಾನ ಪ್ರಿಯರ ಕಣ್ಣುಗಳನ್ನು ನೋಡಿ ನನಗೆ ಏನೆನ್ನಿಸಿತೋ ಆ ಒಂದೆರಡು ಸಾಲು ಹಾಡಲೇಬೇಕು ಎನಿಸಿತು. 'ನೋಡಲಾಗಲಿಲ್ಲ ಬಾಯಾರಿದವರ ಬಾಧೆ' ಎಂದು ತಮ್ಮ ಹೊಸ ಪುಟ್ಟ ಪದ್ಯದ ಹುಟ್ಟಿನ ಕಾರಣವನ್ನು ಅವರು ಹೇಳಿಕೊಂಡಿದ್ದಾರೆ.

    ಬಾಯಾರಿದೆ ಬೈಬೇಡಿ, ಒಂಚೂರೇ ನಾ ಕುಡಿದಿರುವೆ

    ಬಾಯಾರಿದೆ ಬೈಬೇಡಿ, ಒಂಚೂರೇ ನಾ ಕುಡಿದಿರುವೆ

    'ಬಾಯಾರಿದೆ ಬೈಬೇಡಿ, ಒಂಚೂರೇ ನಾ ಕುಡಿದೆನು

    ಬಾಯಾರಿದೆ ಬೈಬೇಡಿ ಒಂಚೂರೇ ನಾ ಕುಡಿದಿರುವೆ

    ಡಕಾಯಿತಿ ಮಾಡಿಲ್ಲ, ಡಕಾಯಿತಿ ಮಾಡಿಲ್ಲ

    ಕೊಲೆ ಪಾತಕ ನಾನಲ್ಲ...

    ಬಾಯಾರಿದೆ ಬೈಬೇಡಿ, ಒಂಚೂರೇ ನಾ ಕುಡಿದಿರುವೆ

    ಒಂಚೂರೇ ನಾ ಕುಡಿದಿರುವೆ

    ನಾ ಕುಡಿದಿರುವೆ...'

    ಪುಣ್ಯಾತ್ ಗಿತ್ತಿಯ ಗಾಯನ!

    ಈ ಸಾಲನ್ನು ಸಂಗೀತ ಗೊತ್ತಿರುವವರಿಗೆ ಹಾಡಿಕೊಂಡರೆ ಮಜಾ ಸಿಗುತ್ತದೆ. ತುಂಬಾ ಅದ್ಭುತವಾದ ಹಾಡು. ಗುಲಾಂ ಅಲಿ ಅವರನ್ನು ನೆನಪಿಸಿದ ಪ್ರತಿಯೊಬ್ಬ ಮದ್ಯ ಪ್ರಿಯರಿಗೆ ನಮಸ್ತೆ ಎಂದಿರುವ ಭಟ್ಟರು, ತಮ್ಮ ಈ ಹಾಡಿನ ಸಾಹಿತ್ಯಕ್ಕೆ ಸುಂದರ ಪುಣ್ಯಾತ್ ಗಿತ್ತಿಯ ಗಾಯನವೇ ಕಾರಣ ಎಂದು 'ಹಂಗಾಮ ಹೈ ಕ್ಯೂಂ ಬರ್ಪಾ' ಹಾಡನ್ನು ಗಾಯಕಿಯೊಬ್ಬರು ಸುಂದರವಾಗಿ ಹಾಡಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

    English summary
    Director, writer Yogaraj Bhat has penned few lines about liquor lovers and remembering Ghulam Ali.
    Tuesday, May 5, 2020, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X