For Quick Alerts
  ALLOW NOTIFICATIONS  
  For Daily Alerts

  ವಿವಾದಕ್ಕೆ ಸಿಲುಕಿದ್ದ ಪದವಿ ಪೂರ್ವ: ಸನ್ ನೆಟ್‌ವರ್ಕ್‌ಗೆ ಭಾರೀ ಮೊತ್ತಕ್ಕೆ ಟಿವಿ, ಡಿಜಿಟಲ್ ಹಕ್ಕುಗಳು ಸೇಲ್

  |

  ಯೋಗರಾಜ್‌ ಭಟ್ ಹಾಗೂ ರವಿ ಶಾಮನೂರ್‌ ಜಂಟಿಯಾಗಿ ನಿರ್ಮಿಸಿದ್ದ 'ಪದವಿ ಪೂರ್ವ'. ಈ ಸಿನಿಮಾ ಬಿಡುಗಡೆಗೂ ಮುನ್ನ ಸ್ಯಾಟಲೈಟ್ ಹಾಗೂ ಓಟಿಟಿ ಖರೀದಿ ವಿಚಾರವಾಗಿ ವಿವಾದಕ್ಕೆ ಸಿಲುಕಿತ್ತು. ಇದೇ ವಿಚಾರ ಯೋಗರಾಜ್ ಭಟ್ ಹಾಗೂ ಜೀ ಕನ್ನಡದ ಬ್ಯುಸಿನೆಸ್ ಹೆಡ್‌ ರಾಘವೇಂದ್ರ ಹುಣಸೂರು ನಡುವೆ ವೈಮಸ್ಸಿಗೂ ಕಾರಣವಾಗಿತ್ತು.

  ಈ ಸಂಬಂಧ ಯೋಗರಾಜ್ ಭಟ್ ಆಡಿಯೋ ಲೀಕ್ ಆಗಿ ವೈರಲ್ ಆಗಿತ್ತು. ಈ ಆಡಿಯೋದಲ್ಲಿ 'ಪದವಿ ಪೂರ್ವ' ಸಿನಿಮಾದ ಸ್ಯಾಟಲೈಟ್ ಖರೀದಿಯಿಂದ ಹಿಂದೆ ಸರಿದಿದ್ದಾರೆಂದು ರಾಘವೇಂದ್ರ ಹುಣಸೂರು ವಿರುದ್ಧ ಗರಂ ಆಗಿದ್ದರು. ಈಗ ಇದೇ ಸಿನಿಮಾವನ್ನು ಬೇರೆ ಮನರಂಜನಾ ವಾಹಿನಿ ಖರೀದಿ ಮಾಡಿದೆ.

  ಯೋಗರಾಜ್‌ ಭಟ್‌ರ 'ಗರಡಿ' ಮುಕ್ತಾಯ: ಇನ್ನೇನಿದ್ರೂ ಥಿಯೇಟರ್‌ನಲ್ಲೇ ಆಟ!ಯೋಗರಾಜ್‌ ಭಟ್‌ರ 'ಗರಡಿ' ಮುಕ್ತಾಯ: ಇನ್ನೇನಿದ್ರೂ ಥಿಯೇಟರ್‌ನಲ್ಲೇ ಆಟ!

  'ಪದವಿ ಪೂರ್ವ' ಸಿನಿಮಾ ಯೂತ್ ಸ್ಟೋರಿ, ನಿರ್ದೇಶನ, ಛಾಯಾಗ್ರಹಣ, ಹಾಡುಗಳಿಂದ ಸದ್ದು ಮಾಡಿತ್ತು. ಅಲ್ಲದೆ ಹೊಸ ಪ್ರತಿಭೆಗಳ ನಟನೆಯಿಂದಾನೂ ಹದಿಹರೆಯದ ವಯಸ್ಸಿನ ಹುಡುಗ ಹುಡುಗಿಯರ ಮನಸ್ಸು ಗೆದ್ದಿದ್ದರು. ಸದ್ಯ ಈ ಸಿನಿಮಾ ಥಿಯೇಟರ್‌ಗಳಲ್ಲಿ ಮೂರನೇ ವಾರ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಸಿನಿಮಾದ ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳು ಮಾರಾಟ ಆಗಿದೆ.

  'ಪದವಿ ಪೂರ್ವ' ಸಿನಿಮಾದ ಕನ್ನಡ ಭಾಷೆಯ ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳನ್ನು ಒಂದೊಳ್ಳೆ ಮೊತ್ತಕ್ಕೆ ಖರೀದಿಯಾಗಿದೆ. ಉದಯ ಟಿವಿ ಮತ್ತು ಸನ್‌ನೆಕ್ಸ್ಟ್‌ ಟಿವಿ ಹಾಗೂ ಓಟಿಟಿ ಹಕ್ಕುಗಳನ್ನು ಖರೀದಿ ಮಾಡಿದೆ. ಹೊಸಬರ ಸಿನಿಮಾ ಸುಮಾರು 2 ಕೋಟಿ ರೂ. ಆಸುಪಾಸಿನಲ್ಲಿ ಸೇಲ್ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರ ಹಾಕಿಲ್ಲ. ಇದರೊಂದಿಗೆ ಕನ್ನಡ ಬಿಟ್ಟು ಬೇರೆ ಭಾಷೆಯ ಡಬ್ಬಿಂಗ್ ಮತ್ತು ರೀಮೇಕ್ ಹಕ್ಕುಗಳು ತಂಡದ ಬಳಿಯೇ ಇವೆ.

  ಈ ಸಿನಿಮಾದಲ್ಲಿ ಹೀರೊ ಆಗಿ ಪೃಥ್ವಿ ಶಾಮನೂರ್‌, ಹೀರೊಯಿನ್ ಆಗಿ ಅಂಜಲಿ ಅನಿಶ್‌ ಮತ್ತು ಯಶ ಶಿವಕುಮಾರ್‌ ನಟಿಸಿದ್ದಾರೆ. ಇವರೊಂದಿಗೆ ಶರತ್‌ ಲೋಹಿತಾಶ್ವ, ರಂಗಾಯಣ ರಘು, ಯೋಗರಾಜ್‌ ಭಟ್‌, ಅದಿತಿ ಪ್ರಭುದೇವ, ದಿವ್ಯ ಉರುಡುಗ, ಪ್ರಭು ಮುಂದ್‌ಕುರ್‌, ಶ್ರೀ ಮಹಾದೇವ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  Yogaraj Bhat Produced Padavi Poorva Movie Tv And Digital Rights Sold

  'ಪದವಿ ಪೂರ್ವ' ಸಿನಿಮಾವನ್ನು ಯೋಗರಾಜ್‌ ಭಟ್ ಗರಡಿಯಲ್ಲಿ ಪಳಗಿರುವ ಹರಿಪ್ರಸಾದ್‌ ಜಯಣ್ಣ ಚೊಚ್ಚಲ ಬಾರಿ ನಿರ್ದೇಶನ ಮಾಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ, ಯೋಗರಾಜ್‌ ಭಟ್‌ ಸಾಹಿತ್ಯದಿಂದ ಸಂಗೀತ ಪ್ರಿಯರ ಮನಗೆದ್ದಿವೆ. ಸಂತೋಷ್‌ ರೈ ಪಾತಾಜೆ ಕ್ಯಾಮರಾ ವರ್ಕ್ ಈ ಸಿನಿಮಾಗಿದೆ.

  English summary
  Yogaraj Bhat Produced Padavi Poorva Movie Tv And Digital Rights Sold, Know More.
  Thursday, January 19, 2023, 23:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X